»   » ಸೂಪರ್ ಸ್ಟಾರ್ ರಜನಿಕಾಂತ್ ಗೆ ಚೆನ್ನೈ ಕೋರ್ಟ್ ನಿಂದ ನೋಟಿಸ್

ಸೂಪರ್ ಸ್ಟಾರ್ ರಜನಿಕಾಂತ್ ಗೆ ಚೆನ್ನೈ ಕೋರ್ಟ್ ನಿಂದ ನೋಟಿಸ್

Posted By:
Subscribe to Filmibeat Kannada

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಕಾಲಾ ಕರಿಕಾಲನ್' ಚಿತ್ರಕ್ಕೆ ಸಂಕಷ್ಟ ಎದುರಾಗಿದೆ. ಇತ್ತೀಚೆಗಷ್ಟೇ ಚಿತ್ರದ ಟೈಟಲ್ ಮತ್ತು ಪೋಸ್ಟರ್ ಬಿಡುಗಡೆ ಮಾಡಿದ್ದ ಚಿತ್ರತಂಡದ ವಿರುದ್ದ ಅಷ್ಟರಲ್ಲೇ ಕೇಸ್ ದಾಖಲಾಗಿದೆ.

'ಕಬಾಲಿ' ಖ್ಯಾತಿಯ ಪಾ ರಂಜಿತ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ರಜನಿಕಾಂತ್ ಅಳಿಯ ಧನುಶ್ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಶೂಟಿಂಗ್ ಶುರು ಮಾಡಿರುವ ಚಿತ್ರಕ್ಕೆ ತಡೆ ನೀಡುವಂತೆ ಚೆನ್ನೈ ಕೋರ್ಟ್ ನಲ್ಲಿ ಪ್ರಕರಣ ದಾಖಲಾಗಿದೆ.

[ರಜನಿ 164ನೇ ಚಿತ್ರದ ಫಸ್ಟ್ ಲುಕ್: ಮತ್ತೆ 'ಡಾನ್' ಆದ ತಲೈವಾ.!]

ಅಷ್ಟಕ್ಕೂ, ರಜನಿಯ 'ಕಾಲಾ' ಚಿತ್ರದ ವಿರುದ್ದ ದಾಖಲಾದ ಕೇಸ್ ಏನು? ಯಾರು ದಾಖಲಿಸಿರುವುದು ಎಂಬ ಮಾಹಿತಿಗಾಗಿ ಮುಂದೆ ಓದಿ....

ಕಥೆ ಕದ್ದಿರುವ ಆರೋಪ

ರಜನಿಕಾಂತ್ ಅಭಿನಯಿಸುತ್ತಿರುವ ' 'ಕಾಲಾ ಕರಿಕಾಲನ್' ಚಿತ್ರದ ವಿರುದ್ಧ ಕೃತಿ ಚೌರ್ಯ ಆರೋಪ ಕೇಳಿ ಬಂದಿದ್ದು, ಕಥೆ ಮತ್ತು ಟೈಟಲ್ ಕದ್ದಿದ್ದಾರೆ ಎಂದು ಚೆನ್ನೈನ ನಿರ್ಮಾಪಕರೊಬ್ಬರು ಕೋರ್ಟ್ ಮೊರೆ ಹೋಗಿದ್ದಾರೆ.

ರಾಜಶೇಖರ್ ಎಂಬ ನಿರ್ಮಾಪಕನಿಂದ ದೂರು

'ಜಿಎಸ್ ಆರ್ ವಿನ್ ಮಿನ್ ಕ್ರಿಯೆಷನ್ಸ್' ಸಂಸ್ಥೆಯ ಮುಖ್ಯಸ್ಥ ರಾಜಶೇಖರ್ ರಜನಿಕಾಂತ್ 'ಕಾಲಾ' ಚಿತ್ರತಂಡದ ವಿರುದ್ಧ ದೂರು ದಾಖಲಿಸಿದ್ದಾರೆ. ವಿಚಾರಣೆ ನಡೆಸಿದ ಚೆನ್ನೈ ಸಿಟಿ ಸಿವಿಲ್ ಕೋರ್ಟ್ ರಜನಿಕಾಂತ್, ಪಾ ರಂಜಿತ್, ಧನುಶ್, ಹಾಗೂ ಸೌತ್ ಇಂಡಿಯಾ ಫಿಲ್ಮ್ ಚೇಂಬರ್ ಗೆ ನೋಟಿಸ್ ಜಾರಿಗೊಳಿಸಿದೆ.

ರಜನಿಕಾಂತ್ ಗೆ ಕಥೆ ಹೇಳಿದ್ದರಂತೆ!

ಈ ಮೊದಲು ನಿರ್ಮಾಪಕ ರಾಜಶೇಖರ್ ಚೋಳರ ರಾಜ ಕರಿಕಾಳನ್ ಬಗ್ಗೆ ಸಿನಿಮಾ ಮಾಡಲು ನಿರ್ಧರಿಸಿ, ಫಿಲ್ಮ್ ಚೇಂಬರ್ ನಲ್ಲಿ 'ಕರಿಕಾಲನ್' ಟೈಟಲ್ ರಿಜಿಸ್ಟಾರ್ ಮಾಡಿದ್ದರಂತೆ. ರಜನಿಕಾಂತ್ ಅವರನ್ನ ಭೇಟಿ ಮಾಡಿ ಕಥೆ ಕೂಡ ಹೇಳಿದ್ದರಂತೆ. ಆದ್ರೆ, ಶೂಟಿಂಗ್ ಬ್ಯುಸಿ ಶೆಡ್ಯೂಲ್ ನಲ್ಲಿದ್ದ ರಜನಿಕಾಂತ್ ಮುಂದೆ ಮಾಡೋಣ ಎಂದಿದ್ದರಂತೆ. ಆದ್ರೀಗ, ಅದೇ ಕಥೆ ಮತ್ತು ಟೈಟಲ್ ಇಟ್ಟು ಸಿನಿಮಾ ಮಾಡ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮುಂಬೈ ಅಂಡರ್ ವರ್ಲ್ಡ್ ಕಥೆ!

ರಾಜಶೇಖರ್ ಅವರ ಆರೋಪ ನಿರಾಕರಿಸಿದ ಧನುಶ್ ತಂಡ, ಇದು ಮುಂಬೈ ಅಂಡರ್ ವರ್ಲ್ಡ್ ಕುರಿತ ಕಥೆ. ಮುಂಬೈ ಭೂಗತ ಲೋಕದ ದೊರೆಯಾಗಿದ್ದ ಹಾಜಿ ಮಸ್ತಾನ್ ಜೀವನ ಆಧರಿಸಿದ ಸಿನಿಮಾ ಎಂದಿದ್ದಾರೆ.

ಅರ್ಧ ಶೂಟಿಂಗ್ ಕಂಪ್ಲೀಟ್!

ಈಗಾಗಲೇ ಮುಂಬೈ ನಲ್ಲಿ ಚಿತ್ರದ ಅರ್ಧ ಚಿತ್ರೀಕರಣ ಮುಗಿದಿದೆಯಂತೆ. ರಜನಿಕಾಂತ್ ಜೊತೆಗೆ ಹುಮಾ ಖುರೇಶಿ ನಾಯಕಿಯಾಗಿದ್ದು, ನಾನಾ ಪಟೇಕರ್, ಪಂಕಜ್ ತ್ರಪಾಠಿ ಸೇರಿದಂತೆ ಹಲವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರಂತೆ.

[ಚಿತ್ರಪಟ: ಮುಂಬೈನಲ್ಲಿ ಸದ್ದಿಲ್ಲದೆ ನಡೆಯುತ್ತಿದೆ ರಜನಿಯ 'ಕಾಲ ಕರಿಕಾಲನ್' ಚಿತ್ರೀಕರಣ]

English summary
A filmmaker Rajashekar has filed a petition against Rajinikanth's Kaala claiming that the title and story of the upcoming film belongs to him.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada