»   » 'ರಾಜಕುಮಾರ' ಟೈಟಲ್ ನಲ್ಲಿ ಸಿನಿಮಾ, ಎಷ್ಟು ಸರಿ?

'ರಾಜಕುಮಾರ' ಟೈಟಲ್ ನಲ್ಲಿ ಸಿನಿಮಾ, ಎಷ್ಟು ಸರಿ?

By: ಜೀವನರಸಿಕ
Subscribe to Filmibeat Kannada

ರಾಜಕುಮಾರ ಅನ್ನೋ ಹೆಸರಿಗೆ ಅದರದ್ದೇ ಆದ ತೂಕವಿದೆ, ಮಹತ್ವವಿದೆ. ರಾಜಕುಮಾರ ಅಂದ್ರೆ ಅದೊಂದು ಹೆಸರಲ್ಲ ಕನ್ನಡದ ಮಟ್ಟಿಗೆ ಅದೊಂದು ಶಕ್ತಿ, ಭಕ್ತಿ, ಸಿನಿಮಾ ಲೋಕಕ್ಕೇ ಮುಕ್ತಿ ವಿಮೋಚನೆಯ ವಿದ್ಯುದಾಲಿಂಗನವಿದ್ದಂತೆ.

ಕನ್ನಡಿಗರ ಮೆಚ್ಚಿನ ರಾಜಕುಮಾರ ಎಂದೂ ಸೋತವರಲ್ಲ. ಅಣ್ಣಾವ್ರ ಅಭಿನಯಕ್ಕೆ ಶ್ರಮಕ್ಕೆ ಅಭಿಮಾನಿಗಳು ಅಷ್ಟೂ ಸಿನಿಮಾಗಳು ರಿಲೀಸಾದಾಗ್ಲೂ ಬಹುಪರಾಕು ಹಾಕಿದ್ದಾರೆ. ಇಂತಹಾ ರಾಜಕುಮಾರ ಅನ್ನೋ ಅಭೂತಪೂರ್ವ ಹಸರು ಒಂದು ಟೈಟಲ್ ಆದ್ರೆ ಹೇಗೆ? [ಪವರ್ ಸ್ಟಾರ್ ಅಭಿನಯದ ಹೊಸ ಚಿತ್ರಕ್ಕೆ 'ಅಣ್ಣಾವ್ರ' ಹೆಸರು]

ಟೈಟಲ್ ಡಾ. ರಾಜ್ ಕುಮಾರ್ ಅಂತ ಇಲ್ಲದಿರಬಹುದು. ಅಥವಾ ಮುತ್ತುರಾಜ ಅಂತಾನೂ ಅಲ್ಲದಿರಬಹುದು. ಅದೊಬ್ಬ ರಾಜನ ಪುತ್ರನ ಕಥೆಯೂ ಇರಬಹುದು. ಆದ್ರೆ ಆ ವ್ಯಕ್ತಿಯ ಘನತೆ ಗೌರವದ ಹೆಸರನ್ನ ಸಿನಿಮಾ ಟೈಟಲ್ಲಾಗಿ ಬಳಸೋದು ಎಷ್ಟು ಸೂಕ್ತ ಅಂತ ರಾಜ್ ಅಭಿಮಾನಿಗಳು ಪ್ರಶ್ನೆ ಎತ್ತುತ್ತಿದ್ದಾರೆ.

'Rajakumara' title became talking point

ಡಾ.ರಾಜ್ ಪುತ್ರರೇ ಆಗಿರಬಹುದು. ಅಂದ ಮಾತ್ರಕ್ಕೆ, ರಾಜ್ ಕುಟುಂಬದ ವ್ಯಕ್ತಿಯಾಗಿ ಉಳಿದಿಲ್ಲ, ರಾಜ್ಯದ ಸಾಂಸ್ಕೃತಿಕ ಪ್ರತಿನಿಧಿ, ಕನ್ನಡದ ಆತ್ಮಸಾಕ್ಷಿಯಂತಿರೋ ರಾಜಕುಮಾರ ಅನ್ನೋ ಹೆಸರನ್ನ ಸಿನಿಮಾ ಟೈಟಲ್ ಆಗಿ ಬಳಸದಿದ್ರೇ ಒಳ್ಳೆಯದು ಅಂತಿದ್ದಾರೆ ರಾಜ್ ಕಟ್ಟಾ ಅಭಿಮಾನಿಗಳು.

ರಾಜಕುಮಾರ ಅನ್ನೋ ಹೆಸರಿಟ್ಟು ಸಿನಿಮಾ ಚೆನ್ನಾಗಿ ಮೂಡಿ ಬರದಿದ್ರೆ ಅನ್ನೋ ಅನುಮಾನವೂ ಅಭಿಮಾನಿಗಳಿಗಿದೆ. ಇಂಥಹಾ ಎಲ್ಲಾ ಪ್ರಶ್ನೆಗಳಿರುವಾಗ ನಿರ್ದೇಶಕನೊಬ್ಬನಿಂದ ಈ ಟೈಟಲ್ ಗೆ ನ್ಯಾಯ ಒದಗಿಸೋಕಾಗದಿದ್ರೆ ಆ ಅವಮಾನವನ್ನ ಎಲ್ಲರೂ ಹೊರಬೇಕಾಗುತ್ತಲ್ವಾ?

ಅಂದಹಾಗೆ ಪುನೀತ್ ರಾಜ್ ಕುಮಾರ್ ಅವರ ಮುಂದಿನ ಚಿತ್ರಕ್ಕೆ ರಾಜಕುಮಾರ ಎಂದು ಹೆಸರಿಡಲಾಗಿದೆ. 'ಮಿಸ್ಟರ್ ಅಂಡ ಮಿಸಸ್ ರಾಮಾಚಾರಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವ ಸಂತೋಷ್ ಆನಂದರಾಮ್ ಅವರ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರಲಿದೆ.

ವಿಜಯ್ ಕಿರಗಂದೂರು ನಿರ್ಮಿಸುತ್ತಿರುವ ಚಿತ್ರ ಇದಾಗಿದ್ದು, ಚಿತ್ರದ ಶೀರ್ಷಿಕೆಯನ್ನು ಹೆಸರಾಂತ ನಿರ್ಮಾಪಕ ರಾಮು ಅವರು ಹದಿನೈದು ವರ್ಷಗಳ ಹಿಂದೆಯೇ ರಿಜಿಸ್ಟರ್ ಮಾಡಿಕೊಂಡಿದ್ದರಂತೆ. ಇದೀಗ ರಾಜಕುಮಾರ ಶೀರ್ಷಿಕೆಯನ್ನು ಪುನೀತ್ ಗಾಗಿ ಬಿಟ್ಟುಕೊಟ್ಟಿದ್ದಾರೆ.

English summary
Power Star Puneeth Rajkumar's next movie with 'Mr and Mrs Ramachari' fame director has been titled Rajakumara. Right away the title became a talking point in the Sandalwood film circuit. In general 'Rajakumara' means legendary actor Dr Rajkumar. But the question is how much justice will do the with this title?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada