For Quick Alerts
  ALLOW NOTIFICATIONS  
  For Daily Alerts

  ಐಪಿಎಲ್ ಫೈನಲ್ ದಿನ ರಜನಿಕಾಂತ್ ಕೊಡ್ತಾರಂತೆ ಸರ್ಪ್ರೈಸ್.!

  By Bharath Kumar
  |
  ರಜನಿ ಅಭಿನಯದ 2 .0 ಸಿನಿಮಾ ಟ್ರೈಲರ್ ರಿಲೀಸ್ ಡೇಟ್ ಫಿಕ್ಸ್ ಆಯಿತು | Filmibeat Kannada

  10ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ ಕೊನೆಯ ಹಂತಕ್ಕೆ ಬಂದಿದೆ. ಚೆನ್ನೈ ಸೂಪರ್ ಕಿಂಗ್ಸ್ ಈಗಾಗಲೇ ಫೈನಲ್ ಗೆ ಲಗ್ಗೆಯಿಟ್ಟಿದೆ. ಹೈದ್ರಬಾದ್ ಮತ್ತು ಕೊಲ್ಕತ್ತಾ ನಡುವಿನ ಪಂದ್ಯದಲ್ಲಿ ಗೆದ್ದವರು ಚೆನ್ನೈ ವಿರುದ್ಧ ಫೈನಲ್ ನಲ್ಲಿ ಸೆಣಸಾಡಲಿದ್ದಾರೆ.

  ನಿಗದಿಯಂತೆ ಮೇ 27 ರಂದು ಭಾನುವಾರ ರಾತ್ರಿ 7 ಗಂಟೆಗೆ ಐಪಿಲ್ ಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯವನ್ನ ನೋಡಲು ಕಾಯುತ್ತಿರುವ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತು ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳಿಗೆ ಅದೇ ದಿನ, ಅದೇ ಸಮಯದಲ್ಲಿ ಸರ್ಪ್ರೈಸ್ ವೊಂದು ಸಿಗಲಿದೆ.

  ರಜನಿ 'ಕಾಲ'ಗೆ ಹಾಲಿವುಡ್ ಸಿನಿಮಾ ಚಾಲೆಂಜ್.!ರಜನಿ 'ಕಾಲ'ಗೆ ಹಾಲಿವುಡ್ ಸಿನಿಮಾ ಚಾಲೆಂಜ್.!

  ಹೌದು, ಫೈನಲ್ ಪಂದ್ಯಕ್ಕೂ ಮುನ್ನ '2.0' ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದೆ. ಅಧಿಕೃತವಾಗಿ ಹೇಳಿಲ್ಲವಾದರೂ, ಎಲ್ಲ ಪ್ಲ್ಯಾನ್ ಮಾಡಲಾಗಿದೆಯಂತೆ.

  ಇನ್ನು ಇದಕ್ಕೂ ಮುಂಚೆಯೇ ಮಾರ್ಚ್ ತಿಂಗಳಲ್ಲಿ '2.0' ಚಿತ್ರದ ಟೀಸರ್ ದುಬೈನಲ್ಲಿ ಲೀಕ್ ಆಗಿತ್ತು. ಒಂದು ನಿಮಷಕ್ಕೂ ಅಧಿಕ ಸಮಯವಿದ್ದ ಟೀಸರ್ ನ್ನ ಯಾರೋ ಕಿಡಿಗೇಡಿಗಳು ಮೊಬೈಲ್ ನಲ್ಲಿ ಸೆರೆಹಿಡಿದು ಲೀಕ್ ಮಾಡಿದ್ದರು.

  ರಜನಿ ಜೊತೆ ಅಭಿನಯಿಸಿದ್ದ ನಾಯಿಯ ಬೆಲೆ ಇಷ್ಟೊಂದು ಕೋಟಿನಾ.!ರಜನಿ ಜೊತೆ ಅಭಿನಯಿಸಿದ್ದ ನಾಯಿಯ ಬೆಲೆ ಇಷ್ಟೊಂದು ಕೋಟಿನಾ.!

  ಎಲ್ಲ ಅಂದುಕೊಂಡಂತೆ ಆಗಿದ್ದರೇ ಇಷ್ಟೊತ್ತಿಗಾಗಲೇ ಸಿನಿಮಾ ತೆರೆಕಾಣಬೇಕಿತ್ತು. ಆದ್ರೆ, ಪೊಸ್ಟ್ ಪ್ರೊಡಕ್ಷನ್ ಕೆಲಸದಿಂದ ಸಿನಿಮಾ ವಿಳಂಬವಾಗಿದೆ. ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅಭಿನಯದ ಈ ಚಿತ್ರವನ್ನ ಶಂಕರ್ ನಿರ್ದೇಶನ ಮಾಡಿದ್ದು, ಆಮಿ ಜಾಕ್ಸನ್ ಕೂಡ ನಟಿಸಿದ್ದಾರೆ.

  ಸುಮಾರು 400 ಕೋಟಿ ವೆಚ್ಚದಲ್ಲಿ ಈ ಸಿನಿಮಾ ತಯಾರಾಗಿದ್ದು, ಭಾರತೀಯ ಚಿತ್ರರಂಗದಲ್ಲೇ ಬಹುದೊಡ್ಡ ಪ್ರಾಜೆಕ್ಟ್ ಎನಿಸಿಕೊಂಡಿದೆ. ಎ.ಆರ್ ರೆಹಮಾನ್ ಸಂಗೀತ ನೀಡಿದ್ದು, ಇದೇ ವರ್ಷ ತೆರೆಗೆ ಬರಲಿದೆ.

  English summary
  Superstar Rajinikanth and director Shankar's highly anticipated magnum opus 2.O's teaser will be launched during the finals of the IPL 2018 which is going to be held on 27th May at 7 PM.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X