For Quick Alerts
  ALLOW NOTIFICATIONS  
  For Daily Alerts

  'ಜೇಮ್ಸ್' ಚಿತ್ರಕ್ಕೆ ರಾಮ್-ಲಕ್ಷ್ಮಣ್ ಎಂಟ್ರಿ, ಶ್ರೀಮುರಳಿ ಸೆಲ್ಫಿ ವೈರಲ್

  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟಿಸುತ್ತಿರುವ 'ಜೇಮ್ಸ್' ಚಿತ್ರದ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಸದ್ಯ ಆಕ್ಷನ್ ದೃಶ್ಯಗಳ ಶೂಟಿಂಗ್ ಮಾಡಲಾಗುತ್ತಿದೆ. ತೆಲುಗಿನ ಖ್ಯಾತ ಸಾಹಸ ನಿರ್ದೇಶಕರಾದ ರಾಮ್-ಲಕ್ಷ್ಮಣ್ ಮಾಸ್ಟರ್ ಸಾರಥ್ಯದಲ್ಲಿ ಜೇಮ್ಸ್ ಚಿತ್ರೀಕರಣ ಸಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

  ಇಂದಿನ ಚಿತ್ರೀಕರಣ ಟಗರು, ಸಲಗ ಸಿನಿಮಾಗಳ ನಿರ್ಮಾಪಕ ಕೆಪಿ ಶ್ರೀಕಾಂತ್ ಭೇಟಿ ನೀಡಿದ್ದು, ಟ್ವಿಟ್ಟರ್‌ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಈ ವೇಳೆ ನಿರ್ದೇಶಕ ಚೇತನ್ ಕುಮಾರ್ ಸಹ ಭಾಗಿಯಾಗಿದ್ದರು.

  'ಜೇಮ್ಸ್' ತಂಡದಿಂದ ಬಂತು ಸೂಪರ್ ಫೋಟೋ; ಅಪ್ಪು ಜೊತೆ ಯಾರೆಲ್ಲ ಇದ್ದಾರೆ?'ಜೇಮ್ಸ್' ತಂಡದಿಂದ ಬಂತು ಸೂಪರ್ ಫೋಟೋ; ಅಪ್ಪು ಜೊತೆ ಯಾರೆಲ್ಲ ಇದ್ದಾರೆ?

  ಲಾಕ್‌ಡೌನ್‌ನಿಂದ ಬ್ರೇಕ್ ತೆಗೆದುಕೊಂಡಿದ್ದ ಜೇಮ್ಸ್ ಜುಲೈ 5 ರಿಂದ ಚಿತ್ರೀಕರಣ ಪ್ರಾರಂಭಿಸಿತ್ತು. ಆಕ್ಷನ್ ದೃಶ್ಯ ಸೇರಿದಂತೆ ಟಾಕಿ ಪೋಷನ್‌ನ ದೃಶ್ಯಗಳ ಶೂಟಿಂಗ್ ಮಾಡಿದೆ. ಇತ್ತೀಚಿಗಷ್ಟೆ ಜೇಮ್ಸ್ ಚಿತ್ರದ ಸೆಟ್‌ನಲ್ಲಿ ಕಲಾವಿದರೆಲ್ಲರು ಒಟ್ಟಿಗೆ ಕಾಣಿಸಿಕೊಂಡಿದ್ದ ಫೋಟೋ ವೈರಲ್ ಆಗಿತ್ತು.

  ಕಾಮಿಡಿ ಸ್ಟಾರ್ ಚಿಕ್ಕಣ್ಣ, ನಟ ಹರ್ಷ, ರಂಗಾಯಣ ರಘು, ಶೈನ್ ಶೆಟ್ಟಿ, ಕಾವ್ಯ ಶಾಸ್ತ್ರಿ, ನಯನಾ ಜೊತೆ ಪುನೀತ್ ಇದ್ದ ಫೋಟೋ ವೈರಲ್ ಆಗಿತ್ತು. ಇನ್ನುಳಿದಂತೆ ಅನು ಪ್ರಭಾಕರ್, ತೆಲುಗು ನಟ ಶ್ರೀಕಾಂತ್, ಆದಿತ್ಯ ಮೆನನ್ ಸೇರಿದಂತೆ ಹಲವರು ಜೇಮ್ಸ್‌ನಲ್ಲಿ ನಟಿಸಿದ್ದಾರೆ.

  ಈ ಸಿನಿಮಾ ಮುಗಿಸುತ್ತಿದ್ದಂತೆ 'ಲೂಸಿಯಾ' ನಿರ್ದೇಶಕ ಪವನ್ ಕುಮಾರ್ ಜೊತೆ 'ದ್ವಿತ್ವ' ಆರಂಭಿಸಲಿದ್ದಾರೆ. ಮೊದಲ ಬಾರಿಗೆ ಪವನ್ ಮತ್ತು ಪುನೀತ್ ಕಾಂಬಿನೇಷನ್ ನಲ್ಲಿ ಸೆಟ್ಟೇರುತ್ತಿರಿವ ಸಿನಿಮಾ ಎಂಬ ಕಾರಣಕ್ಕೆ ಕುತೂಹಲ ಹೆಚ್ಚಿಸಿದೆ. ಈಗಾಗಲೇ ಪೋಸ್ಟರ್ ಮೂಲಕ 'ದ್ವಿತ್ವ' ಸಿನಿಮಾ ಹೆಚ್ಚು ಕುತೂಹಲ ಮೂಡಿಸಿದೆ. ಈ ಚಿತ್ರದಲ್ಲಿ ತಮಿಳು ನಟಿ ತ್ರಿಷಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

  'ಮದಗಜ' ಚಿತ್ರದ ಸೆಟ್‌ನಲ್ಲಿ ಶ್ರೀಮುರಳಿ ಸೆಲ್ಫಿ

  ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ 'ಮದಗಜ' ಸಿನಿಮಾದ ಅಂತಿಮ ಹಂತದ ಚಿತ್ರೀಕರಣ ನಡೆಯುತ್ತಿದೆ. 'ಅಯೋಗ್ಯ' ಖ್ಯಾತಿಯ ಮಹೇಶ್ ಕುಮಾರ್ ಈ ಚಿತ್ರ ನಿರ್ದೇಶನ ಮಾಡ್ತಿದ್ದು, 'ರಾಬರ್ಟ್' ನಿರ್ಮಾಪಕ ಉಮಾಪತಿ ಶ್ರೀನಿವಾಸ್ ನಿರ್ಮಾಣ ಮಾಡುತ್ತಿದ್ದಾರೆ. ಇದೀಗ, 'ಮದಗಜ' ಚಿತ್ರೀಕರಣದ ವೇಳೆ ಶ್ರೀಮುರಳಿ ಕ್ಲಿಕ್ಕಿಸಿಕೊಂಡಿರುವ ಸೆಲ್ಫಿ ಫೋಟೋ ವೈರಲ್ ಆಗಿದೆ.

  Ram Lakshman Master Enter To James Shooting

  ಪದಕ ಗೆದ್ದ ಆಟಗಾರ್ತಿಯರಿಗೆ ಶುಭಕೋರಿದ ಸಿಂಪಲ್ ಸುನಿ

  ಟೋಕಿಯೋ ಒಲಂಪಿಕ್‌ನಲ್ಲಿ ಪದಕ ಗೆದ್ದ ಭಾರತೀಯ ಮಹಿಳೆಯ ನಿರ್ದೇಶಕ ಸಿಂಪಲ್ ಸುನಿ ಶುಭಾಶಯ ಕೋರಿದ್ದಾರೆ. ''ಮಹಿಳೆಯರಿಗು ಒಡವೆಗು ಇರುವ ಅವಿನಾಭಾವ ಸಂಬಂಧ ಈಗ ದೇಶದ ಕೀರ್ತಿಯನ್ನು ಹೆಚ್ಚಿಸುತ್ತಿದೆ. ಮೀರಾ ಬಾಯ್ ಬೆಳ್ಳಿ, ಸಿಂಧು ಕಂಚು ಈಗ ಮತ್ತೊಬ್ಬ ಬಾಲೆ ಲವ್ಲಿನಾ ಕಂಚಿನ ಪಂಚು. ಹುಡುಗರು ಆಟಕ್ಕೆ ಎಂದು ಮನೆ ಬಿಟ್ಟಾಗ "ಕ್ರೀಡಾಂಗಣಕ್ಕೆ"ಹೋಗುವಂತೆ ನೋಡಿಕೊಳ್ಳಬೇಕು ನಮ್ಮ ಮುಂದಿನ ಪೀಳಿಗೆಯನ್ನಾದರೂ ಕ್ರಿಕೆಟ್ ಬಿಟ್ಟು ಬೇರೆ ಆಟಗಳತ್ತ ಒಲವು ಮಾಡಬೇಕು'' ಎಂದು ಟ್ವೀಟ್ ಮಾಡಿದ್ದಾರೆ.

  ಪೃಥ್ವಿ ಅಂಬರ್ ಜೊತೆ ಮಾನ್ವಿತಾ ಕಾಮತ್

  'ದಿಯಾ' ಸಿನಿಮಾದ ಮೂಲಕ ಖ್ಯಾತಿ ಗಳಿಸಿಕೊಂಡ ಪೃಥ್ವಿ ಅಂಬರ್ ನಟಿಸುತ್ತಿರುವ ಚಿತ್ರದಲ್ಲಿ ಮಾನ್ವಿತಾ ಕಾಮತ್ ಜೋಡಿಯಾಗಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಸಬೂ ಅಲೋಶಿಯಸ್ ಮತ್ತು ಅರುಣ್ ಕುಮಾರ್ ನಿರ್ದೇಶನ ಮಾಡುತ್ತಿರುವ ಈ ಚಿತ್ರ ಸೈಲೆಂಟ್ ಆಗಿ ಚಿತ್ರೀಕರಣ ಶುರು ಮಾಡಿದೆ.

  'ದಿಯಾ' ಯಶಸ್ಸಿನ ನಂತರ ಪೃಥ್ವಿ ಅಂಬರ್ ಹೆಚ್ಚು ಹೆಚ್ಚು ಸಿನಿಮಾ ಮಾಡ್ತಿದ್ದಾರೆ. ವಿಜಯ್ ಮಿಲ್ಟನ್ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ಬೈರಾಗಿ' ಚಿತ್ರದಲ್ಲಿ ಶಿವರಾಜ್ ಕುಮಾರ್ ಜೊತೆ ನಟಿಸುತ್ತಿದ್ದಾರೆ. ತಮಿಳಿನಿಂದಲೂ ಆಫರ್ ಬಂದಿದ್ದು, ಅಲ್ಲಿಯೂ ಅಭಿನಯಿಸುತ್ತಿದ್ದಾರೆ. ಮತ್ತೊಂದೆಡೆ ಮಾನ್ವಿತಾ ಕಾಮತ್ ಇತ್ತೀಚಿಗಷ್ಟೆ ಪಿಸಿ ಶೇಖರ್ ನಿರ್ದೇಶನದ ಇನ್ನು ಹೆಸರಿಡದ ಚಿತ್ರದಲ್ಲಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

  English summary
  Telugu Top Fight Master's Ram Lakshman enter to powerstar puneeth rajkumar's James shooting.
  Thursday, August 5, 2021, 9:38
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X