For Quick Alerts
  ALLOW NOTIFICATIONS  
  For Daily Alerts

  ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದ ಕ್ರೇಜಿ ಕ್ವೀನ್ ರಕ್ಷಿತಾ

  By Pavithra
  |
  ಸ್ಯಾಂಡಲ್ವುಡ್ ಗೆ ಮತ್ತೆ ವಾಪಾಸ್ ಆದ ಕ್ರೇಜಿ ಕ್ವೀನ್ | Oneindia Kannada

  ಕೆಲವು ನಟಿಯರನ್ನು ಪ್ರೇಕ್ಷಕರು ಎಂದಿಗೂ ಮಿಸ್ ಮಾಡಿಕೊಳ್ಳಲು ಇಷ್ಟವೇ ಪಡುವುದಿಲ್ಲ. ನಾಯಕಿಯರಿಗೆ ಅದೆಷ್ಟೇ ವಯಸ್ಸಾದರೂ ಕೂಡ ಮತ್ತೆ ಅವರು ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಬೇಕು ಎನ್ನುವ ಆಸೆಗಳನ್ನ ಆಗಾಗ ವ್ಯಕ್ತ ಪಡಿಸುತ್ತಲೇ ಇರುತ್ತಾರೆ.

  ಅದೇ ಲೀಸ್ಟ್ ಗೆ ಸೇರುವ ನಟಿ ಕ್ರೇಜಿ ಕ್ವೀನ್ ರಕ್ಷಿತಾ. ಹೌದು ತಾಯಿಯ ಮಡಿಲು ಸಿನಿಮಾ ನಂತರ ನಟಿ ರಕ್ಷಿತಾ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿಲ್ಲ. ಚಿತ್ರದಲ್ಲಿ ಇನ್ನು ಮುಂದೆ ಅಭಿನಯಿಸುವುದಿಲ್ಲ ಎಂದು ಎಲ್ಲಿಯೂ ಹೇಳದ ರಕ್ಷಿತಾ ಸೈಲೆಂಟ್ ಆಗಿಬಿಟ್ಟರು.

  ಪ್ರೀತಿಯ ಶ್ವಾನವನ್ನು ಕಳೆದುಕೊಂಡ ನೋವಿನಲ್ಲಿ ರಕ್ಷಿತಾಪ್ರೀತಿಯ ಶ್ವಾನವನ್ನು ಕಳೆದುಕೊಂಡ ನೋವಿನಲ್ಲಿ ರಕ್ಷಿತಾ

  ನಂತದ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ರಕ್ಷಿತಾ ಕಾಣಿಸಿಕೊಂಡರು. ಆದರೆ ಅಭಿಮಾನಿಗಳು ಮಾತ್ರ ರಕ್ಷಿತಾ ಚಿತ್ರಗಳಲ್ಲಿ ಯಾವಾಗ ನಟಿಸುತ್ತಾರೆ ಎನ್ನುವ ಕಾಯುತ್ತಲೇ ಇದ್ದಾರೆ. ಸಾಕಷ್ಟು ದಿನ ಕಾದಿದ್ದ ಅಭಿಮಾನಿಗಳಿಗೆ ಸಿಹಿಯ ಸುದ್ದಿ ಸಿಕ್ಕಿದೆ. ರಕ್ಷಿತಾ 'ದಿ ವಿಲನ್' ಸಿನಿಮಾ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ.

  ಕ್ರೇಜಿ ಕ್ವೀನಿ ರಕ್ಷಿತಾ ಕಮ್ ಬ್ಯಾಕ್

  ಕ್ರೇಜಿ ಕ್ವೀನಿ ರಕ್ಷಿತಾ ಕಮ್ ಬ್ಯಾಕ್

  ಸ್ಯಾಂಡಲ್ ವುಡ್ ನಲ್ಲಿ ಕ್ರೇಜಿ ಕ್ವೀನ್ ಅಂತಾನೆ ಫೇಮಸ್ ಆಗಿದ್ದ ನಟಿ ರಕ್ಷಿತ್ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ದಿ ವಿಲನ್ ಸಿನಿಮಾ ಮೂಲಕ ಮತ್ತೆ ರಕ್ಷಿತಾ ಅವರ ಅಭಿಮಾನಿಗಳಿಗೆ ಖುಷಿಯ ವಿಚಾರ ತಿಳಿಸಿದ್ದಾರೆ.

  ದಿ ವಿಲನ್ ಚಿತ್ರದಲ್ಲಿ ರಕ್ಷಿತಾ ಧ್ವನಿ

  ದಿ ವಿಲನ್ ಚಿತ್ರದಲ್ಲಿ ರಕ್ಷಿತಾ ಧ್ವನಿ

  ನಟಿ ರಕ್ಷಿತಾ ದಿ ವಿಲನ್ ಸಿನಿಮಾ ನಾಯಕಿಯ ಪಾತ್ರಕ್ಕೆ ಧ್ವನಿ ನೀಡಿದ್ದಾರೆ. ಈ ಮೂಲಕ ಅವರ ಅಭಿಮಾನಿಗಳಿಗೆ ಮತ್ತೆ ರಕ್ಷಿತಾ ಅವರ ಧ್ವನಿಯನ್ನು ಮತ್ತೆ ಸಿನಿಮಾದಲ್ಲಿ ಕೇಳುವ ಅವಕಾಶ ಸಿಕ್ಕಿದೆ.

  ಪತಿ-ಪತ್ನಿ ಒಟ್ಟಿಗೆ ಕೆಲಸ

  ಪತಿ-ಪತ್ನಿ ಒಟ್ಟಿಗೆ ಕೆಲಸ

  ನಟಿ ರಕ್ಷಿತಾ ಪ್ರೇಮ್ ನಿರ್ದೇಶನದ ಸಿನಿಮಾಗಳನ್ನು ನೋಡಿ ಅವರನ್ನ ಮೆಚ್ಚಿಕೊಂಡವರು. ಹಾಗೆಯೇ ಇದೇ ಮೊದಲ ಬಾರಿಗೆ ಪ್ರೇಮ್ ಡೈರೆಕ್ಟ್ ಮಾಡಿರುವ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ.

  ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿ

  ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿ

  ಸಾಕಷ್ಟು ದಿನಗಳಿಂದ ಚಿತ್ರದ ಬಗ್ಗೆ ಭಾರಿ ಕುತೂಹಲ ಮೂಡಿಸಿರುವ ದಿ ವಿಲನ್ ಚಿತ್ರತಂಡ ಸದ್ಯ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿ ಆಗಿದ್ದಾರೆ. ಆದಷ್ಟು ಬೇಗ ಚಿತ್ರವನ್ನ ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆಯಂತೆ.

  English summary
  Rakshitha is making a comeback of sorts to films, which will also see her team up for the first time with husband Prem as a director. She has been dubbing for The Villain’s lead actress Amy Jackson for the last few days.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X