»   » ರಕ್ಷಿತ್ ಶೆಟ್ಟಿಗೆ ಆಕ್ಷನ್ ಕಟ್ ಹೇಳಿದ್ರೆ 'ಕಂಕಣ ಭಾಗ್ಯ' ಗ್ಯಾರೆಂಟಿ!

ರಕ್ಷಿತ್ ಶೆಟ್ಟಿಗೆ ಆಕ್ಷನ್ ಕಟ್ ಹೇಳಿದ್ರೆ 'ಕಂಕಣ ಭಾಗ್ಯ' ಗ್ಯಾರೆಂಟಿ!

Posted By:
Subscribe to Filmibeat Kannada
ರಕ್ಷಿತ್ ಶೆಟ್ಟಿಗೆ ಆಕ್ಷನ್ ಕಟ್ ಹೇಳಿದ್ರೆ 'ಕಂಕಣ ಭಾಗ್ಯ' ಗ್ಯಾರೆಂಟಿ......! ಈ ಶೀರ್ಷಿಕೆ ಯಾಕೆ ಇಟ್ಟಿದ್ದೀವಿ ಅಂದ್ರೆ, ರಕ್ಷಿತ್ ಶೆಟ್ಟಿ ಜೊತೆ ಮೊದಲ ಸಿನಿಮಾ ಮಾಡಿದ್ದ ನಿರ್ದೇಶಕರೆಲ್ಲ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದು ಮುಂದೆ ಕೂಡ ಆಗಬಹುದು ಎಂಬ ನಿರೀಕ್ಷೆ.

ಹೀಗಾಂತೂ ರಕ್ಷಿತ್ ಶೆಟ್ಟಿ ಅವರ ಸಿನಿಮಾಗಳಲ್ಲಿ 'ಕಂಕಣಭಾಗ್ಯ' ಇದೆ ಅಂತ ಎಲ್ಲರೂ ಮಾತನಾಡಿಕೊಳ್ತಿದ್ದಾರೆ. ಇದರಲ್ಲಿ ಪವಾಡನೂ ಇಲ್ಲ ಅಥವಾ ಫ್ರೀ-ಪ್ಲಾನೂ ಇಲ್ಲ. ಆದ್ರೂ ಒಂಥರಾ ಇದು ಆಶ್ಚರ್ಯ. ನಾವು ಹೇಳೋ ಈ ಮೂರು ಮದ್ವೆಯ ಕಥೆ ನೋಡಿದ್ಮೇಲೆ ನಿಮಗೂ ಶಾಕ್ ಆಗೋದ್ರಲ್ಲಿ ಅನುಮಾನನೇ ಇಲ್ಲ. ಮೊದಲು ಈ ಮೂರು ಮಧ್ವೆ ಯಾರದ್ದು ಅಂತಾ ನೋಡಿ.....

'ಗೋಧಿಬಣ್ಣ' ಡೈರೆಕ್ಟರ್

ನಿರ್ದೇಶಕ ಹೇಮಂತ್ ರಾವ್ ಗೆ 'ಗೋಧಿಬಣ್ಣ ಸಾಧಾರಣ ಮೈಕಟ್ಟು' ಚಿತ್ರ ಮೊದಲ ಸಿನಿಮಾ. ಈ ಚಿತ್ರದ ನಾಯಕ ರಕ್ಷಿತ್ ಶೆಟ್ಟಿ. ಈ ಚಿತ್ರ ಯಶಸ್ಸು ಕಾಣುತ್ತಿದ್ದಾಗೆ, ಹೇಮಂತ್ ಗೆ ಮತ್ತಷ್ಟು ಚಿತ್ರಗಳು ಬಂದವು. ಅದಕ್ಕೆ ಮಿಗಿಲಾಗಿ ಬ್ಯಾಚುಲರ್ ಆಗಿದ್ದ ಹೇಮಂತ್ ಜನವರಿ 23 ರಂದು, ತಮ್ಮ ಗೆಳತಿ 'ಬೇಬ್ ಜಾನಿ ಹಾಲ್ದಾರ್' ಅವರೊಂದಿಗೆ ವಿವಾಹವಾದರು. ಮೂರು ಮದ್ವೆಗಳ ಪೈಕಿ, ಹೇಮಂತ್ ಮೊದಲಿಗರು.

'ರಿಕ್ಕಿ' ನಿರ್ದೇಶಕ ರಿಷಬ್ ಶೆಟ್ಟಿ

ರಕ್ಷಿತ್ ಶೆಟ್ಟಿ ಅವರ ಆಪ್ತಮಿತ್ರ ರಿಷಬ್ ಶೆಟ್ಟಿ 'ರಿಕ್ಕಿ' ಚಿತ್ರವನ್ನ ನಿರ್ದೇಶನ ಮಾಡುವ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದರು. ವೃತ್ತಿಯಲ್ಲಿ ಇಂಜಿನೀಯರ್ ಆಗಿರುವ ಪ್ರಗತಿ ಶೆಟ್ಟಿ ಅವರನ್ನ ಫೆಬ್ರವರಿ 9 ರಂದು ಕುಂದಾಪುರದಲ್ಲಿ ಮದುವೆಯಾದರು. ಮೂರು ಮಧ್ವೆ ಕಥೆಯಲ್ಲಿ ರಿಷಬ್ ಎರಡನೇಯವರು.[ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಕಿರಿಕ್ ಪಾರ್ಟಿ' ನಿರ್ದೇಶಕ ರಿಶಬ್ ಶೆಟ್ಟಿ]

'ಸಿಂಪಲ್' ಸುನಿ

ಇನ್ನೂ 'ಸಿಂಪಲ್ಲಾಗ್ ಒಂದು ಲವ್ ಸ್ಟೋರಿ' ಚಿತ್ರದ ಮೂಲಕ ನಿರ್ದೇಶಕರಾದ ಸಿಂಪಲ್ ಸುನಿ ಅವರು ಚೊಚ್ಚಲ ಚಿತ್ರದಲ್ಲೂ ರಕ್ಷಿತ್ ಶೆಟ್ಟಿ ಅವರೇ ನಾಯಕ. ಇದೀಗ ಸುನಿ ಅವರ ಕೂಡ ನಿನ್ನೆ (ಫೆಬ್ರವರಿ 17) ಸೌಂದರ್ಯ ಎಂಬುವವರನ್ನ ಚಿಕ್ಕ ಮಗಳೂರಿನಲ್ಲಿ ವಿವಾಹವಾಗಿದ್ದಾರೆ. ಸೋ, ರಕ್ಷಿತ್ ಶೆಟ್ಟಿ ಜೊತೆ ಮೊದಲ ಸಿನಿಮಾ ಮಾಡಿದವರು ಫೈಕಿ ಮದುವೆಯಾದ ಮೂರನೇ ಡೈರೆಕ್ಟರ್ ಸುನಿ.[ಚಿತ್ರಗಳು: ನವ ಬಾಳಿಗೆ ಕಾಲಿಟ್ಟ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ನಿರ್ದೇಶಕ ಸುನಿ]

ನಾಲ್ಕನೇ ನಿರ್ದೇಶಕ ಯಾರು ಗೊತ್ತಾ?

ಹೀಗೆ, ತಮ್ಮ ಚಿತ್ರಗಳೊಂದಿಗೆ ನಿರ್ದೇಶನದ ಡೆಬ್ಯೂ ಮಾಡಿದ ಮೂರು ನಿರ್ದೇಶಕರು ಹಿಂದೆಂದೆನೇ ಮದುವೆಯಾಗಿರುವುದು ನಿಜಕ್ಕೂ ರಕ್ಷಿತ್ ಶೆಟ್ಟಿ ಅವರಿಗೂ ಕೂಡ ಆಶ್ಚರ್ಯವನ್ನುಂಟು ಮಾಡಿದೆ. ಹೀಗಾಗಿ, ತಮ್ಮ ಮುಂದಿನ ಚಿತ್ರದ ಮೂಲಕ ಸಚಿನ್ ಎಂಬ ಯುವ ಪ್ರತಿಭೆ ನಿರ್ದೇಶಕನಾಗಿ ಪರಿಚಯವಾಗುತ್ತಿದ್ದು, ನೆಕ್ಸ್ಟ್ ಮದುವೆ ಇವರದ್ದೇ ಎಂದು ರಕ್ಷಿತ್ ಅವರು ಭವಿಷ್ಯ ನುಡಿದಿದ್ದಾರೆ.

English summary
Rakshit Shetty's Directors, Who all are Introduced in Directorial Debut With Rakshit shetty, They all Married Back to Back in One Month. Godhi Banna Fame Hemanth Rao, Simple Suni, and Kirik Party Rishab Shetty has Married.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada