For Quick Alerts
  ALLOW NOTIFICATIONS  
  For Daily Alerts

  ಬೆನ್ನ ಹಿಂದೆ ಮಾತನಾಡಿದ ಪುಷ್ಕರ್ ಮಲ್ಲಿಕಾರ್ಜುನಯ್ಯ: ಸಂಬಂಧ ಕಡಿದುಕೊಂಡ ರಕ್ಷಿತ್ ಶೆಟ್ಟಿ

  |

  ನಟ ರಕ್ಷಿತ್ ಶೆಟ್ಟಿ ಕುರಿತು ಕೆಲವು ದಿನಗಳ ಹಿಂದೆ ಪಬ್ಲಿಕ್ ವಾಹಿನಿಯು ಅವಹೇಳನಕಾರಿ ರೀತಿಯ ಕಾರ್ಯಕ್ರಮವೊಂದನ್ನು ಪ್ರಸಾರ ಮಾಡಿತ್ತು. ಇದರಿಂದ ಸಿಟ್ಟಿಗೆದ್ದಿದ್ದ ರಕ್ಷಿತ್ ಶೆಟ್ಟಿ ಜುಲೈ 11 ರಂದು ಎಲ್ಲದಕ್ಕೂ ಉತ್ತರಿಸುತ್ತೇನೆ ಎಂದಿದ್ದರು.

  Recommended Video

  ಎಲ್ಲದಕ್ಕೂ ಇವರಿಬ್ಬರೇ ಕಾರಣ ಎಂದ ರಕ್ಷಿತ್ ಶೆಟ್ಟಿ!! | Rakshith Shetty | Pushkar Mallikarjun | Filmibeat

  ಹೇಳಿದ ಮಾತಿನಂತೆಯೇ ಇಂದು ಸುದ್ದಿಗೋಷ್ಠಿ ಕರೆದು ಮಾತನಾಡಿರುವ ರಕ್ಷಿತ್ ಶೆಟ್ಟಿ, ''ಇದೆಲ್ಲವೂ ಆಗಿದ್ದು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಹಾಗೂ ಪತ್ರಕರ್ತ ಮಹೇಶ್ ದೇವಿ ಶೆಟ್ಟಿಯಿಂದ'' ಎಂದು ನೇರವಾಗಿ ಆರೋಪ ಮಾಡಿದ್ದಾರೆ.

  ಗೆಳೆಯರಾಗಿದ್ದ ಪುಷ್ಕರ್ ಮಲ್ಲಿಕಾರ್ಜುನಯ್ಯ 'ಅವನೇ ಶ್ರೀಮನ್ನಾರಯಣ' ಸಿನಿಮಾದ ಬಳಿಕ ಜೊತೆ ಸಂಬಂಧ ಹದಗೆಟ್ಟು, ಬೆನ್ನ ಹಿಂದೆ ತನ್ನ ಬಗ್ಗೆ ಮಾತನಾಡಿದ್ದರ ಬಗ್ಗೆಯೂ ರಕ್ಷಿತ್ ಶೆಟ್ಟಿ ಹೇಳಿದರು. ಪುಷ್ಕರ್ ಮಲ್ಲಿಕಾರ್ಜುನಯ್ಯ ಹೇಳಿದ ಮಾತುಗಳಿಂದಲೇ ಮಹೇಶ್ ದೇವಿ ಶೆಟ್ಟಿ ಆ ಥರಹದ್ದೊಂದು ಅವಹೇಳನಕಾರಿ ಕಾರ್ಯಕ್ರಮ ಮಾಡಿದರು ಎಂಬುದನ್ನು ಸೂಚ್ಯವಾಗಿ ಹೇಳಿದರು ರಕ್ಷಿತ್ ಶೆಟ್ಟಿ.

  ಪುಷ್ಕರ್ ಮಲ್ಲಿಕಾರ್ಜುನಯ್ಯಗೆ 'ಅವನೇ ಶ್ರೀಮನ್ನಾರಯಣ' ಸಿನಿಮಾದ ಬಗ್ಗೆ ದೊಡ್ಡ ನಿರೀಕ್ಷೆ ಇತ್ತು. ಹಾಗಾಗಿ ದೊಡ್ಡ ಮಟ್ಟದ ಬಂಡವಾಳವನ್ನು ಅವರು ಹೂಡಿದರು. ಆದರೆ ಅವರು ಬಡ್ಡಿ ಲೆಕ್ಕದಲ್ಲಿ ಹಣ ತಂದು ಹೂಡಿದ್ದರಿಂದ ಸಿನಿಮಾದ ಬಜೆಟ್ ಒಂದೂವರೆ ಪಟ್ಟು ಹೆಚ್ಚಾಯಿತು. ಅವರ ಬ್ಯುಸಿನೆಸ್ ಸ್ಟೈಲ್ ನನಗೆ ಇಷ್ಟವಾಗಿರಲಿಲ್ಲ.

  ''ಸಿನಿಮಾ ಬಿಡಗುಡೆ ಆಗಿ ಲಾಸ್ ಆದ ಬಳಿಕ ನಾನು 20 ಕೋಟಿ ಸಾಲ ತಂದು ಪುಷ್ಕರ್ ಬಾಕಿ ಉಳಿಸಿಕೊಂಡಿದ್ದ ಪೇಮೆಂಟ್‌ಗಳನ್ನು ಕ್ಲಿಯರ್ ಮಾಡಿದ್ದೇನೆ. ಪುಷ್ಕರ್‌ಗೂ ನಷ್ಟ ತುಂಬಿಕೊಟ್ಟಿದ್ದೇನೆ. ಇಷ್ಟೆಲ್ಲ ಆದ ಬಳಿಕವೂ ದಯವಿಟ್ಟು ನನ್ನ ಬಗ್ಗೆ ನನ್ನ ಸಿನಿಮಾ ಬಗ್ಗೆ ಗಾಳಿಸುದ್ದಿ ಹರಡಿಸಬೇಡಿ'' ಎಂದು ನೇರವಾಗಿ ಎಚ್ಚರಿಕೆ ಕೊಟ್ಟಿದ್ದಾರೆ ರಕ್ಷಿತ್ ಶೆಟ್ಟಿ.

  ''ಪುಷ್ಕರ್ ಅವರದ್ದು 'ಚಾರ್ಲಿ' ಸಿನಿಮಾದಲ್ಲಿ ಮೂರುವರೆ ಕೋಟಿ ಬಂಡವಾಳ ಇತ್ತು ಅದನ್ನೂ ಸಹ ನಾನು ವಾಪಸ್ ಕೊಟ್ಟಿದ್ದೇನೆ. ಸಪ್ತಸಾಗರದಾಚೆ ಎಲ್ಲೊ ಸಿನಿಮಾಕ್ಕೆ ಹಾಕಿದ್ದ ಬಂಡವಾಳವನ್ನೂ ವಾಪಸ್ ನೀಡಿದ್ದೇನೆ'' ಎಂದಿದ್ದಾರೆ ರಕ್ಷಿತ್ ಶೆಟ್ಟಿ.

  ''ಅವನೇ ಶ್ರೀಮನ್ನಾರಾಯಣ' ಸಿನಿಮಾಕ್ಕೆ ನಾನು ಮೂರು ವರ್ಷ ನೀಡಿದ್ದೇನೆ. ನಿರ್ದೇಶಕ ಸಚಿನ್ ಮೂರು ವರ್ಷ ಶ್ರಮ ಹಾಕಿದ್ದಾನೆ. ಅವನ ಸಹಾಯಕರು ಶ್ರಮ ಹಾಕಿದ್ದಾರೆ. ಸಿನಿಮಾ ಓಡಲಿಲ್ಲ ಎಂದ ಕೂಡಲೇ ಸಿನಿಮಾದ ಬಗ್ಗೆ ಲೂಸ್ ಟಾಕ್ ಮಾಡುತ್ತಾನೆ ಎಂದರೆ ಆತ ಸಿನಿಮಾವನ್ನು ಪ್ರೀತಿಸಲಿಲ್ಲ ಎಂದೇ ಅರ್ಥ'' ಎಂದಿದ್ದಾರೆ ರಕ್ಷಿತ್ ಶೆಟ್ಟಿ.

  English summary
  Rakshit Shetty said Pushkar Mallikarjunaiah did loose talks about him and his movies behind his back.
  Sunday, July 11, 2021, 20:17
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X