'ರಾಜ್ ವಿಷ್ಣು' ಸಿನಿಮಾದ ರಿಲೀಸ್ ಡೇಟ್ ಫಿಕ್ಸ್ ಆಯ್ತು
ಶರಣ್ ಅಭಿನಯದ 'ರಾಜ್ ವಿಷ್ಣು' ಸಿನಿಮಾದ ಬಿಡುಗಡೆಯ ದಿನಾಂಕ ನಿಗದಿ ಆಗಿದೆ. ಸಿನಿಮಾವನ್ನು ಆಗಸ್ಟ್ 4ಕ್ಕೆ ರಿಲೀಸ್ ಮಾಡುವುದಕ್ಕೆ ಚಿತ್ರತಂಡ ತಯಾರಿ ಮಾಡಿಕೊಂಡಿದೆ. ಈಗಾಗಲೇ ಹಾಡುಗಳು ಮೂಲಕ ಈ ಸಿನಿಮಾ ಸಖತ್ ಸೌಂಡ್ ಮಾಡಿದೆ.
'ರಾಜ್ ವಿಷ್ಣು' ಸಿನಿಮಾ ತಮಿಳಿನ 'ರಜನಿ ಮುರಘನ್' ಚಿತ್ರದ ರಿಮೇಕ್ ಆಗಿದೆ. ಗಜ, ರಾಮ್, ಹುಡುಗರು, ಪವರ್ ಅಂತಹ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದ ನಿರ್ದೇಶಕ ಕೆ.ಮಾದೇಶ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಶರಣ್ ರಾಜ್ ಅಭಿಮಾನಿಯಾಗಿ ,ಚಿಕ್ಕಣ್ಣ ವಿಷ್ಣು ಅಭಿಮಾನಿಯಾಗಿ ಮಿಂಚಿದ್ದಾರೆ. ಚಿತ್ರದ ನಾಯಕಿಯಾಗಿ ವೈಭವಿ ಕಾಣಿಸಿಕೊಂಡಿದ್ದು, ವಿಶೇಷ ಪಾತ್ರದಲ್ಲಿ ನಟ ಶ್ರೀ ಮುರುಳಿ ಅಭಿನಯಿಸಿದ್ದಾರೆ.

ಅರ್ಜುನ್ ಜನ್ಯ ಚಿತ್ರಕ್ಕೆ ಸಂಗೀತ ನೀಡಿದ್ದು, ಒಂದು ಹಾಡು ರಾಜ್ ಮತ್ತು ವಿಷ್ಣು ಅವರ ಅಭಿಮಾನದ ಹಾಡಾಗಿದೆ. ರಾಮು ಫಿಲಂ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣವಾಗಿದ್ದು, ಚಿತ್ರ ಆಗಸ್ಟ್ 4ಕ್ಕೆ ರಿಲೀಸ್ ಆಗಲಿದೆ.
More from Filmibeat
English summary
Actor Sharan starrer Kannada Movie 'Raj Vishnu' is all set to release on August 4th all over Karnataka. The movie is directed by K.Madesh, features Vaibhavi, Chikkanna.


Click it and Unblock the Notifications











