Just In
Don't Miss!
- News
ಸಂಸತ್ ಕಟ್ಟಡದ ಮಹಾತ್ಮ ಗಾಂಧಿ ಪ್ರತಿಮೆ ತರಾತುರಿಯಲ್ಲಿ ಸ್ಥಳಾಂತರ
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Lifestyle
ಯಾವಾಗ ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಬೆಳೆಸುತ್ತಾರೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಟ ರಮೇಶ್ ಅರವಿಂದ್ ಮನೆಯಲ್ಲಿ ಮದುವೆ ಸಂಭ್ರಮ ಜೋರು
ಕನ್ನಡದ ಖ್ಯಾತ ನಟ-ನಿರ್ದೇಶಕ ರಮೇಶ್ ಅರವಿಂದ್ ಅವರ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿ ನಡೆಯುತ್ತಿದೆ.
ರಮೇಶ್ ಅರವಿಂದ್ ಮತ್ತು ಅರ್ಚನಾ ದಂಪತಿಯ ಪುತ್ರಿ ನಿಹಾರಿಕಾ ದಾಂಪತ್ಯ ಜೀವನ ಪ್ರವೇಶಿಸುತ್ತಿದ್ದಾರೆ. ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುವ ಅಕ್ಷಯ್ ಜೊತೆ ಸಪ್ತಪದಿ ತುಳಿಯಲು ನಿರ್ಧರಿಸಿದ್ದಾರೆ.
ಪತ್ನಿಗೆ ಅತಿ ದೊಡ್ಡ ಧನ್ಯವಾದ ಹೇಳಿದ ರಮೇಶ್ ಅರವಿಂದ್
ಡಿಸೆಂಬರ್ 28 ರಂದು ಇವರಿಬ್ಬರ ವಿವಾಹ ಮಹೋತ್ಸವ ನಡೆಯಲು ಗುರು ಹಿರಿಯರು ನಿಶ್ಚಯಿಸಿದ್ದು, ಎರಡು ಕುಟುಂಬಗಳ ಸಮ್ಮುಖದಲ್ಲಿ ಕೊವಿಡ್ ನಿಯಮಗಳ ಅನುಸಾರವಾಗಿ ವಿವಾಹ ಜರುಗಲಿದೆ.
ಜನವರಿ ಎರಡನೇ ವಾರದಲ್ಲಿ ನಿಹಾರಿಕ ಮತ್ತು ಅಕ್ಷಯ್ ಅವರ ಆರತಕ್ಷತೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಈ ರಿಸಪ್ಷನ್‌ನಲ್ಲಿ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಭಾಗವಹಿಸುವ ನಿರೀಕ್ಷೆ ಇದೆ.
ಈ ಕುರಿತು ಮಾಧ್ಯಮಗಳ ಜೊತೆ ಸಂತಸ ಹಂಚಿಕೊಂಡಿರುವ ರಮೇಶ್ ಅರವಿಂದ್ ''ನಾನು ಚಿತ್ರರಂಗಕ್ಕೆ ಬಂದ ದಿನದಿಂದಲೂ ನನಗೆ ಕರ್ನಾಟಕದ ಜನತೆ, ಚಿತ್ರರಿಸಕರು ಹಾಗೂ ಮಾಧ್ಯಮದವರು ಪ್ರೋತ್ಸಾಹ, ಬೆಂಬಲ ನೀಡಿದ್ದೀರಾ. ನಿಮ್ಮ ಎಲ್ಲರ ಪ್ರೀತಿ ಮತ್ತು ಆರ್ಶೀವಾದ ಈ ಜೋಡಿಯ ಮೇಲೆ ಇರಲಿ'' ಎಂದು ವಿನಂತಿಸಿದ್ದಾರೆ.
ರಮೇಶ್ ಅರವಿಂದ್ ಹಾಗೂ ಅರ್ಚನಾ 1991 ಜುಲೈ 7 ರಂದು ವಿವಾಹ ಆಗಿದ್ದರು. ಈ ದಂಪತಿಗೆ ಅರ್ಜುನ್ ಎಂಬ ಒಬ್ಬ ಮಗ ಹಾಗೂ ನಿಹಾರಿಕಾ ಎಂಬ ಒಬ್ಬ ಮಗಳು ಇದ್ದಾರೆ.