»   » ಕನ್ನಡದಲ್ಲೂ ರಾರಾಜಿಸುತ್ತಿದೆ ರಜನಿಯ 'ಕಬಾಲಿ' ಪೋಸ್ಟರ್

ಕನ್ನಡದಲ್ಲೂ ರಾರಾಜಿಸುತ್ತಿದೆ ರಜನಿಯ 'ಕಬಾಲಿ' ಪೋಸ್ಟರ್

Posted By: ಕುಸುಮ
Subscribe to Filmibeat Kannada

ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾ 'ಕಬಾಲಿ' ಜುಲೈ 15ಕ್ಕೆ ವಿಶ್ವದಾದ್ಯಂತ ತೆರೆಗೆ ಅಪ್ಪಳಿಸುತ್ತಿದೆ. ಈ ಸುದ್ದಿ ಕೇಳಿಯೇ ಅಕ್ಕಪಕ್ಕ ಬರೋಕೆ ತಯಾರಾಗಿದ್ದ ಸಿನಿಮಾಗಳು ತಡಬಡಾಯಿಸುತ್ತಿವೆ. ಈಗ ಅದಕ್ಕೆ ಪೂರ್ವಭಾವಿಯಾಗಿ ಕಬಾಲಿ ಪೋಸ್ಟರ್ ಕನ್ನಡದಲ್ಲಿ ಹೊರಬಂದಿದೆ. ಇದು ಸಂಪೂರ್ಣ ಕನ್ನಡದ ಪೋಸ್ಟರ್.

ಸಹಜವಾಗಿ ಪರಭಾಷಾ ಚಿತ್ರಗಳು ಆಯಾ ಭಾಷೆಯ ಟೈಟಲ್ ಡಿಸೈನ್ನಲ್ಲೇ ಪ್ರಚಾರ ಪಡೆದುಕೊಳ್ಳುತ್ತವೆ. ಜಾಹೀರಾತುದಾರರು ಕೂಡ ನಮ್ಮ ಬೆಂಗಳೂರಿನವರಿಗೆ ಎಲ್ಲ ಭಾಷೆಗಳೂ ಅರ್ಥ ಆಗ್ತವೆ ಅಂತ ಆಯಾ ಭಾಷೆಯ ಡಿಸೈನ್ಗಳನ್ನೇ ಪ್ರಚಾರ ಜಾಹೀರಾತಿಗೆ ಬಳಸೋದು ರೂಢಿಯಾಗಿತ್ತು.

ನಾವು ಕನ್ನಡಿಗರಲ್ವಾ? ಯಾವ ಭಾಷೆಯಲ್ಲಿ ಪೋಸ್ಟರ್ ಇದ್ದರೂ ಅರ್ಥ ಮಾಡಿಕೊಂಡು, ಗೊತ್ತಾಗದಿದ್ರೆ ಅವರಿವರನ್ನು ಕೇಳಿ ತಿಳಿದುಕೊಂಡಾದ್ರು ಸಿನಿಮಾ ನೋಡ್ತೇವೆ! ಆದರೂ ಇಲ್ಲಿನ ಹಂಚಿಕೆದಾರರು ದೊಡ್ಡಮನಸ್ಸು ಮಾಡಿ ಪೋಸ್ಟರನ್ನು ಕನ್ನಡದಲ್ಲಿ ಬಿಡುಗಡೆ ಮಾಡಿದ್ದಾರೆ. [ಕರ್ನಾಟಕದಲ್ಲಿ 'ಕಬಾಲಿ' ಗಿಂತ 'ನಾಗರಹಾವು' ಟ್ರೆಂಡಿಂಗ್.!]

Rajinikanth's Kabali poster released in Kannada

ಆದರೆ ಕಬಾಲಿ ಅಚ್ಚಕನ್ನಡದ ಪೋಸ್ಟರ್ ಈಗ ತಯಾರಾಗಿದೆ. ಕನ್ನಡ ಸಿನಿಮಾಗಳೇ ತಮ್ಮ ಪೋಸ್ಟರ್ನಲ್ಲಿ ಹೆಸರುಗಳನ್ನು ಅರ್ಧಂಬರ್ಧ ಇಂಗ್ಲಿಷ್ ಮಿಕ್ಸ್ ಮಾಡಿ ಬಳಸುವ ಈ ದಿನಗಳಲ್ಲಿ, ಕಬಾಲಿ ಕನ್ನಡ ಅಫೀಷಿಯಲ್ ಪೋಸ್ಟರ್ ನಿಜಕ್ಕೂ ಕನ್ನಡವನ್ನು ಖುಷಿಪಡಿಸುವಂತಿದೆ. ಈ ಚಿತ್ರವನ್ನು ರಾಕ್ಲೈನ್ ಪ್ರೊಡಕ್ಷನ್ಸ್ ರಾಜ್ಯಾದ್ಯಂತ ವಿತರಣೆ ಮಾಡುತ್ತಿದೆ.

ಈ ಬಾರಿ ವಿದೇಶಿ ಅಂಡರ್ವಲ್ಡ್ ಕಥೆಯನ್ನು ಭಾರತಕ್ಕೆ ಲಿಂಕ್ ಮಾಡಿ ಕಥೆ ಮಾಡಿದಂತಿರುವ ಪಾ ರಂಜಿತ್ ನಿರ್ದೇಶನದಲ್ಲಿ ಸಿನಿಮಾದ ಟೀಸರ್ಗಳು ಹೊರಬಂದಿದ್ದು, ರಜನಿ ಅಭಿಮಾನಿಗಳು ಟೀಸರ್ ಕಿಕ್ಗೇ ಹುಚ್ಚೆದ್ದು ಕುಣಿಯುತ್ತಿದ್ದಾರೆ. [ಸೂಪರ್ ಸ್ಟಾರ್ ರಜನಿ ಬಗ್ಗೆ ರಾಮ್ ಗೋಪಾಲ್ ವರ್ಮಾ ಮತ್ತೆ ಕಾಮೆಂಟ್.!]

ಚಿತ್ರಕ್ಕೆ ಜಿಗರ್ಥಂಡ, ಸೂಧುಕವ್ವುಂ ಖ್ಯಾತಿಯ ಸಂತೋಷ್ ನಾರಾಯಣ್ ಸಂಗೀತವಿದೆ. ಈಗಾಗಲೇ ಹೊರಬಂದಿರೋ ನಿರುಪ್ಪುಡಾ' ಮ್ಯೂಸಿಕ್ ಟೀಸರ್ ಯುಟ್ಯೂಬ್ನಲ್ಲಿ ಟ್ರೆಂಡಿಂಗ್ ಆಗಿದೆ. ಇನ್ನೇನಿದ್ರೂ ಕಬಾಲಿ ಬರೋದಷ್ಟೇ ಬಾಕಿ ಇದೆ. ['ಜಿಗರ್ ಥಂಡ' ಚಿತ್ರಕ್ಕೆ ಎಡಿಟಿಂಗ್ ಟಚ್ ಕೊಟ್ಟ ಕಿಚ್ಚ ಸುದೀಪ್]

ಇದೇ ತರದ ವಾತಾವರಣ 'ಬಾಹುಬಲಿ' ಬಿಡುಗಡೆಯಾದಾಗಲೂ ಕರ್ನಾಟಕದಲ್ಲಿತ್ತು. ಆದರೆ, ಅದೇ ಸಮಯದಲ್ಲಿ ಬಿಡುಗಡೆಯಾದ 'ರಂಗಿತರಂಗ' ಚಿತ್ರ 'ಬಾಹುಬಲಿ'ಯೆಂಬ ಬಿರುಗಾಳಿಯನ್ನು ಬದಿಗೆ ಸರಿಸಿ ಭರ್ಜರಿ ಪ್ರದರ್ಶನ ಕಂಡಿತ್ತು. ಕಬಾಲಿಗೆ ಟಕ್ಕರ್ ಕೊಡುವಂಥ ಕನ್ನಡ ಸಿನೆಮಾ ಬಿಡುಗಡೆಯಾಗಿ 'ರಂಗಿತರಂಗ' ಮಾಡಿದಂಥ ಮ್ಯಾಜಿಕ್ ಮಾಡಲಿ. [ಬಾಹುಬಲಿ ವಿರುದ್ಧ ರಂಗಿತರಂಗ ತಂಡದಿಂದ ದೂರು]

English summary
South India super star Rajinikanth's latest movie Kabali is hitting the silver screen on July 15, 2016. Usually other language movie release posters in their language only. But, Kabali distributors have released the Kabali poster in Kannada, to attract Kannada viewers.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada