»   » 'ರೈ' ಸಿನಿಮಾ ನಿಂತು ಹೊಯ್ತಾ ? ಏನಂತಾರೆ ವರ್ಮ ?

'ರೈ' ಸಿನಿಮಾ ನಿಂತು ಹೊಯ್ತಾ ? ಏನಂತಾರೆ ವರ್ಮ ?

Posted By:
Subscribe to Filmibeat Kannada
'ರೈ' ಸಿನಿಮಾ ನಿಂತು ಹೊಯ್ತಾ ? ಏನಂತಾರೆ ವರ್ಮ ? | Filmibeat Kannada

'ರೈ' ಸಿನಿಮಾ ಹೆಸರನ್ನು ಈಗ ಅನೇಕರು ಮರೆತು ಬಿಟ್ಟಿದ್ದಾರೆ. ಅದ್ದೂರಿಯಾಗಿ ಲಾಂಚ್ ಆದ ಈ ಸಿನಿಮಾ ಶುರುವಿನಲ್ಲಿ ದೊಡ್ಡ ಸದ್ದು ಮಾಡಿದ್ದ ಈ ಚಿತ್ರ ಆ ನಂತರ ಅದೆಕೋ ಸೈಲೆಂಟ್ ಆಗಿ ಹೋಯ್ತು. ಅನೇಕರು ಈ ಸಿನಿಮಾ ಬರುತ್ತದೆಯೋ.. ಇಲ್ವೋ..? ಎನ್ನುವ ಅನುಮಾನದಲ್ಲಿ ಇದ್ದರು. ಆದರೆ ಇದೀಗ ಈ ಸಿನಿಮಾ ನಿಂತಿಲ್ಲ ಎಂದು ಸ್ವತಃ ನಿರ್ದೇಶಕ ರಾಮ್ ಗೋಪಾಲ್ ವರ್ಮ ಹೇಳಿದ್ದಾರೆ.

ರಾಮ್ ಗೋಪಾಲ್ ವರ್ಮ ರಿಯಲ್ ಸ್ಟೋರಿಯನ್ನು ಮಾಡುವುದರಲ್ಲಿ ಎತ್ತಿದ ಕೈ. ಅದೇ ರೀತಿ ವರ್ಮ ಮುತ್ತಪ್ಪ ರೈ ಜೀವನದ ಬಗ್ಗೆ 'ರೈ' ಸಿನಿಮಾ ಮಾಡುವುದಾಗಿ ಹೇಳಿದ್ದರು. ವಿವೇಕ್ ಒಬೆರಾಯ್ ಸಿನಿಮಾದ ನಾಯಕನಾಗಿದ್ದರು. ಸಿ.ಆರ್.ಮನೋಹರ್ ಚಿತ್ರಕ್ಕೆ ಬಂಡವಾಳ ಹಾಕಲು ಮುಂದೆ ಬಂದಿದ್ದರು. ಇವುಗಳ ಜೊತೆಗೆ ಸಿನಿಮಾ ಕೂಡ ಲಾಂಚ್ ಆಗಿತ್ತು. ಆದರೆ ಅದರ ನಂತರ ಚಿತ್ರದ ಶೂಟಿಂಗ್ ಶುರು ಇದುವರೆಗೆ ಆಗಿಯೇ ಇಲ್ಲ.

Ram Gopal Varma spoke about Rai kannada movie

'ರೈ' ಸಿನಿಮಾದ ಚಿತ್ರೀಕರಣ ಯಾಕೆ ಶುರು ಆಗಿಲ್ಲ. ಸಿನಿಮಾ ಲಾಂಚ್ ಆಗಿ ಇಷ್ಟ ದಿನ ಆದರೂ ಅದರ ಸುದ್ದಿಯೇ ಯಾಕಿಲ್ಲ. ಹಾಗಾದರೆ, 'ರೈ' ಸಿನಿಮಾ ನಿಂತು ಹೋಗಿದೇಯಾ? ಎನ್ನುವುದು ಎಲ್ಲರಿಗೂ ಇದ್ದ ಪ್ರಶ್ನೆ. ಆದರೆ ಈಗ ಅದರ ಬಗ್ಗೆ ವರ್ಮ ಬಾಯಿ ಬಿಟ್ಟಿದ್ದಾರೆ. ''ರೈ ಸಿನಿಮಾ ನಿಂತಿಲ್ಲ. ಅದು ಕಾರಣಾಂತರಗಳಿಂದ ಮುಂದಕ್ಕೆ ಹೋಗಿದೆ ಅಷ್ಟೆ'' ಎಂದು ವರ್ಮ ಚಿತ್ರದ ಬಗ್ಗೆ ಕ್ಲಾರಿಟಿ ನೀಡಿದ್ದಾರೆ.

'ಟಗರು' ಮೇಲೆ ಬಿತ್ತು ಆರ್.ಜಿ.ವಿ ಕಣ್ಣು : ಮಾನ್ವಿತಾ ಬಗ್ಗೆ ವರ್ಮ ಕಮೆಂಟ್

ಅಂದಹಾಗೆ, ನಿನ್ನೆ ಬೆಂಗಳೂರಿನ ಓರಾಯನ್ ಮಾಲ್ ನಲ್ಲಿ ರಾಮ್ ಗೋಪಾಲ್ ವರ್ಮ 'ಟಗರು' ಸಿನಿಮಾವನ್ನು ನೋಡಿದರು. ಇದೇ ವೇಳೆ 'ರೈ' ಸಿನಿಮಾದ ಬಗ್ಗೆ ಕೂಡ ಅವರು ಹೇಳಿಕೆ ನೀಡಿದ್ದಾರೆ.

English summary
Director Ram Gopal Varma spoke about Rai kannada movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X