For Quick Alerts
  ALLOW NOTIFICATIONS  
  For Daily Alerts

  ಬಿಟೌನ್ ನಲ್ಲೂ ವರ್ಮಾರ 'ವೀರಪ್ಪನ್' ಘರ್ಜನೆ,ಶಿವಣ್ಣ ಪಾತ್ರಕ್ಕೆ ಯಾರು?

  By Suneetha
  |

  ಈ ವರ್ಷದ ಆರಂಭದಲ್ಲಿ ಕುಖ್ಯಾತ ಕಾಡುಗಳ್ಳ ವೀರಪ್ಪನ್ ಅವರ ನಿಜ ಚರಿತ್ರೆಯಾಧರಿತ ಕಥೆಯನ್ನು 'ಕಿಲ್ಲಿಂಗ್ ವೀರಪ್ಪನ್' ಎಂಬ ಸಿನಿಮಾದ ಮೂಲಕ ತೆರೆಯ ಮೇಲೆ ತಂದಿದ್ದ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಇದೀಗ ಅದೇ ಸಿನಿಮಾವನ್ನು ಹಿಂದಿಯಲ್ಲಿ ಬಿಡುಗಡೆ ಮಾಡಲು ತಯಾರಿ ಮಾಡುತ್ತಿದ್ದಾರೆ.

  ಕನ್ನಡದಲ್ಲಿ ಹಾಗೂ ತೆಲುಗಿನಲ್ಲಿ 'ಕಿಲ್ಲಿಂಗ್ ವೀರಪ್ಪನ್' [ಕಿಲ್ಲಿಂಗ್ ವೀರಪ್ಪನ್: ಕನ್ನಡ ಚಲನಚಿತ್ರ ವಿಮರ್ಶೆ] ಅಂತ ಸಿನಿಮಾ ಮಾಡಿದ್ದ ಆರ್.ಜಿ.ವಿ ಅವರು ಹಿಂದಿಯಲ್ಲಿ ಅದನ್ನು 'ವೀರಪ್ಪನ್' ಎಂದಾಗಿಸಿದ್ದಾರೆ. ವರ್ಮಾ ಅವರು ಹೇಳುವ ಪ್ರಕಾರ ಇದು ಕನ್ನಡದ ರೀಮೆಕ್ ಅಲ್ಲ ಬದ್ಲಾಗಿ ರೀಮೇಡ್ ಮಾಡಲಾಗಿದೆ.

  ಅಂದರೆ ಮತ್ತೊಮ್ಮೆ ಶೂಟಿಂಗ್ ಮಾಡುವ ಮೂಲಕ ಚಿತ್ರದಲ್ಲಿ ಕೆಲವಾರು ಬದಲಾವಣೆಗಳನ್ನು ಮಾಡಿದ್ದಾರೆ. ಚಿತ್ರದಲ್ಲಿ ವೀರಪ್ಪನ್ ಪಾತ್ರದಲ್ಲಿ ಸಂದೀಪ್ ಭಾರದ್ವಾಜ್ ಅವರೇ ಮಿಂಚಲಿದ್ದಾರೆ. ಆದರೆ ಶಿವಣ್ಣ ಅವರು ಮಾಡಿದ ಪಾತ್ರವನ್ನು ಯಾರು ಮುಂದುವರಿಸಲಿದ್ದಾರೆ ಅನ್ನೋದು ಗುಟ್ಟಾಗಿದೆ.['ವೀರಪ್ಪನ್' ಆಗೋಕೆ ಸಂದೀಪ್ ಏನೆಲ್ಲಾ ಮಾಡಿದ್ರು ಗೊತ್ತಾ]

  ಕನ್ನಡದಲ್ಲಿ ಮುತ್ತುಲಕ್ಷ್ಮಿ ಪಾತ್ರವನ್ನು ಯಜ್ಞಾ ಶೆಟ್ಟಿ ಅವರು ನಿರ್ವಹಿಸಿದ್ದರು. ಆದರೆ ಹಿಂದಿ ಭಾಷೆಯಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತೆ ಉಷಾ ಜಾಧವ್ ಅವರು ಮುತ್ತುಲಕ್ಷ್ಮಿ ಪಾತ್ರಕ್ಕೆ ಜೀವ ತುಂಬಲಿದ್ದಾರೆ.

  ಇನ್ನುಳಿದಂತೆ ಸಿನಿಮಾ ಶೂಟಿಂಗ್ ಬಗ್ಗೆಯಾಗಲಿ, ತಾರಾಗಣದ ಬಗ್ಗೆಯಾಗಲಿ ಯಾವುದೇ ಮಾಹಿತಿ ನೀಡದ ನಿರ್ದೇಶಕ ವರ್ಮಾ ಅವರು ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿ ಮೇ 27 ಚಿತ್ರದ ಬಿಡುಗಡೆ ದಿನಾಂಕ ಅಂತ ಘೋಷಿಸಿದ್ದಾರೆ.[ಹಾಲಿವುಡ್ ನಲ್ಲೂ 'ವೀರಪ್ಪನ್' ಹವಾ ಶುರು ಮಾಡ್ತಾರಂತೆ ವರ್ಮಾ]

  ಈ ನಡುವೆ ಅದೇ ದಿನ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಅವರ 'ರಮನ್ ರಾಘವ' ಕೂಡ ತೆರೆ ಕಾಣಲಿದ್ದು, ಸಖತ್ ಪೈಪೋಟಿ ನೀಡೋದು ಗ್ಯಾರಂಟಿ.

  English summary
  Hindi Movie 'Veerappan' is all set to release on May 27th. Actor Sandeep Bharadawaj, Actress Usha Jadhav in the lead role. The Movie is directed by Ram Gopal Varma.
  Thursday, April 14, 2016, 9:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X