For Quick Alerts
  ALLOW NOTIFICATIONS  
  For Daily Alerts

  ರಜನಿಕಾಂತ್ 'ಲಿಂಗಾ' ಟ್ರೇಲರ್ ನಲ್ಲಿ ಏನುಂಟು, ಏನಿಲ್ಲ.?

  By Harshitha
  |

  ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳು ಕಾಯ್ತಿದ್ದ ಕ್ಷಣ ಕಡೆಗೂ ಬಂದೇಬಿಟ್ಟಿದೆ. 'ಲಿಂಗಾ' ಚಿತ್ರ ಸೆಟ್ಟೇರಿದಾಗಿನಿಂದಲೂ 'ತಲೈವಾ' ಹೊಸ ರೂಪದ ದರ್ಶನಕ್ಕಾಗಿ ಎದುರು ನೋಡುತ್ತಿದ್ದ ಅಭಿಮಾನಿಗಳ ಕುತೂಹಲಕ್ಕೆ ಇಂದು ತೆರೆಬಿದ್ದಿದೆ. ರಜನಿ ಅಭಿನಯದ ಬಹುನಿರೀಕ್ಷಿತ 'ಲಿಂಗಾ' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.

  ಸೂಪರ್ ಆಗಿದೆ 'ಲಿಂಗಾ' ಟ್ರೇಲರ್

  ಹೊಸ ಅವತಾರದಲ್ಲಿ, ಸೂಪರ್ ಸ್ಟೈಲಿಶ್ ಆಗಿ, ರಜನಿ ಮಿಂಚಿರುವ 'ಲಿಂಗಾ' ಚಿತ್ರದ ಟ್ರೇಲರ್ ಸಖತ್ ಫ್ರೆಶ್ ಆಗಿದೆ. ಕೆಲ ದಿನಗಳ ಹಿಂದೆಯಷ್ಟೇ ರಿಲೀಸ್ ಆಗಿದ್ದ 'ಲಿಂಗಾ' ಚಿತ್ರದ ಟೀಸರ್ ನಲ್ಲಿ ರಜನಿ ವೇಷಭೂಷನವನ್ನ ಮಾತ್ರ ರಿವೀಲ್ ಮಾಡಿದ್ದ ಚಿತ್ರತಂಡ, ಇದೀಗ ಖಡಕ್ ಆಕ್ಷನ್ ಮತ್ತು ರಜನಿಯ ಪಂಚಿಂಗ್ ಡೈಲಾಗ್ಸ್ ಗಳಿಂದ ಸಿದ್ಧವಾಗಿರುವ ಟ್ರೇಲರ್ ನ ನಿಮ್ಮ ಮುಂದೆ ತಂದಿದೆ.

  ಆಕ್ಷನ್-ಥ್ರಿಲ್ಲರ್ ಸಿನಿಮಾ

  'ಲಿಂಗಾ' ಸಂಪೂರ್ಣ ಆಕ್ಷನ್-ಥ್ರಿಲ್ಲರ್ ಸಿನಿಮಾ ಅನ್ನೋದು ಟ್ರೇಲರ್ ನೋಡಿದ್ರೆ ಗೊತ್ತಾಗುತ್ತೆ. ಹಿಂದೆಂದಿಗಿಂದತೂ ಮೈನವಿರೇಳಿಸುವ ಸ್ಟಂಟ್ಸ್ ಮಾಡಿರೋ ರಜನಿ, ಅಭಿಮಾನಿಗಳ ದಿಲ್ ಖುಷ್ ಮಾಡಿದ್ದಾರೆ. 'ಎಂದಿರನ್' ಸಿನಿಮಾ ನಂತ್ರ ಮತ್ತೊಮ್ಮೆ ಟ್ರೇನ್ ನಲ್ಲಿ ಆಕ್ಷನ್ ಮಾಡಿರುವ ರಜನಿಗೆ ಸರಿಸಾಟಿ ಯಾರೂ ಇಲ್ಲ ಅನ್ನುವುದು 'ಲಿಂಗಾ' ಮೂಲಕ ಮತ್ತೆ ಪ್ರೂವ್ ಆಗಿದೆ. ['ಲಿಂಗಾ' ಚಿತ್ರಕ್ಕೆ ರಜನಿಕಾಂತ್ ಸಂಭಾವನೆ ಅಷ್ಟೊಂದಾ!]

  ರಜನಿ 'ಡಬಲ್' ಧಮಾಕಾ

  'ಲಿಂಗಾ' ಚಿತ್ರದ ಬಹುದೊಡ್ಡ ಸರ್ಪ್ರೈಸ್ ಅಂದ್ರೆ ಇದೆ. 'ಲಿಂಗಾ' ಚಿತ್ರದಲ್ಲಿ ರಜನಿ ಡಬಲ್ ರೋಲ್ ನಲ್ಲಿ ಕಾಣಿಸಿಕೊಳ್ತಿದ್ದಾರೆ. ಟ್ರೇಲರ್ ನಲ್ಲಿ ಸೂಟು, ಬೂಟು ತೊಟ್ಟು ಸ್ಟೈಲಿಶ್ ಆಗಿ ಕತ್ತಿಯನ್ನ ತಿರುಗಿಸುವ ರಜನಿ, 'ರಾಜಾ' ಮತ್ತು 'ಲಿಂಗೇಶ್ವರನ್' ಅನ್ನುವ ಎರಡು ಪಾತ್ರಗಳಲ್ಲಿ ಮಿಂಚಿದ್ದಾರೆ.

  ರಜಿನಿ ಸ್ಟೈಲ್

  'ಲಿಂಗಾ' ಹೇಳಿಕೇಳಿ ರಜನಿ ಸಿನಿಮಾ, ಅಂದ್ಮೇಲೆ ಚಿತ್ರದಲ್ಲಿ ರಜನಿ ಸ್ಟೈಲ್ ಇಲ್ಲ ಅಂದ್ರೆ ಹೇಗೆ..? ಸದ್ಯಕ್ಕೆ ಕ್ರಾಂತಿಕಾರಿ ರೂಪದಲ್ಲಿ ಪತ್ರಕರ್ತ 'ರಾಜಾ' ಅವತಾರವನ್ನ ಮಾತ್ರ ಅಭಿಮಾನಿಗಳ ಮುಂದೆ ತಂದಿರುವ ಚಿತ್ರತಂಡ, 'ಲಿಂಗೇಶ್ವರನ್' ಪಾತ್ರವನ್ನ ಇನ್ನೂ ಗುಟ್ಟಾಗಿಟ್ಟಿದೆ. [ರಜನಿಕಾಂತ್ 'ಲಿಂಗಾ' ಚಿತ್ರದ ರಿಲೀಸ್ ಗೆ ಕಂಟಕ]

  ಕುತೂಹಲ ಮೂಡಿಸಿರುವ ಚಿತ್ರಕಥೆ

  ವ್ಯವಸಾಯ ಮತ್ತು ಹಳ್ಳಿಗಳಿಗೆ ಅನುಕೂಲವಾಗುವಂತೆ ನಿರ್ಮಿಸುವ ಡ್ಯಾಮ್ ಸುತ್ತ ನಡೆಯೋ ಕಥೆ ಈ 'ಲಿಂಗಾ' ಅನ್ನೋದು ಟ್ರೇಲರ್ ನಲ್ಲಿ ಸ್ಪಷ್ಟವಾಗಿದೆ.

  ಬಹುತೇಕ ಕರ್ನಾಟಕದಲ್ಲೇ ಚಿತ್ರೀಕರಣ

  'ಲಿಂಗಾ' ಚಿತ್ರ ಮತ್ತಷ್ಟು ಸುದ್ದಿಯಾಗಿದ್ದು ಇದೇ ಕಾರಣಕ್ಕೆ. ವಿಶ್ವವಿಖ್ಯಾತ ಮೈಸೂರು ಅರಮನೆಯಲ್ಲಿ 'ಲಿಂಗಾ' ಚಿತ್ರದ ಬಹುತೇಕ ಚಿತ್ರೀಕರಣ ನಡೆದಿದೆ. ಮೇಲುಕೋಟೆ, ಚಾಮುಂಡಿ ಬೆಟ್ಟ, ಪಾಂಡವಪುರ, ತೀರ್ಥಹಳ್ಳಿ, ಜೋಗ್ ಫಾಲ್ಸ್ ಮತ್ತು ಲಿಂಗನಮಕ್ಕಿ ಡ್ಯಾಮ್ ನಲ್ಲಿ 'ಲಿಂಗಾ' ಚಿತ್ರದ ಕ್ಲೈಮ್ಯಾಕ್ಸ್ ಶೂಟ್ ಆಗಿದೆ. ಟ್ರೇಲರ್ ನಲ್ಲಿ ಸಾಂಸ್ಕೃತಿಕ ನಗರಿಯ ವೈಭವನ್ನ ನೀವು ನೋಡಬಹುದು. [ದಕ್ಷಿಣದಲ್ಲಿ ಹೊಸ ದಾಖಲೆ ಸೃಷ್ಟಿಸಿದ ರಜನಿ 'ಲಿಂಗಾ']

  ಸೋನಾಕ್ಷಿ ಬಾಯಲ್ಲಿ ತಮಿಳು ಪದ

  'ಲಿಂಗಾ' ಚಿತ್ರದ ಮೂಲಕ ದಕ್ಷಿಣ ಭಾರತದ ಚಿತ್ರರಂಗಕ್ಕೆ ಕಾಲಿಟ್ಟಿರುವ ಸೋನಾಕ್ಷಿ, ಚಿತ್ರದಲ್ಲಿ ಹಳ್ಳಿಹುಡುಗಿಯಾಗಿ ಮಿಂಚಿದ್ದಾರೆ. ತಮಿಳು ಭಾಷೆಯನ್ನ ಕಲಿತು ಸೋನಾಕ್ಷಿ ಆಡಿರುವ ತಮಿಳು ಪದವನ್ನ ಟ್ರೇಲರ್ ನಲ್ಲಿ ಕೇಳಿ.

  ಮಾರ್ಡನ್ ಅನುಷ್ಕಾ

  ರಜನಿ ಸಾರ್ ನಂತೆ ಸ್ಟೈಲಿಶ್ ಆಗಿ ಭಿನ್ನವಿಭಿನ್ನವಾಗಿ ಅನುಷ್ಕಾ ಕಾಣಿಸಿಕೊಂಡಿದ್ದಾರೆ. ಕಾಮಿಡಿ ಕಚಗುಳಿ ಇಡುವುದಕ್ಕೆ ಸಂತಾನಂ, ಬ್ರಹ್ಮಾನಂದಂ ಇದ್ದಾರೆ. ಇನ್ನೂ ರತ್ನವೇಲು ಕ್ಯಾಮರಾ ಕೈಚಳಕ ಟ್ರೇಲರ್ ನಲ್ಲಿ ಗಮನಸೆಳೆಯುತ್ತೆ.

  ಸ್ವಾತಂತ್ರ್ಯ ಪೂರ್ವದ ಭಾರತದ ಚಿತ್ರಣವೂ ಚಿತ್ರದಲ್ಲಿರುವುದರಿಂದ ಬ್ರಿಟಿಷ್ ಮತ್ತು ಅಮೇರಿಕಾದ ನಟರೂ ಚಿತ್ರದಲ್ಲಿದ್ದಾರೆ. ಪಿ.ಕುಮಾರ್ ಮತ್ತು ಕೆ.ಎಸ್.ರವಿಕುಮಾರ್ ಬರೆದಿರುವ ಕಥೆಗೆ, ರಜನಿ ಫೇವರೀಟ್ ಕೆ.ಎಸ್.ರವಿಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಕನ್ನಡಿಗ ರಾಕ್ ಲೈನ್ ವೆಂಕಟೇಶ್ 'ಲಿಂಗಾ' ಚಿತ್ರವನ್ನ ಅದ್ದೂರಿಯಾಗಿ ನಿರ್ಮಿಸಿದ್ದಾರೆ ಅನ್ನುವುದಕ್ಕೆ ಟ್ರೇಲರ್ರೇ ಸಾಕ್ಷಿ.

  ಏ.ಆರ್.ರಹಮಾನ್ ಸಂಗೀತ ಸಂಯೋಜಿಸಿರುವ 'ಲಿಂಗಾ' ಹಾಡುಗಳು ಇಂದು (ನವೆಂಬರ್ 16) ಚೆನ್ನೈನಲ್ಲಿ ಅದ್ದೂರಿಯಾಗಿ ರಿಲೀಸ್ ಆಗ್ತಿದೆ. 'ಸದ್ಯದಲ್ಲೇ ನಿಮ್ಮ ಮುಂದೆ ಬರ್ತೀನಿ' ಅನ್ನುವ ರಜನಿ ಡೈಲಾಗ್ ನಿಂದ ಮುಗಿಯುವ ಟ್ರೇಲರ್ ಸೂಪರ್ ಸ್ಟಾರ್ ಅಭಿಮಾನಿಗಳ ಎದೆಬಡಿತ ಜೋರುಮಾಡಿರುವುದಂತೂ ಸತ್ಯ.

  English summary
  Super Star Rajinikanth most-awaited movie Lingaa trailer is out and seems promising for Rajini's fans. Super Star is seen in most stylish avatar. Interstingly, Rajni is seen in dual role in the movie and only one look of him is revealed now.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X