»   » 'ಲಿಂಗಾ ನೋಡುತ್ತ ಲಿಂಗೈಕ್ಯನಾದ' ರಜನಿ ಅಭಿಮಾನಿ

'ಲಿಂಗಾ ನೋಡುತ್ತ ಲಿಂಗೈಕ್ಯನಾದ' ರಜನಿ ಅಭಿಮಾನಿ

Posted By:
Subscribe to Filmibeat Kannada

ಕೊಯಂಬತ್ತೂರು, ಡಿ. 27: ತಮಿಳಿಗರು ರಜನಿಕಾಂತ್ ಎಂದರೆ ಜೀವ ಬಿಡ್ತಾರೆ ಎಂಬ ಮಾತು ರೂಢಿಯಲ್ಲಿದೆ. ಈ ಮಾತನ್ನು ಈಗ ತಮಿಳುನಾಡಿನ ಓರ್ವ ಕಟ್ಟರ್ ಅಭಿಮಾನಿ ಸತ್ಯ ಎಂದು ಸಾಬೀತುಪಡಿಸಿದ್ದಾನೆ.

ತನ್ನ ಆರಾಧ್ಯ ದೈವ ರಜನಿಕಾಂತ್‌ನ ಇತ್ತೀಚಿನ ಸಿನಿಮಾ 'ಲಿಂಗಾ' ವೀಕ್ಷಿಸಲು ಆಸ್ಪತ್ರೆಯಿಂದ ತಪ್ಪಿಸಿಕೊಂಡು ಬಂದಿದ್ದ ರೋಗಿಯೋರ್ವ ಶವವಾಗಿ ಪತ್ತೆಯಾಗಿದ್ದಾನೆ.

ಮೂತ್ರಪಿಂಡ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 56 ವರ್ಷ ವಯಸ್ಸಿನ ರಾಜೇಂದ್ರನ್ ಲಿಂಗಾ ನೋಡಲು ಹೋಗಿ ಲಿಂಗೈಕ್ಯನಾದ ಅಭಿಮಾನಿ. ತಮಿಳುನಾಡಿನ ಚೆಟ್ಟಿಪಲಯಂ ನಗರದ ನಿವಾಸಿಯಾಗಿದ್ದ ರಾಜೇಂದ್ರನ್ ಕೆಲವು ದಿನಗಳಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಅಭಿದಮನಿ ಚಿಕಿತ್ಸೆ ಪಡೆಯುತ್ತಿದ್ದ. ರಜನಿಕಾಂತ್‌ನ ಉತ್ಕಟ ಅಭಿಮಾನಿಯಾಗಿರುವ ಈತ ಲಿಂಗಾ ಚಿತ್ರ ವೀಕ್ಷಿಸಬೇಕೆಂದು ಇಚ್ಛೆ ವ್ಯಕ್ತಪಡಿಸಿದ್ದ. ಆದರೆ, ಆತನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಕಾರಣ ಆಸ್ಪತ್ರೆಯವರು ಒಪ್ಪಿಗೆ ಕೊಟ್ಟಿರಲಿಲ್ಲ. [ರಜನಿಕಾಂತ್ ಲಿಂಗಾ ವಿರುದ್ಧದ ಕೇಸ್ ರದ್ದು]

linga

ಆದರೆ, ಪಟ್ಟು ಬಿಡದ ರಾಜೇಂದ್ರನ್ ದೇಹಕ್ಕೆ ಅಳವಡಿಸಿದ್ದ ಡ್ರಿಪ್ ಟ್ಯೂಬ್ ಜೊತೆಗೇ ಸೆಕ್ಯುರಿಟಿ ಗಾರ್ಡ್‌ಗಳ ಕಣ್ಣು ತಪ್ಪಿಸಿ ಓಡಿಹೋದ. ಆಸ್ಪತ್ರೆಯಿಂದ ಒಂದು ಕಿಲೋ ಮೀಟರ್ ದೂರದಲ್ಲಿರುವ ರೈಲ್ವೆ ನಿಲ್ದಾಣದ ಹತ್ತಿರದ ಥಿಯೇಟರ್ ಒಂದರಲ್ಲಿ ಟಿಕೆಟ್ ಖರೀದಿಸುವಲ್ಲಿ ಯಶಸ್ವಿಯಾದ. [ರಜನಿಕಾಂತ್ ಗೆ ಹೈ ಕೋರ್ಟ್ ನೋಟಿಸ್]

ರಾಜೇಂದ್ರನ್ ತನ್ನ ಕೈಯಲ್ಲಿ ಪಾಪ್‌ಕಾರ್ನ್ ಮತ್ತು ಕೂಲ್ ಡ್ರಿಂಕ್ ಹಿಡಿದುಕೊಂಡು ಸಿನಿಮಾ ನೋಡುತ್ತಿದ್ದುದನ್ನೂ ಥಿಯೇಟರ್‌ನ ವ್ಯವಸ್ಥಾಪಕ ಗಮನಿಸಿದ್ದಾನೆ. ಆದರೆ, ಸಿನಿಮಾ ಮುಗಿದ ಮೇಲೆ ತನ್ನ ಸೀಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಶವ ಪಡೆದು ಆಸ್ಪತ್ರೆಗೆ ಸಾಗಿಸಿದ್ದಾರೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

English summary
A critically ailing fan of Rajnikanth escaped from a government hospital to watch his favorite star's newly-released film-Lingaa. Tragically, he was found dead in his seat with the intravenous drip-tube intact.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada