For Quick Alerts
  ALLOW NOTIFICATIONS  
  For Daily Alerts

  ಪ್ರಕಾಶ್ ರೈ ನೀಡಿದ 'ಗ್ರೀನ್ ಇಂಡಿಯಾ' ಚಾಲೆಂಜ್ ಪೂರ್ಣಗೊಳಿಸಿದ ರಕ್ಷಿತ್ ಶೆಟ್ಟಿ

  |

  ಚಿತ್ರರಂಗದಲ್ಲಿ 'ಗ್ರೀನ್ ಇಂಡಿಯಾ ಚಾಲೆಂಜ್' ಮತ್ತೆ ಚುರುಕಾಗಿದೆ. ತಮಿಳು, ತೆಲುಗು ಹಾಗೂ ಬಾಲಿವುಡ್ ಇಂಡಸ್ಟ್ರಿಯಲ್ಲಿ ಹೆಚ್ಚು ಗಮನ ಸೆಳೆದಿದ್ದ ಈ ಚಾಲೆಂಜ್ ಈಗ ಸ್ಯಾಂಡಲ್ ವುಡ್‌ ಅಂಗಳಕ್ಕೆ ಪ್ರವೇಶ ಮಾಡಿದ್ದು ನಟ ರಕ್ಷಿತ್ ಶೆಟ್ಟಿ 'ಗ್ರೀನ್ ಇಂಡಿಯಾ ಚಾಲೆಂಜ್' ಸ್ವೀಕರಿಸಿದ್ದಾರೆ.

  ಬಹುಭಾಷಾ ನಟ ಪ್ರಕಾಶ್ ರಾಜ್ ಅವರು 'ಗ್ರೀನ್ ಇಂಡಿಯಾ ಚಾಲೆಂಜ್'ನಲ್ಲಿ ಪಾಲ್ಗೊಂಡಿದ್ದು, ಯಶಸ್ವಿಯಾಗಿ ಪೂರೈಸಿದ್ದಾರೆ. ನಂತರ ಈ ಚಾಲೆಂಜ್‌ನ್ನು ದಕ್ಷಿಣ ಭಾರತದ ಐದು ಮಂದಿಗೆ ಸೂಚಿಸಿದ್ದಾರೆ. ಈ ಪೈಕಿ ನಟ ರಕ್ಷಿತ್ ಶೆಟ್ಟಿ ಸಹ ಒಬ್ಬರು. ಉಳಿದವರು ಯಾರು? ಮುಂದೆ ಓದಿ...

  'ಗ್ರೀನ್ ಇಂಡಿಯಾ ಚಾಲೆಂಜ್‌'ನಲ್ಲಿ ರಕ್ಷಿತ್

  'ಗ್ರೀನ್ ಇಂಡಿಯಾ ಚಾಲೆಂಜ್‌'ನಲ್ಲಿ ರಕ್ಷಿತ್

  ಪ್ರಕಾಶ್ ರಾಜ್ ನೀಡಿದ 'ಗ್ರೀನ್ ಇಂಡಿಯಾ ಚಾಲೆಂಜ್' (ಗಿಡವೊಂದನ್ನು ನೆಡಬೇಕು) ಸ್ವೀಕರಿಸಿದ ನಟ ರಕ್ಷಿತ್ ಶೆಟ್ಟಿ ತಮ್ಮ ತೋಟದಲ್ಲಿ ಒಂದು ಗಿಡ ನೆಟ್ಟಿದ್ದಾರೆ. ಈ ಸವಾಲು ಮುಂದುವರಿಸಲು ಇಷ್ಟಪಟ್ಟಿರುವ ರಕ್ಷಿತ್, ರಿಷಬ್ ಶೆಟ್ಟಿ, ಕಾರ್ತಿಕ್ ಗೌಡ, ಪುಷ್ಕರ್ ಮಲ್ಲಿಕಾರ್ಜುನ, ವಿನೀನ್ ಪೌಲೆ ಹಾಗು ಬಾಬಿ ಸಿಂಹ ಅವರನ್ನು ನಾಮಿನೇಟ್ ಮಾಡಿದ್ದಾರೆ.

  ಮಹೇಶ್ ಬಾಬು ಸವಾಲು ಪೂರ್ಣಗೊಳಿಸಿದ ತಮಿಳು ನಟ ವಿಜಯ್

  'ಗ್ರೀನ್ ಇಂಡಿಯಾ ಚಾಲೆಂಜ್‌'ನಲ್ಲಿ ತ್ರಿಷಾ

  'ಗ್ರೀನ್ ಇಂಡಿಯಾ ಚಾಲೆಂಜ್‌'ನಲ್ಲಿ ತ್ರಿಷಾ

  ಪ್ರಕಾಶ್ ರಾಜ್ ಅವರು ಸೂಚಿಸಿದ 'ಗ್ರೀನ್ ಇಂಡಿಯಾ ಚಾಲೆಂಜ್‌'ನಲ್ಲಿ ಬಹುಭಾಷೆ ನಟಿ ತ್ರಿಷಾ ಸಹ ಪಾಲ್ಗೊಂಡಿದ್ದಾರೆ. ತ್ರಿಷಾ ಸಹ ತಮ್ಮ ಮನೆಯ ಆವರಣದಲ್ಲಿ ಗಿಡ ನೆಡುವ ಮೂಲಕ ಗ್ರೀನ್ ಇಂಡಿಯಾ ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ. ತ್ರಿಷಾ ಜೊತೆಗೆ ರಕ್ಷಿತ್ ಶೆಟ್ಟಿ, ಮೋಹನ್ ಲಾಲ್, ರಮ್ಯಾ ಕೃಷ್ಣನ್, ಸೂರ್ಯ ಅವರಿಗೂ ಪ್ರಕಾಶ್ ರಾಜ್ ನಾಮಿನೇಟ್ ಮಾಡಿದ್ದಾರೆ.

  ಸೋನು ಸೂದ್ ಸಹ ಭಾಗಿ

  ಸೋನು ಸೂದ್ ಸಹ ಭಾಗಿ

  ಬಾಲಿವುಡ್ ನಟ ಸೋನು ಸೂದ್ ಸಹ ಗ್ರೀನ್ ಇಂಡಿಯಾ ಚಾಲೆಂಜ್‌ನಲ್ಲಿ ಪಾಲ್ಗೊಂಡಿದ್ದಾರೆ. ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿದ ಜನರ ನೆರವಿಗೆ ನಿಂತಿದ್ದ ಸೋನು ಸೂದ್ ಸಹ ಗಿಡ ನೆಡುವ ಮೂಲಕ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.

  Chiru ನಿಧನದ ನಂತರ ಮೊದಲ ಭಾರಿಗೆ ಕ್ಯಾಮೆರಾ ಮುಂದೆ ಬಂದ Meghana | Filmibeat Kannada
  ಗ್ರೀನ್ ಇಂಡಿಯಾ ಅಭಿಯಾನದಲ್ಲಿ ಸ್ಟಾರ್ಸ್

  ಗ್ರೀನ್ ಇಂಡಿಯಾ ಅಭಿಯಾನದಲ್ಲಿ ಸ್ಟಾರ್ಸ್

  ಈ ಹಿಂದೆ ತಮಿಳು ನಟ ವಿಜಯ್, ತೆಲುಗು ನಟ ಮಹೇಶ್ ಬಾಬು, ನಟಿ ರಾಶಿ ಖನ್ನಾ, ರಶ್ಮಿಕಾ ಮಂದಣ್ಣ ಸೇರಿದಂತೆ ಬಹಳ ಕಲಾವಿದರು ಗ್ರೀನ್ ಇಂಡಿಯಾ ಚಾಲೆಂಜ್‌ನಲ್ಲಿ ಭಾಗವಹಿಸಿದ್ದರು.

  English summary
  Kannada actor Rakshit Shetty and trisha krishnan takes up the Green India Challenge from Prakash raj.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X