For Quick Alerts
  ALLOW NOTIFICATIONS  
  For Daily Alerts

  Ntr ಬೆನ್ನಿಗೆ ಚೂರಿ ಹಾಕಿದ ಕಥೆ ಬಿಚ್ಚಿಟ್ಟ ವರ್ಮಾ, 'ಬಾಬು' ಮೇಲೆ ಅಟ್ಯಾಕ್.!

  |
  ಚಂದ್ರಬಾಬು ನಾಯ್ಡು ವಿರುದ್ಧ ಗುಡುಗಿದ RGV..! | FILMIBEAT KANNADA

  ತೆಲುಗು ಲೋಕದಲ್ಲಿ ಎನ್.ಟಿ.ಆರ್ ಬಯೋಪಿಕ್ ಭಾರಿ ಕುತೂಹಲ ಮೂಡಿಸಿದೆ. ಒಂದು ಕಡೆ ಬಾಲಕೃಷ್ಣ ತಮ್ಮ ತಂದೆಯ ಯಶಸ್ಸಿನ ಬದುಕನ್ನ ಕಟ್ಟಿಕೊಡುತ್ತಿದ್ದಾರೆ. 'ಎನ್.ಟಿ.ಆರ್ ಕಥಾನಾಯಕುಡು' ಮತ್ತು 'ಎನ್.ಟಿ.ಆರ್ ಮಹಾನಾಯಕುಡು' ಎಂದು ಎರಡು ಭಾಗ ತಯಾರಾಗಿದೆ.

  ಈ ಚಿತ್ರದಲ್ಲಿ ಎನ್.ಟಿ.ಆರ್ ಅವರನ್ನ ಓರ್ವ ಸಿನಿಮಾ ನಾಯಕನಾಗಿ, ಓರ್ವ ಜನನಾಯಕನಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಆದ್ರೆ, ಈ ಚಿತ್ರಕ್ಕೆ ಎದುರಾಗಿ ಎನ್.ಟಿ.ಆರ್ ಅವರ ಇನ್ನೊಂದು ಬಯೋಪಿಕ್ ಸಿನಿಮಾ ಸದ್ದು ಮಾಡುತ್ತಿದೆ.

  ರೂಪದರ್ಶಿ ರೂಪಾಲಿ ಬಗ್ಗೆ ಹಬ್ಬಿದ್ದ ಸುದ್ದಿ ಸುಳ್ಳು ಎಂದ ವರ್ಮಾ ರೂಪದರ್ಶಿ ರೂಪಾಲಿ ಬಗ್ಗೆ ಹಬ್ಬಿದ್ದ ಸುದ್ದಿ ಸುಳ್ಳು ಎಂದ ವರ್ಮಾ

  ರಾಮ್ ಗೋಪಾಲ್ ವರ್ಮಾ ನಿರ್ದೇಶನದಲ್ಲಿ ಮೂಡಿಬರ್ತಿರುವ 'ಲಕ್ಷ್ಮೀಸ್ ಎನ್.ಟಿ.ಆರ್' ಇಂಡಸ್ಟ್ರಿಯನ್ನ ಬೆಚ್ಚಿಬೀಳಿಸುತ್ತಿದೆ. ಎನ್.ಟಿ.ಆರ್ ಅವರಿಗೆ ಮೋಸ ಮಾಡಲಾಗಿದೆ, ಅವರ ಜೊತೆಯಲ್ಲೇ ಇದ್ದು ದ್ರೋಹ ಮಾಡಿದ್ದಾರೆ ಎಂದು ವರ್ಮಾ ಹೇಳ್ತಿದ್ದಾರೆ. ಇದು ತೆಲುಗು ಸಿನಿಲೋಕವನ್ನ ಮಾತ್ರವಲ್ಲ, ಇಡೀ ದೇಶವನ್ನೇ ಅಚ್ಚರಿಗೆ ನೂಕಿದೆ. ಏನಿದು ಆರ್.ಜಿ.ವಿ ಹೇಳ್ತಿರೋದು?

  ಎನ್.ಟಿ.ಆರ್ ಗೆ ಬಾಬು ಮೋಸ ಮಾಡಿದ್ರಾ?

  ಎನ್.ಟಿ.ಆರ್ ಗೆ ಬಾಬು ಮೋಸ ಮಾಡಿದ್ರಾ?

  ಎನ್.ಟಿ.ಆರ್ ಗರಡಿಯಲ್ಲಿ ಬೆಳೆದ ಚಂದ್ರ ಬಾಬು ನಾಯ್ಡು ಒಂದು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದಾರೆ. ಎನ್.ಟಿ.ಆರ್ ಕಟ್ಟಿದ 'ತೆಲುಗು ದೇಶಂ ಪಕ್ಷದ' ಚುಕ್ಕಾಣಿ ಹಿಡಿದಿರುವ ಬಾಬು ಬಗ್ಗೆ ಆರ್.ಜಿ.ವಿ ಪರೋಕ್ಷವಾಗಿ ಅಟ್ಯಾಕ್ ಮಾಡಿದ್ದಾರೆ ಎಂಬ ಅನುಮಾನ ಈಗ ಬಂದಿದೆ. ಅದಕ್ಕೆ ಕಾರಣ, ವರ್ಮಾ ನಿರ್ದೇಶನದಲ್ಲಿ ಬರ್ತಿರುವ ಲಕ್ಷ್ಮೀಸ್ ಎನ್.ಟಿ.ಆರ್ ಸಿನಿಮಾ. ಅದರಲ್ಲೂ ಈಗ ಬಿಡುಗಡೆಯಾಗಿರುವ ಹಾಡು.

  ಇವರನ್ನ ಹುಡುಕಿ ಕೊಟ್ಟವರಿಗೆ ಒಂದು ಲಕ್ಷ ರೂಪಾಯಿ ಕೊಡ್ತಾರೆ ರಾಮ್ ಗೋಪಾಲ್ ವರ್ಮಾ.! ಇವರನ್ನ ಹುಡುಕಿ ಕೊಟ್ಟವರಿಗೆ ಒಂದು ಲಕ್ಷ ರೂಪಾಯಿ ಕೊಡ್ತಾರೆ ರಾಮ್ ಗೋಪಾಲ್ ವರ್ಮಾ.!

  ದೇವರಂತಿದ್ದ ಮನುಷ್ಯನಿಗೆ ವಂಚನೆ

  ದೇವರಂತಿದ್ದ ಮನುಷ್ಯನಿಗೆ ವಂಚನೆ

  ವರ್ಮಾ ರಿಲೀಸ್ ಮಾಡಿರುವ ಹಾಡಿನಲ್ಲಿ ಎನ್.ಟಿ.ಆರ್ ಗೆ ಮೋಸ ಮಾಡಲಾಗಿದೆ, ಜೊತೆಯಲ್ಲೇ ಇದ್ದು ಅವರಿಗೆ ವಂಚನೆ ಮಾಡಿದ್ದಾರೆ. ಬೆನ್ನಿಗೆ ಚೂರಿ ಹಾಕಿ, ಅವರ ನಂಬಿಕೆಗಳಿಗೆ ದ್ರೋಹ ಮಾಡಿದ್ದಾರೆ ಎಂದು ಆರ್.ಜಿ.ವಿ ಹೇಳ್ತಿದ್ದಾರೆ. ಆದ್ರೆ, ಎನ್.ಟಿ.ಆರ್ ಗೆ ಮೋಸ ಮಾಡಿದ್ದು ಯಾರು ಎಂದು ಅಧಿಕೃತವಾಗಿ ಹೇಳಿಲ್ಲ. ಬಟ್, ಈ ಹಾಡಿನ ಲಿರಿಕಲ್ ವಿಡಿಯೋದಲ್ಲಿ ಎನ್.ಟಿ.ಆರ್ ಮತ್ತು ಚಂದ್ರಬಾಬು ನಾಯ್ಡು ಇಬ್ಬರು ಒಟ್ಟಿಗೆ ಇರುವ ಫೋಟೋಗಳನ್ನ ಹಾಕಿದ್ದಾರೆ. ಇದು ನಿಜಕ್ಕೂ ದೊಡ್ಡ ಶಾಕ್ ನೀಡಿದೆ.

  ಬಾಬು ಮೇಲೆ ವರ್ಮಾ ಅಟ್ಯಾಕ್.!

  ಬಾಬು ಮೇಲೆ ವರ್ಮಾ ಅಟ್ಯಾಕ್.!

  ''ಮೋಸ, ಮಹಾ ಮೋಸ.....ನಂಬಿಸಿ ಬೆನ್ನಿಗೆ ಚೂರಿ ಹಾಕಿದ. ಕುತಂತ್ರ ಎಲ್ಲವೂ ಕುತಂತ್ರ..'' ಎಂದು ಮೂಡಿಬಂದಿರುವ ಹಾಡು ಚಂದ್ರಬಾಬು ನಾಯ್ಡು ಬಗ್ಗೆನಾ ಎಂದು ಜನರು ಚರ್ಚೆ ಮಾಡ್ತಿದ್ದಾರೆ. ಇದನ್ನ ಗಮನಿಸಿದ ಬಾಬು ಅವರ ಅಭಿಮಾನಿಗಳು ಮತ್ತು ಬೆಂಬಲಿಗರು ವರ್ಮಾ ವಿರುದ್ಧ ಕಿಡಿಕಾರುತ್ತಿದ್ದಾರೆ. ಚಂದ್ರಬಾಬು ನಾಯ್ಡು ಅವರನ್ನ ತೇಜೋವಧೆ ಮಾಡ್ತಿದ್ದಾರೆ ಎಂದು ಆರೋಪಿಸಿದ್ದಾರೆ.

  'ರೈ' ಸಿನಿಮಾ ನಿಂತು ಹೊಯ್ತಾ ? ಏನಂತಾರೆ ವರ್ಮ ? 'ರೈ' ಸಿನಿಮಾ ನಿಂತು ಹೊಯ್ತಾ ? ಏನಂತಾರೆ ವರ್ಮ ?

  ನಿಜಕ್ಕೂ ವರ್ಮಾ ಹೇಳೋಕೆ ಹೊರಟಿರೋದು ಏನು?

  ನಿಜಕ್ಕೂ ವರ್ಮಾ ಹೇಳೋಕೆ ಹೊರಟಿರೋದು ಏನು?

  ಸದ್ಯದ ಮಾಹಿತಿ ಪ್ರಕಾರ, ಎನ್.ಟಿ.ಆರ್ ಅವರ ಪತ್ನಿ ಲಕ್ಷ್ಮೀ ಅವರ ಕಥೆಯ ಆಧಾರದ ಮೇಲೆ ಈ ಬಯೋಪಿಕ್ ಮಾಡಲಾಗುತ್ತಿದ್ದು, ಲಕ್ಷ್ಮಿ ಆಗಮನದ ನಂತರ ಎನ್.ಟಿ.ಆರ್ ಜೀವನದಲ್ಲಿ ಏನೆಲ್ಲಾ ಆಯ್ತು ಎಂದು ತೋರಿಸುತ್ತಿದ್ದಾರಂತೆ. ಆದ್ರೀಗ, ಚಂದ್ರು ಬಾಬು ನಾಯ್ಡು ಮತ್ತು ಎನ್.ಟಿ.ಆರ್ ಸಂಬಂಧದ ಬಗ್ಗೆ ವರ್ಮಾ ಪ್ರಸ್ತಾಪಿಸಿರುವುದು ಹತ್ತು ಹಲವು ಅನುಮಾನಗಳಿಗೆ ಕಾರಣವಾಗಿದೆ.

  ಸಿನಿಮಾ ಯಾವಾಗ ರಿಲೀಸ್?

  ಸಿನಿಮಾ ಯಾವಾಗ ರಿಲೀಸ್?

  ದೆವ್ವಗಳು ಸೇರಿ ದೇವರಂತೆ ಮನುಷ್ಯನನ್ನ ತೆಲುಗು ಪ್ರಜೆಗಳಿಂದ ದೂರು ಮಾಡಿದ ಕಥೆ ಇದು ಎಂದು ಹೇಳಿಕೊಂಡಿರುವ ಎನ್.ಟಿ.ಆರ್ ಜನವರಿ ತಿಂಗಳಲ್ಲಿ ಈ ಸಿನಿಮಾವನ್ನ ತೆರೆಗೆ ತರಲಿದ್ದಾರೆ. ಬಟ್, ಇಲ್ಲಿಯವರೆಗೂ ಯಾವುದೇ ಅಡೆತಡಯಿಲ್ಲದೇ ಸಾಗಿ ಬಂದಿದ್ದ ಸಿನಿಮಾ, ಚಂದ್ರ ಬಾಬು ನಾಯ್ಡು ಅವರ ಹೆಸರು ಪ್ರಸ್ತಾಪಿಸಿ ವಿವಾದಕ್ಕೆ ಗುರಿಯಾಗಿದೆ. ಮುಂದೆ ಏನಾಗುತ್ತೋ ಕಾದು ನೋಡಬೇಕಿದೆ.

  English summary
  Ram gopal varma tweet on ''That NTR was the most amazing thing that happened to telugus is a celebrated truth. But more than knowing how a lion learnt to roar or how it ruled we need to know which Devil took that God’s life away''.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X