»   » ಗೋವಾ ಫಿಲಂ ಫೆಸ್ಟಿವಲ್ ಗೆ ಸೂಪರ್ ಸ್ಟಾರ್ ರಜನಿ

ಗೋವಾ ಫಿಲಂ ಫೆಸ್ಟಿವಲ್ ಗೆ ಸೂಪರ್ ಸ್ಟಾರ್ ರಜನಿ

Posted By:
Subscribe to Filmibeat Kannada

ಗೋವಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟಿಸಲು ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಆಹ್ವಾನ ನೀಡಲಾಗಿದೆ. ಆದರೆ ರಜನಿಕಾಂತ್ ಈ ಬಗ್ಗೆ ತಮ್ಮ ನಿಲುವನ್ನು ಇನ್ನೂ ಪ್ರಕಟಿಸಿಲ್ಲ.

ರಜನಿ ಅವರನ್ನು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಹ್ವಾನಿಸಲಾಗಿದೆ. ಅವರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂಬ ವಿಶ್ವಾಸ ನಮ್ಮದು ಎಂದಿದ್ದಾರೆ ಎಂಟರ್ ಟೈನ್ ಮೆಂಟ್ ಸೊಸೈಟಿ ಆಫ್ ಗೋವಾದ (ESG) ಉಪಾಧ್ಯಕ್ಷ ವಿಷ್ಣು ವಾಘ್.

Rajinikanth

ಇತ್ತೀಚೆಗೆ 'ಚೆನ್ನೈ ಎಕ್ಸ್ ಪ್ರೆಸ್' ಚಿತ್ರದ ಒಂದು ಹಾಡನ್ನು ರಜನಿಕಾಂತ್ ಅವರಿಗೆ ಸಮರ್ಪಿಸಿ ತಮ್ಮ ಗೌರವ ಸೂಚಿಸಿದ್ದರು ಶಾರುಖ್ ಖಾನ್. ಬಾಲಿವುಡ್ ತಾರೆ ಐಶ್ವರ್ಯಾ ರೈ ಜೊತೆಗೆ ಅಭಿನಯಿಸಿದ ಭಾರಿ ಬಜೆಟ್ ಚಿತ್ರ 'ಎಂಧಿರನ್' ಗೋವಾದಲ್ಲಿ ಚಿತ್ರೀಕರಿಸಲಾಗಿತ್ತು.

ಈ ಎಲ್ಲಾ ಹಿನ್ನೆಲೆಯಲ್ಲಿ ರಜನಿ ಅವರನ್ನು ಗೋವಾ ಚಲನಚಿತ್ರೋತ್ಸವಕ್ಕೆ ಆಹ್ವಾನಿಸಲಾಗಿದೆ. ರಜನಿ ಆಗಮಿಸುತ್ತಾರೋ ಇಲ್ಲವೋ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಈ ತಿಂಗಳಾಂತ್ಯದವರೆಗೆ ಕಾಯಲು ನಿರ್ಧರಿಸಿರುವುದಾಗಿ ವಾಘ್ ತಿಳಿಸಿದ್ದಾರೆ.

ಅಂದಹಾಗೆ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನವೆಂಬರ್ 20ರಂದು ನಡೆಯಲಿದೆ. 2004ರಿಂದಲೂ ಗೋವಾದಲ್ಲಿ ಚಲನಚಿತ್ರೋತ್ಸವ ನಡೆಯುತ್ತಿದೆ. ಕಳೆದ ಬಾರಿ ಅಕ್ಷಯ್ ಕುಮಾರ್ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿದ್ದರು. (ಏಜೆನ್ಸೀಸ್)

English summary
Superstar Rajinikanth has been invited to be the chief guest for the inaugural function of International Film Festival of India (IFFI) to be held in Goa in November, an organiser said. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada