For Quick Alerts
  ALLOW NOTIFICATIONS  
  For Daily Alerts

  Rakesh Tribe Meet: ಬಿಗ್‌ಬಾಸ್‌ನಲ್ಲಿ ಬೆಂಬಲಿಸಿದವರಿಗೆ ಪೋಸ್ಟ್ ಅಲ್ಲ ಭೇಟಿಯಾಗಿ ಧನ್ಯವಾದ ಹೇಳ್ತಾರೆ ರಾಕೇಶ್!

  |

  ಬಿಗ್ ಬಾಸ್ ಕನ್ನಡ ಸೀಸನ್ ಒಂಬತ್ತು ಮುಕ್ತಾಯಗೊಂಡಿದ್ದು, ಕನ್ನಡದ ಪ್ರಥಮ ರ‍್ಯಾಪ್ ಸಿಂಗರ್ ರಾಕೇಶ್ ಅಡಿಗ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಟ್ರೋಫಿ ಗೆಲ್ಲದಿದ್ದರೂ ತನ್ನ ನಡೆ ನುಡಿಯಿಂದ ಅಪಾರ ವೀಕ್ಷಕರ ಮನಸ್ಸನ್ನು ಗೆದ್ದಿರುವ ರಾಕೇಶ್ ರಿಯಲ್ ವಿನ್ನರ್ ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವಾರು ಬಿಗ್ ಬಾಸ್ ವೀಕ್ಷಕರು ಬರೆದುಕೊಂಡಿದ್ದಾರೆ.

  ಇನ್ನು ಬಿಗ್ ಬಾಸ್ ಸ್ಪರ್ಧಿಗಳು ಮನೆಯೊಳಗಿರುವಾದ ಹೊರಗೆ ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ ಕ್ಲಬ್ ಹುಟ್ಟಿಕೊಳ್ಳುವುದು ಕಾಮನ್. ಅದೇ ರೀತಿ ರಾಕೇಶ್ ಅಡಿಗ ಅವರಿಗೂ ಸಹ ದೊಡ್ಡ ಸಂಖ್ಯೆಯಲ್ಲಿಯೇ ಅಭಿಮಾನಿ ಬಳಗ ಹುಟ್ಟಿಕೊಂಡಿತ್ತು. ಎಲ್ಲರ ಹಾಗೆ ಇವರನ್ನು ಅಭಿಮಾನಿಗಳು ಎಂದು ಪರಿಗಣಿಸಿದ ರಾಕೇಶ್ ಅಡಿಗ ಫ್ಯಾನ್ಸ್ ಎನ್ನುವ ಬದಲು ಅವರನ್ನೆಲ್ಲಾ 'ಬ್ರದರ್‌ಹುಡ್' ಹಾಗೂ 'ಟ್ರೈಬ್ ಮೆಂಬರ್ಸ್' ಎಂದು ಕರೆದರು.

  ಈ ಮೂಲಕ ನಾನು ಸೆಲೆಬ್ರಿಟಿ ಅಲ್ಲ, ಹಾಗಾಗಿ ನನ್ನನ್ನು ಇಷ್ಟಪಡುವವರು ನನ್ನ ಫ್ಯಾನ್ಸ್ ಅಲ್ಲ ಬದಲಾಗಿ ನನ್ನ ಸೋದರ ಸೋದರಿಯರು ಎಂದು ರಾಕೇಶ್ ಅಡಿಗ ತಿಳಿಸಿದರು. ಈ ಮಾತನ್ನು ಮನೆಯೊಳಗೆ ಇರುವಾಗಲೇ ರಾಕೇಶ್ ಅಡಿಗ ಹೇಳಿದ್ದರು ಹಾಗೂ ಇದು ಅವರ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ಸ್ಪರ್ಧಿ ಮೇಲಿನ ಪ್ರೀತಿ ಮತ್ತಷ್ಟು ಹೆಚ್ಚಾಗುವಂತೆ ಮಾಡಿತು. ಇನ್ನು ಬಿಗ್ ಬಾಸ್ ಮುಗಿದ ನಂತರ ತಮಗೆ ವೋಟ್ ಹಾಕಿದವರಿಗೆ ಕೃತಜ್ಞತೆ ಹೇಳಿ ಪೋಸ್ಟ್ ಹಾಕಿ ಸುಮ್ಮನಾಗುವವರೇ ಹೆಚ್ಚು. ಆದರೆ ರಾಕೇಶ್ ಅಡಿಗ ತಮಗೆ ಬೆಂಬಲ ನೀಡಿದವರನ್ನು ನೇರವಾಗಿ ಭೇಟಿ ನೀಡಿ 'ಬ್ರದರ್‌ಹುಡ್' ಪದಕ್ಕೆ ನಿಜವಾದ ಅರ್ಥ ನೀಡಲು ನಿಶ್ಚಯಿಸಿದ್ದಾರೆ. ನೀವೂ ಸಹ ರಾಕೇಶ್ ಅಡಿಗ ಅವರನ್ನು ಬೆಂಬಲಿಸಿದ್ರೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ.

  ಕಾರ್ಯಕ್ರಮ ಯಾವಾಗ, ಎಲ್ಲಿ?

  ಕಾರ್ಯಕ್ರಮ ಯಾವಾಗ, ಎಲ್ಲಿ?

  ರಾಕೇಶ್ ತಮಗೆ ಬೆಂಬಲ ನೀಡಿದವರನ್ನು ಭೇಟಿಯಾಗಲು 'ರಾಕೇಶ್ ಟ್ರೈಬ್ ಮೀಟ್' ಎಂಬ ಹೆಸರಿನಡಿಯಲ್ಲಿ ಕಾರ್ಯಕ್ರಮವನ್ನು ಆಯೋಜನೆಗೊಂಡಿದೆ. ಈ ಕಾರ್ಯಕ್ರಮ ನಾಳೆ ( ಜನವರಿ 8ರ ಭಾನುವಾರ ) ಸಂಜೆ 4 ಗಂಟೆಯಿಂದ 8 ಗಂಟೆಯವರೆಗೆ ನಡೆಯಲಿದೆ. ಬೆಂಗಳೂರಿನ ಜಯನಗರ ಒಂದನೇ ಹಂತದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ಕ್ರೀಡಾಂಗಣದ ಎರಡನೇ ಗೇಟ್‌ನಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿದೆ.

  ಕಾರ್ಯಕ್ರಮದಲ್ಲಿ ಏನೇನು ಇರಲಿದೆ?

  ಕಾರ್ಯಕ್ರಮದಲ್ಲಿ ಏನೇನು ಇರಲಿದೆ?

  ಇನ್ನು ಈ ಕಾರ್ಯಕ್ರಮದಲ್ಲಿ ರಾಕೇಶ್ ಅಡಿಗ ಅವರು ತಮ್ಮ ಟ್ರೈಬ್ ಮೆಂಬರ್ಸ್ ಜತ ಮಾತನಾಡಲಿದ್ದಾರೆ. ಟ್ರೈಬ್ ಮೆಂಬರ್ಸ್ ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಲಿದ್ದಾರೆ. ಕಾರ್ಯಕ್ರಮಕ್ಕೆ ತೆರಳುವ ಯೋಜನೆ ಹಾಕಿಕೊಂಡಿರುವವರು ಪ್ರಶ್ನೆಗಳನ್ನು ಸಿದ್ಧಪಡಿಸಿಕೊಳ್ಳಬಹುದಾಗಿದೆ. ಇಷ್ಟೇ ಅಲ್ಲದೇ ರಾಕೇಶ್ ಅಡಿಗ ಒಂದು ಹಾಡನ್ನು ವೇದಿಕೆ ಮೇಲೆ ಹಾಡಲಿದ್ದಾರೆ. ಜತೆಗೆ ಮಾರ್ಟಿನ್ ಯೋ, ಸಿದ್ ಹಾಗೂ ಚಿರಾಯು ಹಾಡನ್ನು ಹಾಡಿ ರಂಜಿಸಲಿದ್ದಾರೆ.

  ಉಚಿತ ಪ್ರವೇಶ

  ಉಚಿತ ಪ್ರವೇಶ

  ಈ ಕಾರ್ಯಕ್ರಮಕ್ಕೆ ಯಾವುದೇ ಪ್ರವೇಶ ದರ ಇರುವುದಿಲ್ಲ. ಯಾರಾದರೂ ಸಹ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಒಟ್ಟಿನಲ್ಲಿ ಬಿಗ್ ಬಾಸ್ ಸ್ಪರ್ಧಿಯೋರ್ವ ತನ್ನನ್ನು ಬೆಂಬಲಿಸಿದವರಿಗೆ ಕೃತಜ್ಞತೆ ಸಲ್ಲಿಸಲು ಅವರನ್ನು ನೇರವಾಗಿ ಭೇಟಿಯಾಗಲು ಕಾರ್ಯಕ್ರಮ ಆಯೋಜನೆಯಾಗಿರುವುದು ಇದೇ ಮೊದಲು ಎನ್ನಬಹುದು.

  English summary
  Rakesh Tribe Meet: Rakesh Adiga to meet and thank his supporters on 8th January. Read on
  Saturday, January 7, 2023, 11:42
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X