'ರಾಜ್ ವಿಷ್ಣು' ತೆರೆಗೆ ಬರಲು ಕೌಂಟ್‌ಡೌನ್ ಶುರು
ಸೂಪರ್ ಹಿಟ್ ಚಿತ್ರ 'ಅಧ್ಯಕ್ಷ' ಮೂಲಕ ಕನ್ನಡ ಸಿನಿ ಪ್ರಿಯರಿಗೆ ಸಖತ್ ಮನರಂಜನೆ ನೀಡಿದ ನಟ ಶರಣ್ ಮತ್ತು ಕಾಮಿಡಿ ಕಿಂಗ್ ಚಿಕ್ಕಣ್ಣ ಮತ್ತೆ ಒಂದೇ ಚಿತ್ರದಲ್ಲಿ ನಟಿಸಿರುವ 'ರಾಜ್ ವಿಷ್ಣು' ತೆರೆಮೇಲೆ ಬರಲು ಸಜ್ಜಾಗಿದೆ.
ಶರಣ್ ಮತ್ತು ಚಿಕ್ಕಣ್ಣ ಅಭಿನಯದ 'ರಾಜ್-ವಿಷ್ಣು' ಚಿತ್ರವು ಸೆನ್ಸಾರ್ ಮಂಡಳಿಯಿಂದ 'U/A' ಪ್ರಮಾಣ ಪತ್ರ ಸ್ವೀಕರಿಸಿದೆ. ಚಿತ್ರ ಬಿಡುಗಡೆ ದಿನಾಂಕ ಸಹ ಫಿಕ್ಸ್ ಆಗಿದ್ದು, ಆಗಸ್ಟ್ 4 ರಂದು ತೆರೆಗೆ ಬರಲಿದೆ. ಈ ಚಿತ್ರದ ಟ್ರೈಲರ್ ಗೆ ಈಗಾಗಲೇ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, 'ಅಧ್ಯಕ್ಷ' ಚಿತ್ರದಷ್ಟೇ ಇಬ್ಬರು ಮತ್ತೆ ಕಮಾಲ್ ಮಾಡುವ ಭರವಸೆ ಮೂಡಿಸಿದ್ದಾರೆ.

ಅಂದಹಾಗೆ 'ರಾಜ್ ವಿಷ್ಣು' ಚಿತ್ರ ತಮಿಳಿನ 'ರಜನಿ ಮುರುಗನ್' ಚಿತ್ರದ ರಿಮೇಕ್ ಸಿನಿಮಾ ಆಗಿದ್ದು, ಕನ್ನಡದ ಸ್ಟಾರ್ ನಿರ್ದೇಶಕರಲ್ಲಿ ಒಬ್ಬರಾದ ಕೆ.ಮಾದೇಶ್ ರವರು ಆಕ್ಷನ್ ಹೇಳಿದ್ದಾರೆ. ಜನಾರ್ಧನ್ ಮಹರ್ಷಿ ಚಿತ್ರಕಥೆ ಬರೆದಿದ್ದು, ರಾಜೇಶ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.
ಚಿತ್ರದಲ್ಲಿ ಮುಂಬೈ ಮೂಲದ ನಟಿ ವೈಭವಿ ನಾಯಕಿ ಆಗಿ ನಟಿಸಿದ್ದಾರೆ. ರೋರಿಂಗ್ ಸ್ಟಾರ್ ಶ್ರೀಮುರುಳಿ ಅತಿಥಿ ಪಾತ್ರವನ್ನ ನಿರ್ವಹಿಸಿದ್ದು ಉಳಿದಂತೆ ಸಾಧುಕೋಕಿಲಾ, ರವಿಶಂಕರ್, ವೀಣಾ ಸುಂದರ್, ಮಿಮಿಕ್ರಿ ಗೋಪಿ, ರಮೇಶ್ ಪಂಡಿತ್ ಮತ್ತು ಮುಂತಾದವರು ಅಭಿನಯಿಸಿದ್ದಾರೆ. ಚಿತ್ರದ ಹಾಡುಗಳಿಗೆ ಯೋಗರಾಜ್ ಭಟ್, ವಿ ನಾಗೇಂದ್ರ ಪ್ರಸಾದ್, ಕವಿರಾಜ್ ಅವರು ಸಾಹಿತ್ಯ ಬರೆದಿದ್ದಾರೆ. ರಾಮು ಎಂಟರ್ ಪ್ರೈಸಸ್ ಅಡಿಯಲ್ಲಿ ಚಿತ್ರ ನಿರ್ಮಾಣ ಮಾಡಲಾಗಿದೆ.


Click it and Unblock the Notifications











