»   » ರಾಮ್ ಚರಣ್, ಉಪಾಸನಾ ಮದುವೆ ಆಮಂತ್ರಣ ಪತ್ರಿಕೆ

ರಾಮ್ ಚರಣ್, ಉಪಾಸನಾ ಮದುವೆ ಆಮಂತ್ರಣ ಪತ್ರಿಕೆ

Posted By:
Subscribe to Filmibeat Kannada

ಮೆಗಾಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ಹಾಗೂ ಉಪಾಸನಾ ಕಾಮಿನೇನಿ ಮದುವೆ ಜೂನ್ 14ರಂದು ನೆರವೇರಲಿದೆ. ಅವರ ಮದುವೆ ಆಮಂತ್ರಣ ಪತ್ರಿಕೆ ನಮ್ಮ ಒನ್‍ಇಂಡಿಯಾ ಕಚೇರಿಗೂ ಬಂದು ತಲುಪಿದೆ. ನೀವೀಗ ಫೋಟೋದಲ್ಲಿ ನೋಡುತ್ತಿರುವುದು ಅದೇ ಮದುವೆ ಆಮಂತ್ರಣ ಪತ್ರಿಕೆ.

ಟಾಲಿವುಡ್‌ನಲ್ಲಿ ನಡೆಯುತ್ತಿರುವ ಮತ್ತೊಂದು ಅದ್ದೂರಿ ಮದುವೆ ಇದಾಗಿದೆ. ಅಭಿಮಾನಿಗಳಿಗೆಂದೇ ವಿಶೇಷ ಆರತಕ್ಷತೆ ಕಾರ್ಯಕ್ರಮವನ್ನು ಚಿರಂಜೀವಿ ಕುಟುಂಬ ತಿರುಪತಿಯಲ್ಲಿ ಜೂನ್ 15ರಂದು ಹಮ್ಮಿಕೊಂಡಿದೆ.

ಇತ್ತೀಚೆಗೆ ಚಿರಂಜೀವಿ ತಿರುಪತಿಗೆ ಭೇಟಿ ನೀಡಿ ಮೊದಲ ಆಹ್ವಾನ ಪತ್ರಿಕೆಯನ್ನು ತಿಮ್ಮಪ್ಪನ ಹುಂಡಿಗೆ ಹಾಕಿ ಕೃತಾರ್ಥರಾದರು. ಬಳಿಕ ವಿಜಯವಾಡಗೆ ಭೇಟಿ ನೀಡಿ ಅಲ್ಲಿ ತಾಯಿ ದುರ್ಗೆಯ ಪಾದಗಳಿಗೆ ಆಹ್ವಾನ ಪತ್ರಿಕೆಯನ್ನು ಸಲ್ಲಿಸಿದ್ದಾರೆ. ಸರಳ ಸುಂದರವಾಗಿರುವ ಈ ಕಾರ್ಡ್ ವಿನ್ಯಾಸ ಹಾಗೂ ಮುದ್ರಣ ನವದೆಹಲಿಯಲ್ಲಿ ಆಗಿದೆ. (ಏಜೆನ್ಸೀಸ್)

English summary
Telugu actor Mega Power star Ram Charan, Upasana Wedding Card. Ram Charan and Upasana marriage is fixed on June 14, 2012. The card designed and printed in New Delhi.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada