For Quick Alerts
  ALLOW NOTIFICATIONS  
  For Daily Alerts

  ಬಯಲಾಯ್ತು ರಜನಿ ಹಿಮಾಲಯ ಪ್ರವಾಸದ ಗುಟ್ಟು

  By Pavithra
  |

  ಸೂಪರ್ ಸ್ಟಾರ್ ರಜನಿಕಾಂತ್ ಆಗಾಗ ಹಿಮಾಲಯಕ್ಕೆ ಹೋಗಿ ಧ್ಯಾನ ಮಾಡಿ ಬರುತ್ತಾರೆ. ವಿಶೇಷವಾಗಿ ತಮ್ಮ ಸಿನಿಮಾಗಳು ಬಿಡುಗಡೆ ಆಗುವ ಮುಂಚೆ ಹಾಗೂ ತಮ್ಮ ಜೀವನದಲ್ಲಿ ಪ್ರಮುಖ ನಿರ್ಧಾರಗಳನ್ನ ತೆಗೆದುಕೊಳ್ಳುವ ಮುಂಚೆ ರಜನಿ ಹಿಮಾಲಯಕ್ಕೆ ಭೇಟಿ ಕೊಡುತ್ತಾರೆ.

  ಕೆಲ ದಿನಗಳ ಹಿಂದೆ ಸ್ವತಃ ರಜನಿ ಅವರೇ ಹಿಮಾಲಯಕ್ಕೆ ಹೋಗುವುದಾಗಿ ತಿಳಿಸಿದ್ದು ಸದ್ಯ ರಜನಿ ಹಿಮಾಲಯದಲ್ಲಿ ತಮ್ಮ ಗುರುಗಳನ್ನ ಬೇಟಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ರಜನಿ ಯಾವ ಕಾರಣಕ್ಕೆ ಹಿಮಾಲಯಕ್ಕೆ ಭೇಟಿ ನೀಡುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ.

  ರಜನಿ ಜೊತೆ ಅಭಿನಯಿಸಿದ್ದ ನಾಯಿಯ ಬೆಲೆ ಇಷ್ಟೊಂದು ಕೋಟಿನಾ.!

  ಎಲ್ಲರಿಗೂ ತಿಳಿದಿರುವಂತೆ ರಜನಿ ರಾಜಕೀಯ ಪ್ರವೇಶ ಮಾಡುತ್ತಿದ್ದು ಜನಗಳ ಸೇವೆಯಲ್ಲಿ ಸಂಪೂರ್ಣ ತೊಡಗಿಸಿಕೊಳ್ಳುವ ಮೊದಲ ಹಿಮಾಲಯಕ್ಕೆ ಭೇಟಿ ನೀಡಿ ತಮ್ಮ ಗುರುಗಳಿಗೆ ನಿರ್ಧಾರವನ್ನು ತಿಳಿಸಿ ಆಶೀರ್ವಾದ ಪಡೆಯಲು ಸೂಪರ್ ಸ್ಟಾರ್ ಮುಂದಾಗಿದ್ದಾರೆ. ಅದರ ಜೊತೆಯಲ್ಲಿ ರಜನಿಕಾಂತ್ ಅಭಿನಯದ ಕಾಲಾ ಹಾಗೂ 2.0 ಚಿತ್ರಗಳು ಕೂಡ ಬಿಡುಗಡೆ ಆಗುತ್ತಿದೆ ಇದೇ ಹಿನ್ನಲೆಯಲ್ಲಿ ರಜನಿ ಪ್ರವಾಸ ಆರಂಭಿಸಿದ್ದಾರೆ.

  ಚೆನೈ ನಿಂದ ಪ್ರವಾಸಕ್ಕೆ ಹೊರಡುವಾಗ ತಮ್ಮ ಉದ್ದೇಶ ತಿಳಿಸದ ರಜನಿಕಾಂತ್ ಎರಡು ವಾರಗಳ ಕಾಲ ಹಿಮಾಲಯದಲ್ಲಿ ಇರುವುದಾಗಿ ಹೇಳಿದ್ದಾರೆ. ಭಾರತೀಯ ಯೋಗ ಸತ್ಸಂಗ ಸೊಸೈಟಿಯ ಶತಮಾನೋತ್ಸ ಕಾರ್ಯಕ್ರಮದಲ್ಲಿ ರಜನಿ ಭಾಗಿ ಆಗಲಿದ್ದಾರೆ ಎನ್ನುವ ಸುದ್ದಿ ಇದೆ.

  ಸಾಮಾಜಿಕ ಜಾಲತಾಣಗಳಲ್ಲಿ ರಜನಿಕಾಂತ್ ಹವಾ ಬಲು ಜೋರು

  English summary
  Actor Superstar Rajinikanth has visited Himalaya, Rajanikanth begins annual pilgrimage, to meditate in Himalayas before political Journey.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X