For Quick Alerts
  ALLOW NOTIFICATIONS  
  For Daily Alerts

  ರಜನಿ - ಮುರುಗದಾಸ್ ಜೋಡಿಯ ಹೊಸ ಚಿತ್ರದ ಫಸ್ಟ್ ಲುಕ್ ರಿಲೀಸ್

  |

  ಸೂಪರ್ ಸ್ಟಾರ್ ರಜನಿಕಾಂತ್ ಹೊಸ ಸಿನಿಮಾ ಶುರುವಾಗಿದೆ. ಈ ಹೊಸ ತಮಿಳು ಸಿನಿಮಾಗೆ 'ದರ್ಬಾರ್' ಎಂಬ ಹೆಸರನ್ನು ಇಡಲಾಗಿದ್ದು, ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ.

  'ದರ್ಬಾರ್' ರಜನಿಕಾಂತ್ ನಟನೆಯ 167ನೇ ಸಿನಿಮಾವಾಗಿದೆ. ಈ ಚಿತ್ರವನ್ನು ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಎ ಆರ್ ಮುರುಗದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಐಪಿಎಸ್ ಆಫೀಸರ್ ಪಾತ್ರದಲ್ಲಿ ತಲೈವಾ ಮಿಂಚಲಿದ್ದಾರೆ. ಚಿತ್ರದ ಮೊದಲನೇ ಪೋಸ್ಟರ್ ಅನ್ನು ಮುರುಗದಾಸ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

  ರಜನಿಕಾಂತ್ ನೆಚ್ಚಿನ ನಿರ್ದೇಶಕ ಮಹೇಂದ್ರನ್ ವಿಧಿವಶ

  ವಿಶೇಷ ಅಂದರೆ, ಇದೇ ಮೊದಲ ಬಾರಿಗೆ ಮುರುಗದಾಸ್ ಸ್ಟೈಲ್ ಕಿಂಗ್ ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರಜನಿಕಾಂತ್ ಈ ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. ಐಪಿಎಸ್ ಆಫೀಸರ್ ಹಾಗೂ ಸಾಮಾಜಿಕ ಕಾರ್ಯಕರ್ತನಾಗಿ ಎರಡು ಪಾತ್ರವನ್ನು ನಿಭಾಹಿಸುತ್ತಿದ್ದಾರೆ. ಈ ಹಿಂದೆಯೂ ಕೆಲ ಚಿತ್ರಗಳಲ್ಲಿ ರಜನಿ ಖಾಕಿ ಧರಿಸಿದ್ದರು.

  Lyca ಪ್ರೊಡಕ್ಷನ್ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ನಾಯಕಿಯಾಗಿ ನಯನತಾರ ಆಯ್ಕೆಯಾಗಿದ್ದಾರೆ. ಏಪ್ರಿಲ್ 10 ರಿಂದ ಸಿನಿಮಾ ಪ್ರಾರಂಭ ಆಗುತ್ತಿದೆ.

  ಸಂತೋಷ್ ಸಿವಾನ್ ಚಿತ್ರಕ್ಕೆ ಕ್ಯಾಮರಾ ಹಿಡಿಯುತ್ತಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ಇರಲಿದೆ. ಮುಂದಿನ ಪೊಂಗಲ್ ಗೆ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ.

  English summary
  Super star Rajinikanth's 167th movie 'Darbar first look out. The movie is directing by A R Murugadoss. Rajinikanth palying dual role in the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X