For Quick Alerts
  ALLOW NOTIFICATIONS  
  For Daily Alerts

  ಬಸವಣ್ಣ ಪಾತ್ರ ಮಾಡಿದ್ದು ನನ್ನ ಅದೃಷ್ಟ; ರಮೇಶ್

  By Rajendra
  |

  ಹನ್ನೆರಡನೇ ಶತಮಾನದಲ್ಲಿಯೇ ಅಸ್ಪೃಶ್ಯತೆ ನಿವಾರಣೆಗಾಗಿ ಹೋರಾಡಿದ ಕ್ರಾಂತಿ ಪುರುಷ ಬಸವಣ್ಣ ದೇವ ಮಾನವನಾಗಿ ಬಾಳಿದ ವ್ಯಕ್ತಿ. ಅಂಥಹ ಬಸವಣ್ಣನ ಹಲವಾರು ಅನುಯಾಯಿಗಳಲ್ಲಿ ಮಹಾಶರಣ ಹರಳಯ್ಯ ಕೂಡ ಒಬ್ಬರು. ಇವರಿಬ್ಬರ ಕಥೆಯನ್ನು ಇಟ್ಟುಕೊಂಡು ನಿರ್ಮಾಣವಾಗುತ್ತಿರುವ ಚಿತ್ರವೇ 'ಮಹಾ ಶರಣ ಹರಳಯ್ಯ'.

  ದೇವಿ ಬಾಗಮ್ಮ, ಜ್ಞಾನ ಜ್ಯೋತಿ ಸಿದ್ದಗಂಗಾದಂತಹ ಭಕ್ತಿ ಪ್ರಧಾನ ಚಿತ್ರಗಳನ್ನೇ ಹೆಚ್ಚಾಗಿ ನಿರ್ದೇಶಿಸಿದ್ದ ಬಿ.ಎ.ಪುರುಷೋತ್ತಮ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಪ್ರೀತಿ ಪ್ರೇಮದ ಕಥೆಯುಳ್ಳ ಸಿನಿಮಾಗಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ನಟ ರಮೇಶ್ ಅರವಿಂದ, ಬಸವಣ್ಣನಾಗಿ ಮೊದಲ ಬಾರಿಗೆ ಐತಿಹಾಸಿಕ ಚಿತ್ರದಲ್ಲಿ ನಟಿಸಿದ್ದಾರೆ.


  ಬಸವಣ್ಣನು ಬಾಳಿ ಬದುಕಿದ ಕೂಡಲ ಸಂಗಮ, ಬಿಜಾಪುರ, ಹುಬ್ಬಳ್ಳಿ, ಕುಂದಗೋಳು, ಚಿತ್ರದುರ್ಗ, ರಾಣಿಬೆನ್ನೂರು ಮೊದಲಾದ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಈಗಾಗಲೇ ಡಬ್ಬಿಂಗ್ ಕೂಡ ಮುಗಿದಿದ್ದು ರೀರೆಕಾರ್ಡಿಂಗ್ ಸಿದ್ಧವಾಗಿದೆ. ಈವರೆಗೆ ನಡೆದ ಚಿತ್ರೀಕರಣದ ಅನುಭವಗಳನ್ನೆಲ್ಲ ಮೊನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ಹೇಳಿಕೊಂಡಿತು.

  ಈಗಿನ ಕಾಲದಲ್ಲಿ ಪೌರಾಣಿಕ ಚಿತ್ರಗಳನ್ನು ನಿರ್ಮಿಸಲು ಯಾರೂ ಮುಂದೆ ಬರುವುದಿಲ್ಲ ಆದರೂ ಧೈರ್ಯ ಮಾಡಿ ನಿರ್ಮಾಪಕರಾದ ದೇವರಾಜ್ ಈ ಚಿತ್ರಕ್ಕೆ ತನ್ನ ಸ್ನೇಹಿತರೊಂದಿಗೆ ಸೇರಿ ಹಣ ಹಾಕಿದ್ದಾರೆ.

  ರಮೇಶ್ ಮೊದಲ ಬಾರಿಗೆ ಇತಿಹಾಸ ಪುರುಷನಾಗಿ ಹೊರಹೊಮ್ಮಿದ್ದಾರೆ. ಬಸವಣ್ಣನ ಪ್ರತಿರೂಪವೇ ಅವತರಿಸಿದಂತೆ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹರಳಯ್ಯನಾಗಿ ನಟ ಶ್ರೀಧರ್, ಬಿಜ್ಜಳನಾಗಿ ರಾಮಕೃಷ್ಣ, ಕೊಂಡಿ ಮಂಚಣ್ಣನಾಗಿ ರಮೇಶ ಭಟ್, ಹರಳಯ್ಯನ ಪುತ್ರನಾಗಿ ಡಿಂಗ್ರಿ ನಾಗರಾಜ್ ಮಗ ರಾಜುವರ್ಧನ ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ನೈಜತೆ ಬರುವಲ್ಲಿ ತುಂಬ ಶ್ರಮಿಸಿದ್ದಾರೆ.

  ಇದೇ ತಿಂಗಳ 29 ರಂದು ಧ್ವನಿಸುರುಳಿ ಬಿಡುಗಡೆಯಾಗಲಿದ್ದು ಅಕ್ಟೋಬರ್ ಮೊದಲ ವಾರದಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ ಎಂದು ನಿರ್ದೇಶಕ ಪುರುಷೋತ್ತಮ್ ಚಿತ್ರದ ಬಗ್ಗೆ ವಿವರವಾಗಿ ಹೇಳಿಕೊಂಡರು.

  ನಟ ರಮೇಶ್ ಮಾತನಾಡಿ ಮಾನವರೆಲ್ಲ ಒಂದೇ ಜಾತಿ ಎಂಬ ಆದರ್ಶವನ್ನಿಟ್ಟುಕೊಂಡು ಅಂತರ್ಜಾತಿಯ ವಿವಾಹವನ್ನು ಎತ್ತಿ ಹಿಡಿದ ಬಸವಣ್ಣನಂಥಹ ಮಹಾಪುರುಷನ ಪಾತ್ರ ಮಾಡಿದ್ದು ನನ್ನ ಅದೃಷ್ಟ.

  12ನೇ ಶತಮಾನದಲ್ಲಿ ಸಮಾಜದ ಕಣ್ಣನ್ನು ತೆರೆಸುವಲ್ಲಿ ಹೋರಾಡಿದ ಇತಿಹಾಸ ಪುರುಷ ಬಸವಣ್ಣನ ಬಗ್ಗೆ ಪುಸ್ತಕದಲ್ಲಿ ಮಾತ್ರ ಓದಿದ್ದೆ. ಈಗ ಅದೇ ಪಾತ್ರವನ್ನು ಅನುಭವಿಸಿ ನಟಿಸುವ ಚಾನ್ಸ್ ನನ್ನದಾಗಿದೆ. ಚಿತ್ರವನ್ನು ವೀಕ್ಷಿಸಲು ನಾನು ಕಾತುರನಾಗಿದ್ದೇನೆ ಎಂದರು.

  ಹಿರಿಯ ನಟ ಉದಯ್ ಕುಮಾರ್ ಪುತ್ರ ವಿಕ್ರಮ್, ಹರಳಯ್ಯನ ತಂದೆಯಾಗಿ ಅಭಿನಯಿಸಿದ್ದಾರೆ. ನಿರ್ಮಾಪಕರಾದ ಎ.ದೇವರಾಜ್, ಕೆ.ಬಿ.ರವಿಚಂದ್ರ, ಕೆ.ಎನ್.ವೆಂಕಟೇಶ್ ಹಾಸನ್ ಚಿತ್ರದ ಬಗ್ಗೆ ಮಾತನಾಡಿದರು. (ಒನ್ಇಂಡಿಯಾ ಕನ್ನಡ)

  English summary
  Kannada actor Ramesh Aravind is so lucky about Basavanna role in 'Mahasharana Haralayya'. The film, a historical drama, narrates the story of Haralayya, a follower of Basavanna. The movie is directed by BA Purushotham. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X