»   » ಬದುಕಿದ್ದಾಗಲೇ ಬಾಲಚಂದರ್ ಗೆ ಶ್ರದ್ಧಾಂಜಲಿ ಸಲ್ಲಿಸಿದ ವರ್ಮಾ

ಬದುಕಿದ್ದಾಗಲೇ ಬಾಲಚಂದರ್ ಗೆ ಶ್ರದ್ಧಾಂಜಲಿ ಸಲ್ಲಿಸಿದ ವರ್ಮಾ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ವಿವಾದಾತ್ಮಕ ಟ್ವೀಟ್ ಮಾಡುವುದರಲ್ಲಿ ಎತ್ತಿದ ಕೈ ಎನಿಸಿರುವ ವರ್ಮಾ(RGV) ಅವರು ಮತ್ತೊಮ್ಮೆ ಪಬ್ಲಿಕ್ ಆಗಿ ಎಲ್ಲರ ಮುಂದೆ ತಲೆ ತಗ್ಗಿಸಿದ್ದಾರೆ. ಅನಾರೋಗ್ಯಪೀಡಿತರಾಗಿ ಆಸ್ಪತ್ರೆ ಸೇರಿರುವ ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಕೆ ಬಾಲಚಂದರ್ ಅವರು ಬದುಕಿದ್ದಾಗಲೇ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.

ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಸಕತ್ ಆಗಿ ಸಕ್ರಿಯರಾಗಿರುವ ವರ್ಮಾ ಅವರು ಡಿ.16ರಂದು ಕೆ ಬಾಲಚಂದರ್ ಅವರ ಅನಾರೋಗ್ಯದ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆ ಚೆನ್ನೈನ ಕಾವೇರಿ ಆಸ್ಪತ್ರೆ ವೈದ್ಯರು ಕೂಡಾ ಪರಿಸ್ಥಿತಿ ಗಂಭೀರವಾಗಿದೆ ಎಂದು ಪ್ರಕಟಿಸಿದ್ದರು. ['ತಮಿಳುನಾಡಿನ ರಾಜಧಾನಿ ಬೆಂಗಳೂರಾಗಿದ್ರೆ ಚೆಂದ' ಎಂದ ವರ್ಮಾ]

ಈ ವೇಳೆಯಲ್ಲಿ ವರ್ಮಾ ಅವರಿಗೆ ಎಲ್ಲಿಂದ ಸುದ್ದಿ ಬಂತೋ ಗೊತ್ತಿಲ್ಲ. ಯಾರಾದರೂ ಸ್ನೇಹಿತರು, ಚಿತ್ರರಂಗದವರನ್ನು ಈ ಬಗ್ಗೆ ಮಾತಾಡಿಸುವ ಜಾಯಮಾನ ವರ್ಮಾ ಅವರದ್ದಲ್ಲ.

RGV Tweets

ಸೋ, ಕೆ ಬಾಲಚಂದರ್ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸುತ್ತೇನೆ ಭಾರತೀಯ ಸಿನಿಮಾದ ಅದ್ಭುತ ನಿರ್ದೇಶಕರಾಗಿದ್ದರು ಎಂದು ಟ್ವೀಟ್ ಮಾಡಿಬಿಟ್ಟರು. ತಕ್ಷಣವೇ ಟ್ವಿಟ್ಟರ್ ನಲ್ಲಿ ಜನ ಉಗಿಯುಲು ತೊಡಗಿದಾಗ ಎಚ್ಚೆತ್ತುಕೊಂಡ ವರ್ಮಾ ಟ್ವೀಟ್ ಡಿಲಿಟ್ ಮಾಡಿದರು. ಅದರೆ, ಆಗಲೇ ಕಾಲ ಮಿಂಚಿತ್ತು. ಜನರಿಗೆ ವರ್ಮಾ ಮಾಡಿದ ಪ್ರಮಾದದ ಅರಿವಾಗಿತ್ತು. [ಕೆ.ಬಾಲಚಂದರ್ ಆರೋಗ್ಯ ಗಂಭೀರ: ಆಸ್ಪತ್ರೆಗೆ ರಜನಿ ಭೇಟಿ]

ಸಂತೆಯಲ್ಲಿ ನಿಂತು ಬೆತ್ತಲಾದರು ಎಂಬ ಸ್ಥಿತಿ ಅನುಭವಿಸಿದ ವರ್ಮಾ ಮಾಡಿದ ತಪ್ಪಿಗೆ ಡಿ.17ರಂದು ಕ್ಷಮೆಯಾಚಿಸಿದ್ದಾರೆ. ಗಾಳಿಸುದ್ದಿಯನ್ನು ಕಿವಿಯೊಳಗೆ ಬಿಟ್ಟುಕೊಂಡರೆ ತಲೆ ಹಾಳು ಎಂಬ ಮಾತು ವರ್ಮಾ ಮರ್ಮಗೆ ಯಾವಾಗ ತಾಕುವುದೋ ಗೊತ್ತಿಲ್ಲ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

ನಿರ್ದೇಶಕ ಕೆ. ಬಾಲಚಂದರ್ ಅವರು ತಮ್ಮ ಚಿತ್ರಗಳ ಮೂಲಕ ಕಮಲ್ ಹಾಸನ್, ರಜನಿಕಾಂತ್, ಪ್ರಕಾಶ್ ರೈ, ರಮೇಶ್ ಅರವಿಂದ್, ನಟಿ ಗೀತಾ ಸೇರಿದಂತೆ ಆನೇಕ ಸಿನಿತಾರೆಯರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Ram Gopal Varma apologies after a Big Blunder. RGV(Ram Gopal Varma), the director who is quite known for his controversies in the film industry, has now come up with another one. RGV tweeted condolence message to K Balanchandar later deleted the tweet.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada