»   » ಸಾಹಿತ್ಯ ಸಮ್ಮೇಳನದಲ್ಲಿ ಕಾರ್ಯಕ್ರಮ ಬಹಿಷ್ಕರಿಸಿದ ಬಾಬು

ಸಾಹಿತ್ಯ ಸಮ್ಮೇಳನದಲ್ಲಿ ಕಾರ್ಯಕ್ರಮ ಬಹಿಷ್ಕರಿಸಿದ ಬಾಬು

Posted By: ಉದಯರವಿ
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ ಅಖಿಲ ಭಾರತ 81ನೇ ಕನ್ನಡ ಸಾಹಿತ್ಯ ಸಮ್ಮೇಳನ ಕೇವಲ ಸಾಹಿತ್ಯ ಪ್ರಿಯರಿಗಷ್ಟೇ ಅಲ್ಲದೆ ಚಲನಚಿತ್ರ ಪ್ರೇಮಿಗಳ ಜ್ಞಾನದಾಹ ತಣಿಸುವ ತಾಣವಾಗಬೇಕಿತ್ತು. ಆದರೆ ಸಮ್ಮೇಳನದಲ್ಲಿ ಚಲನಚಿತ್ರರಂಗವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.

  ಈ ಆರೋಪವನ್ನು ಮಾಡಿದವರು ಬೇರಾರು ಅಲ್ಲ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ವಿ.ರಾಜೇಂದ್ರ ಸಿಂಗ್ ಬಾಬು. ಕಾಟಾಚಾರಕ್ಕೆ ಇಲ್ಲಿ ವಿಚಾರಗೋಷ್ಠಿಗಳನ್ನು ನಡೆಸುತ್ತಿದ್ದಾರೆ. ಸೂಕ್ತ ರೀತಿಯ ವೇದಿಕೆಯನ್ನೂ ಚಲನಚಿತ್ರ ರಂಗಕ್ಕೆ ಕಲ್ಪಿಸದೆ ಅವಮಾನ ಮಾಡಲಾಗಿದೆ ಎಂದು ಕುಪಿತಗೊಂಡ ಅವರು ಕಾರ್ಯಕ್ರಮವನ್ನು ಬಹಿಷ್ಕರಿಸಿದ ಘಟನೆ ಸಮ್ಮೇಳನದ ಕೊನೆಯ ದಿನ ಮಂಗಳವಾರ (ಫೆ.3) ನಡೆದಿದೆ.

  Rajendra Singh Babu boycotts programme in Sahitya Sammelana

  ಅವರ ಜೊತೆಗೆ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯಕಾರಿ ಸಮಿತಿ ಸದಸ್ಯರು ಬಾಬು ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದಾರೆ. ಕನ್ನಡ ಚಲನಚಿತ್ರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಮಾನಾಂತರ ವೇದಿಕೆಯದ ಡಾ.ಗೊರೂರು ರಾಮಸ್ವಾಮಿ ಅಯ್ಯಂಗಾರ್ ವೇದಿಕೆಯಲ್ಲಿ ವಿಚಾರಗೋಷ್ಠಿ ಏರ್ಪಡಿಸಲಾಗಿತ್ತು. ಬೆಳಗ್ಗೆ 9.30ಕ್ಕೆ ಆರಂಭವಾಗಬೇಕಿದ್ದ ಕಾರ್ಯಕ್ರಮ ಸಾಕಷ್ಟು ತಡವಾದರೂ ಆರಂಭವಾಗಲಿಲ್ಲ.

  ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಬೇಕಾಗಿದ್ದ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಹಾಗೂ ಸಾಹಿತಿ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಹಿರಿಯ ನಟ ಶಿವರಾಂ, ಚಿತ್ರ ನಿರ್ದೇಶಕಿ ಸುಮನಾ ಕಿತ್ತೂರು, ಟಿ.ಎಸ್.ನಾಗಾಭರಣ, ಎನ್ ಆರ್ ನಂಜುಂಡೇಗೌಡ, ನಟ ವೈಜನಾಥ್ ಬಿರಾದಾರ ಮುಂತಾದರು ವೇದಿಕೆಗೆ ಆಗಮಿಸಿದರೂ ಗಾಯನ ಕಾರ್ಯಕ್ರಮ ನಡೆಯುತ್ತಲೇ ಇತ್ತು. [ಸಾಹಿತ್ಯ ಸಮ್ಮೇಳನದ ಫೋಟೋಗಳು]

  Rajendra Singh Babu boycotts programme in Sahitya Sammelana

  ಎಷ್ಟು ಸಮಯ ಸರಿದರೂ ವೇದಿಕೆಯನ್ನು ಚಲನಚಿತ್ರ ವಿಚಾರಗೊಷ್ಠಿಗೆ ಬಿಟ್ಟುಕೊಡದ ಕಾರಣ ಬೇಸರಗೊಂಡ ರಾಜೇಂದ್ರ ಸಿಂಗ್ ಬಾಬು ಮತ್ತಿತರು ಕಾರ್ಯಕ್ರಮವನ್ನು ಬಹಿಷ್ಕರಿಸಿದರು. ಮಾಧ್ಯಮಗಳೂಂದಿಗೆ ಬಾಬು ಮಾತನಾಡಿ, ತಮಗಾದ ಅವಮಾನವನ್ನು ಹೇಳಿಕೊಂಡರು.

  ಸಾಹಿತ್ಯದಷ್ಟೇ ಪ್ರಬಲ ಮಾಧ್ಯಮ ಚಲನಚಿತ್ರಕ್ಷೇತ್ರ. ಆದರೆ, ನಮಗೆ ಪ್ರಧಾನ ವೇದಿಕೆಯಲ್ಲಿ ಅವಕಾಶ ನೀಡದೆ, ಸಮಾನಾಂತರ ವೇದಿಕೆಯಲ್ಲಿ ಕಾಟಾಚಾರಕ್ಕೆಂಬಂತೆ ಅವಕಾಶ ನೀಡಲಾಗಿದ್ದನ್ನು ನಾವು ಖಂಡಿಸುತ್ತೇವೆ. ಮುಖ್ಯ ವೇದಿಕೆಯಲ್ಲಿ ಅವಕಾಶ ನೀಡಬೇಕು, ಇಲ್ಲದಿದ್ದರೆ ನಾವು ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿ ಅಲ್ಲಿಂದ ಎದ್ದು ಹೊರನಡೆದಿದ್ದಾರೆ.

  ಈ ವಿಚಾರಗೋಷ್ಠಿಯಲ್ಲಿ ಸಾಕಷ್ಟು ಪ್ರಮುಖ ವಿಚಾರಗಳನ್ನು ಚರ್ಚೆಗೆ ಕೈಗೆತ್ತಿಕೊಳ್ಳಲಾಗಿತ್ತು. ಆದರೆ ಅವೆಲ್ಲವನ್ನೂ ಬಿಟ್ಟು ಅನಗತ್ಯ ವಿಷಯಗಳನ್ನು ಗೋಷ್ಠಿಗೆ ಸೇರಿಸಿದ್ದಾರೆ. ಚಳವಳಿ, ಹೋರಾಟಗಳ ಸಂದರ್ಭಗಳಲ್ಲಿ ಚಿತ್ರರಂಗ ಭಾಗಿಯಾಗಲ್ಲ ಎಂದು ಆರೋಪಿಸುವವರು, ನಮ್ಮನ್ನು ಇಷ್ಟು ಕೆಟ್ಟದಾಗಿ ನಡೆಸಿಕೊಂಡರೆ, ನಾವು ಸಹಭಾಗಿತ್ವ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಾದರೂ ಹೇಗೆ ಎಂಬು ಬಾಬು ಬೇಸರ ತೋಡಿಕೊಂಡಿದ್ದಾರೆ.

  English summary
  Karnataka Chalanachitra Academy chief SV Rajendra Singh Babu on Tuesday boycotted a seminar programme on cinema in Shravanabelagola. He was in Shravanabelagola to inaugurate a a seminar programme on cinema in 81st Kannada Sahitya Sammelan. Babu alleges that, filmy area is totally neglected in the event.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more