»   » ರಜನಿಕಾಂತ್ ಗೆ '2.0' ಚಿತ್ರೀಕರಣದ ವೇಳೆ ಗಾಯ !

ರಜನಿಕಾಂತ್ ಗೆ '2.0' ಚಿತ್ರೀಕರಣದ ವೇಳೆ ಗಾಯ !

Posted By:
Subscribe to Filmibeat Kannada

ಸೂಪರ್ ಸ್ಟಾರ್ ರಜನಿಕಾಂತ್ ಅವರ ಕಾಲಿಗೆ ಗಾಯವಾಗಿದ್ದು, ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ರಜನಿ ಅಭಿನಯಿಸುತ್ತಿರುವ ಬಹುನಿರೀಕ್ಷೀತ '2.0' ಚಿತ್ರದ ಚಿತ್ರೀಕರಣದ ವೇಳೆ ರಜನಿಕಾಂತ್ ಗಾಯಗೊಂಡಿದ್ದು, ಅವರ ಬಲಗಾಲಿಗೆ ಪೆಟ್ಟಾಗಿತ್ತು.

ಪೂರ್ವ ಕರಾವಳಿ ರಸ್ತೆಯ ಕೆಳಂಬಕ್ಕಮ್ ಬಳಿ ನಿನ್ನೆ (ಡಿಸೆಂಬರ್ 3) ರಾತ್ರಿ 8 ಗಂಟೆಗೆ '2.0' ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ರಜನಿಕಾಂತ್ ಅವರು ಕೆಳಗೆ ಬಿದ್ದು, ಬಲಗಾಲಿಗೆ ಗಾಯವಾಗಿತ್ತು. ತಕ್ಷಣ ಅವರನ್ನ ಖಾಸಗಿ ಆಸ್ವತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದೆ. ರಜನಿ ಅವರ ಕಾಲಿಗೆ ಗಾಯವಾಗಿದ್ದು, ಚಿಕಿತ್ಸೆ ನೀಡಿ ರಾತ್ರಿಯೆ ಅವರನ್ನ ಮನೆಗೆ ಕಳುಹಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

Rajinikanth Injured in Shoot of 2.0 Movie

ಇನ್ನೂ ರಜನಿಕಾಂತ್ ಅವರು ಆಸ್ವತ್ರೆ ಸೇರಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಯಾಗಿತ್ತು. ತದ ನಂತರ ಖಾಸಗಿ ಮಾದ್ಯಮಗಳಿಗೆ ಪ್ರತಿಕ್ರಿಯಿಸಿದ ರಜನಿಕಾಂತ್ ಅವರ ಮ್ಯಾನಜರ್ ರಿಯಾಜ್ ಅಹ್ಮದ್, ''ರಜನಿಕಾಂತ್ ಅವರು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಕೇವಲ ಕಾಲಿಗೆ ಗಾಯ ಮಾತ್ರ ಆಗಿದೆ ಎಂದು ತಿಳಿಸಿದರು''

'2.0' ಚಿತ್ರವನ್ನ ಶಂಕರ್ ನಿರ್ದೇಶನ ಮಾಡುತ್ತಿದ್ದು, ರಜನಿಕಾಂತ್, ಅಕ್ಷಯ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

    English summary
    Actor Rajnikanth suffered a minor injury of the right knee while shooting for his latest movie 2.0.He was rushed to the Chettinad Hospital near Kelambakkam. An official in the hospital said ''The minor injury was dressed and he returned fine."

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada