»   » ರಜನಿಯ '2.0' ಟೀಸರ್ ಲೀಕ್: ಬಹುತೇಕ ದೃಶ್ಯಗಳು ಬಹಿರಂಗ

ರಜನಿಯ '2.0' ಟೀಸರ್ ಲೀಕ್: ಬಹುತೇಕ ದೃಶ್ಯಗಳು ಬಹಿರಂಗ

Posted By:
Subscribe to Filmibeat Kannada

ಸೂಪರ್ ಸ್ಟಾರ್ ರಜನಿಕಾಂತ್ ಗೆ ಮತ್ತೊಂದು ಕಹಿ ಅನುಭವ ಎದುರಾಗಿದೆ. ಇತ್ತೀಚಿಗೆಷ್ಟೇ ರಜನಿ ಅಭಿನಯದ 'ಕಾಲ' ಟೀಸರ್ ಲೀಕ್ ಆಗಿತ್ತು. ಅದರ ಬೆನ್ನಲ್ಲೆ ಈಗ ಮತ್ತೊಂದು ಎಡವಟ್ಟು ನಡೆದಿದೆ.

ಹೌದು, '2.0' ಚಿತ್ರದ ಟೀಸರ್ ಲೀಕ್ ಆಗಿದೆ. ಸುಮಾರು 1 ನಿಮಿಷಕ್ಕಿಂತ ಹೆಚ್ಚು ಸಮಯದ ಟೀಸರ್ ಸೋರಿಕೆಯಾಗಿದೆ. ಮೂಲಗಳ ಪ್ರಕಾರ ಇದು ಚಿತ್ರತಂಡವೇ ಸಿದ್ದಮಾಡಿದ್ದ ಅಧಿಕೃತ ಟೀಸರ್ ಎನ್ನಲಾಗಿದ್ದು, ಕಿಡಿಗೇಡಿಗಳು ಲೀಕ್ ಮಾಡಿದ್ದಾರೆ.

ಟೀಸರ್: 'ಕಬಾಲಿ'ಗಿಂತ ಜೋರಾಗಿದೆ 'ಕಾಲ'ನ ರೌಡಿಸಂ

ಇನ್ನು ಟೀಸರ್ ಪೂರ್ತಿಯಾಗಿ ಲೀಕ್ ಆಗಿದ್ದು, ನೋಡಿದ ಜನ ಸಖತ್ ಥ್ರಿಲ್ ಆಗಿದ್ದಾರೆ. ಯಾಕಂದ್ರೆ, '2.0' ಚಿತ್ರದ ದೃಶ್ಯ ವೈಭವ ನಿರೀಕ್ಷೆಗೆ ಮೀರುವಂತಿದೆ. ಹಾಲಿವುಡ್ ಚಿತ್ರವನ್ನೇ ಮೀರಿಸುವಂತಹ ಮೇಕಿಂಗ್ ಗಮನ ಸೆಳೆಯುತ್ತಿದೆ. ಇದನ್ನ ಹೇಳುವುದಕ್ಕಿಂತ ನೋಡುವುದು ಉತ್ತಮ. '2.0' ಚಿತ್ರದ ಟೀಸರ್ ನ ಹೈಲೈಟ್ಸ್ ಓದಿ.....

ತಲೈವಾ ಎಂಟ್ರಿ ಲೀಕ್

2.0 ಚಿತ್ರದಲ್ಲಿ ಸೂಪರ್ ರಜನಿಕಾಂತ್ ಅವರ ಎಂಟ್ರಿ ಹೇಗಿರಲಿದೆ ಎಂಬ ನಿರೀಕ್ಷೆ ಅಭಿಮಾನಿಗಳನ್ನ ಕಾಡುತ್ತಿತ್ತು. ಥಿಯೇಟರ್ ನಲ್ಲಿ ಆ ದೃಶ್ಯವನ್ನ ನೋಡಲು ಕಾದಿದ್ದರು. ಆದ್ರೆ, ಟೀಸರ್ ಲೀಕ್ ಆಗಿದ್ದು, ಅದಕ್ಕು ಮುಂಚೆಯೇ ತಲೈವಾ ಎಂಟ್ರಿ ಬಹಿರಂಗವಾಗಿದೆ.

ಚಿಟ್ಟಿ ಈಸ್ ಬ್ಯಾಕ್

ರೋಬೋ ಚಿತ್ರದಲ್ಲಿ ಗಮನ ಸೆಳೆದಿದ್ದ ಚಿಟ್ಟಿ ಪಾತ್ರ, ಈ ಚಿತ್ರದಲ್ಲೂ ಮುಂದುವರೆದಿದೆ. ಮೊದಲ ಭಾಗದಲ್ಲಿ ಚಿಟ್ಟಿಯ ಪಾತ್ರವನ್ನ ಕೊನೆಯಲ್ಲಿ ಕೊಲ್ಲಲಾಗಿತ್ತು. ಹೀಗಾಗಿ, ಸಜಹವಾಗಿ ಈ ಚಿತ್ರದಲ್ಲಿ ಚಿಟ್ಟಿ ಬರುತ್ತಾ ಎಂಬ ಕುತೂಹಲ ಕಾಡಿತ್ತು. ಈಗ ಲೀಕ್ ಆಗಿರುವ ದೃಶ್ಯದಲ್ಲಿ ಇದು ಹೊರಬಿದ್ದಿದೆ.

ಅದ್ಭುತ ಟೆಕ್ನಾಲಜಿ

ನಿರೀಕ್ಷೆಯಂತೆ '2.0 'ಚಿತ್ರದಲ್ಲಿ ತಂತ್ರಜ್ಞಾನ ಅದ್ಭುತವಾಗಿದೆ. ಹಾಲಿವುಡ್ ಚಿತ್ರಗಳನ್ನೇ ಮೀರಿಸುವಂತಹ ಮೇಕಿಂಗ್ ಗಮನ ಸೆಳೆಯುತ್ತಿದೆ.

'2.0' ಚಿತ್ರದ ಬಗ್ಗೆ ಅಕ್ಷಯ್ ಕುಮಾರ್ ಕೊಟ್ರು ಬ್ರೇಕಿಂಗ್ ನ್ಯೂಸ್.!

ಕಣ್ಮನ ಸೆಳೆಯುತ್ತಿದೆ ಗ್ರಾಫಿಕ್ಸ್

ಇನ್ನು ಚಿತ್ರದಲ್ಲಿ ಹೆಚ್ಚು ಗ್ರಾಫಿಕ್ಸ್ ಬಳಕೆಯಾಗಿರುವುದನ್ನ ಮರೆಯುವಂತಿಲ್ಲ. ವಿಚಿತ್ರ ಪಕ್ಷಿಯೊಂದು '2.0' ಚಿತ್ರದಲ್ಲಿ ಮೋಡಿ ಮಾಡುತ್ತಿದೆ. ಅದರ ಫಸ್ಟ್ ಲುಕ್ ಕೂಡ ಲೀಕ್ ಆಗಿರುವ ಟೀಸರ್ ನಲ್ಲಿ ಕಾಣಿಸಿದೆ.

ಯಾವಾಗ ಬಿಡುಗಡೆ.?

ಈಗಾಗಲೇ ಚಿತ್ರೀಕರಣ ಮುಗಿಸಿರುವ 2.0 ಚಿತ್ರ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ, ಬಹುಶಃ ಕೊನೆಯ ಹಂತದಲ್ಲಿದೆ. ನಿರೀಕ್ಷೆಯಂತೆ ಏಪ್ರಿಲ್ ತಿಂಗಳಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

'2.0', 'ಕಾಲ' ನಂತರ ರಜನಿಕಾಂತ್ ಕೊನೆಯ ಚಿತ್ರ ಘೋಷಣೆ

ಶಂಕರ್ ಸಾರಥ್ಯದಲ್ಲಿ ಸ್ಟಾರ್ ಕಲಾವಿದರು

ಶಂಕರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ರಜನಿಕಾಂತ್, ಅಕ್ಷಯ್ ಕುಮಾರ್, ಆಮಿ ಜಾಕ್ಸನ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಎ.ಆರ್ ರೆಹಮಾನ್ ಸಂಗೀತ ಮತ್ತು ಹಿನ್ನೆಲೆ ಸಂಗೀತ ನೀಡಿದ್ದಾರೆ.

ಮತ್ತೆ ಬದಲಾಯ್ತು ರಜನಿಕಾಂತ್ '2.0' ರಿಲೀಸ್ ದಿನಾಂಕ.!

ವಿಡಿಯೋ: 'ಹಾಲಿವುಡ್'ನ ಮೀರಿಸುವಂತೆ ಸಿದ್ದವಾಗಿದೆ '2.0' ಚಿತ್ರ

English summary
After the teaser of Rajinikanth's Kaala was leaked hours before it's official launch, earlier this week, the teaser of his much-anticipated sci-fi film 2.0 seems to have the same fate. A video of a minute and a half has been leaked on the internet which has gone viral within hours of its upload.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada