For Quick Alerts
  ALLOW NOTIFICATIONS  
  For Daily Alerts

  'ಉಳಿದವರು ಕಂಡಂತೆ' ಸೆನ್ಸಾರ್ ನಲ್ಲಿ ಬೀಪ್ ಬೀಪ್

  By Rajendra
  |

  ಸ್ಯಾಂಡಲ್ ವುಡ್ ನ ಬಹಳಷ್ಟು ನಿರೀಕ್ಷಿತ ಚಿತ್ರ ರಕ್ಷಿತ್ ಶೆಟ್ಟಿ ರಚಿಸಿ, ನಟಿಸಿ, ನಿರ್ದೇಶಿಸಿರುವ 'ಉಳಿದವರು ಕಂಡಂತೆ'. ಈ ಚಿತ್ರ ಇದೀಗ ಸೆನ್ಸಾರ್ ಮಂಡಳಿಯಲ್ಲಿ ಪಾಸಾಗಿದೆ. ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ನೀಡಲಾಗಿದ್ದು ಇದೇ ಮಾರ್ಚ್ 28ಕ್ಕೆ ಪ್ರೇಕ್ಷಕರ ಮುಂದೆ ಬರುತ್ತಿದೆ.

  ಹಲವು ಕಡೆ ಇರುವ ಆಕ್ಷೇಪಾರ್ಹ ಪದಗಳನ್ನು ಮ್ಯೂಟ್ ಮಾಡಲಾಗಿದೆ. ಅಲ್ಲೆಲ್ಲಾ ಬೀಪ್ ಬೀಪ್ ಧ್ವನಿಯೂ ಇರುತ್ತದೆ ಎಂದು ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ. ಈ ಚಿತ್ರದ ಶೀರ್ಷಿಕೆಯೂ ಒಂಥರಾ ಗಾಂಧಿನಗರ ಎಂದಿನ ಶೈಲಿಗಿಂತ ಭಿನ್ನವಾಗಿರುವುದು ಗಮನಸೆಳೆಯುವ ಅಂಶಗಳಲ್ಲಿ ಒಂದು. [ಶೀತಲ್ ಶೆಟ್ಟಿ ಸಂದರ್ಶನ]

  'ಉಳಿದವರು ಕಂಡಂತೆ' ಚಿತ್ರಕ್ಕೆ ಬಿ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು ಹಾಡುಗಳು ಚಿತ್ರರಸಿಕರು ಮತ್ತೆ ಮತ್ತೆ ಗುನುಗುವಂತಿವೆ. ಈ ಚಿತ್ರದ ಆಂಡ್ರಾಯ್ಡ್ ಆಪ್ ಸಹ ಬಿಡುಗಡೆಯಾಗಿದ್ದು ಅಭಿಮಾನಿಗಳು ಅಲ್ಲಿಂದಲೂ ಚಿತ್ರದ ಬಗ್ಗೆ ನಿರಂತರ ಮಾಹಿತಿ ಪಡೆಯುತ್ತಿದ್ದಾರೆ.

  ಈ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಕನ್ನಡ ಸಿನಿಪ್ರೇಮಿಗಳನ್ನು ಸಾಕಷ್ಟು ಆಕರ್ಷಿಸುತ್ತಿದೆ. ಹೇಮಂತ್, ಸುನಿ ಹಾಗೂ ಅಭಿ ಚಿತ್ರದ ನಿರ್ಮಾಪಕರು. ಬಿ ಅಜನೀಶ್ ಲೋಕನಾಥ್ ಅವರ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. [ಉಳಿದವರು ಕಂಡಂತೆ ಧ್ವನಿಸುರುಳಿ ವಿಮರ್ಶೆ]

  ಚಿತ್ರದ ಪಾತ್ರವರ್ಗದಲ್ಲಿ ಶಂಕರ್ ಪೂಜಾರಿಯಾಗಿ ದಿನೇಶ್ ಮಂಗಳೂರು, ರತ್ನಕ್ಕಳಾಗಿ ತಾರಾ, ಮುನ್ನಾ ಪಾತ್ರದಲ್ಲಿ ಕಿಶೋರ್, ರಿಚಿ ಪಾತ್ರದಲ್ಲಿ ರಕ್ಷಿತ್ ಶೆಟ್ಟಿ, ರಿಶಬ್ ಆಗಿ ರಘು, ಬಾಲು ಪಾತ್ರದಲ್ಲಿ ಅಚ್ಯುತ ಕುಮಾರ್, ಶಾರದಾ ಪಾತ್ರದಲ್ಲಿ ಯಜ್ಞಾ ಶೆಟ್ಟಿ ಹಾಗೂ ರೆಜೀನಾ ಪಾತ್ರದಲ್ಲಿ ಶೀತಲ್ ಶೆಟ್ಟಿ.

  ಈ ಬಾರಿ ರಕ್ಷಿತ್ ಶೆಟ್ಟಿ ತಮ್ಮ ಚಿತ್ರದ ಮೂಲಕ ಏನೆಲ್ಲಾ ಕೊಡಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ಪ್ರೇಕ್ಷಕರು ಇದ್ದಾರೆ. ಮಲ್ಪೆ, ಕರಾವಳಿ, ಉಡುಪಿಯ ಸುಂದರ ತಾಣಗಳ ಹಿನ್ನೆಲೆಯಲ್ಲಿ ಸಾಗುವ ಚಿತ್ರದ ಬಗ್ಗೆ ಸ್ಯಾಂಡಲ್ ವುಡ್ ಸಹ ಕುತೂಹದಿಂದ ನಿರೀಕ್ಷಿಸುತ್ತಿದೆ. (ಒನ್ಇಂಡಿಯಾ ಕನ್ನಡ)

  <blockquote class="twitter-tweet blockquote" lang="en"><p>U/A with many beeps ofcourse :-)</p>— Rakshit Shetty (@rakshitshetty) <a href="https://twitter.com/rakshitshetty/statuses/447316360528670720">March 22, 2014</a></blockquote> <script async src="//platform.twitter.com/widgets.js" charset="utf-8"></script>

  English summary
  Actor Rakshit Shetty (of Simple Agi Ondh Love Story fame) debut directional Kannada movie 'Ulidavaru Kandanthe' clears censor formalities. The movie got U/A certificate from regional censor board. The movie slated for release on 28th March, 2014. Kishore, Tara, Achuth Kumar, Yagna Shetty, and Rakshit Shetty as well, are in the lead role.&#13;

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X