»   » ಪಾಕ್ ಬಗ್ಗೆ ಹೇಳಿಕೆ ವಿವಾದ: ಟ್ವಿಟ್ಟರ್ ನಲ್ಲಿ ಮೌನ ಮುರಿದ ರಮ್ಯಾ

ಪಾಕ್ ಬಗ್ಗೆ ಹೇಳಿಕೆ ವಿವಾದ: ಟ್ವಿಟ್ಟರ್ ನಲ್ಲಿ ಮೌನ ಮುರಿದ ರಮ್ಯಾ

Posted By:
Subscribe to Filmibeat Kannada

''ರಕ್ಷಣಾ ಸಚಿವರು ಹೇಳಿದಂತೆ ಪಾಕಿಸ್ತಾನ ಇಲ್ಲ. ಅಲ್ಲಿಯ ಜನ ನಮ್ಮ ರೀತಿಯೇ ಇದ್ದಾರೆ. ಸಾರ್ಕ್ ಕಾನ್ಫರೆನ್ಸ್ ನಲ್ಲಿ ನನ್ನನ್ನ ಚೆನ್ನಾಗಿಯೇ ನೋಡಿಕೊಂಡರು'' ಅಂತ ಅದ್ಯಾವ ಘಳಿಗೆಯಲ್ಲಿ ನಟಿ, ಮಾಜಿ ಸಂಸದೆ ರಮ್ಯಾ ಹೇಳಿದ್ರೋ, ರಾಜಕೀಯ ವಲಯದಲ್ಲಿ ಹೊಸ ವಿವಾದ ಸೃಷ್ಟಿಯಾಗಿದೆ.

ಶತ್ರು ರಾಷ್ಟ್ರವನ್ನ ಹಾಡಿ ಹೊಗಳಿದ ರಮ್ಯಾಗೆ ನಟ ಜಗ್ಗೇಶ್ ಮಾಧ್ಯಮಗಳ ಮುಂದೆ ಛೀಮಾರಿ ಹಾಕಿದರು.

''ಎಂಟಾಣೆ ಅಕ್ಷರ ಕಲಿಯದೇ, ಅನುಭವ ಇಲ್ಲದೆ ಇದ್ದವರು ಸಹ ಪಾಕಿಸ್ತಾನವನ್ನು ಹೊಗಳುತ್ತಾರೆ. ಅವರಿಗೆ ಇನ್ನಷ್ಟು ಶಾಂತಿ ಅವಾರ್ಡ್, ನೊಬೆಲ್ ಸಿಗಲಿ. ಬಿಲ್ ಕ್ಲಿಂಟನ್ ಪಕ್ಕದಲ್ಲಿ ನಿಂತು ಫೋಟೋ ತೆಗೆದುಕೊಳ್ಳಲಿ. ಇಂತವರ ಅಗತ್ಯ ಭಾರತಕ್ಕಿಲ್ಲ'' ಅಂತ ಜಗ್ಗೇಶ್ ಹೇಳಿಕೆ ಕೊಟ್ಟಿದ್ದರು.

ಇದರ ಜೊತೆಗೆ ಕೆಲವರು ರಮ್ಯಾ ಭಾವಚಿತ್ರಕ್ಕೆ ಚಪ್ಪಲಿ ಏಟು ಕೊಟ್ಟರು. ಎಲ್ಲವನ್ನ ನೋಡಿರುವ ರಮ್ಯಾ ಮೇಡಂ ಮಾಧ್ಯಮಗಳ ಮುಂದೆ ನಿಂತು ಸ್ಪಷ್ಟನೆ ಕೊಟ್ಟಿಲ್ಲ. ಬದಲಾಗಿ ಟ್ವಿಟ್ಟರ್ ನಲ್ಲಿ ಉತ್ತರ ನೀಡುತ್ತಿದ್ದಾರೆ. ಮುಂದೆ ಓದಿ....

ಟ್ವಿಟ್ಟರ್ ಮೂಲಕ ರಮ್ಯಾ ಸಂದೇಶ

ಸದ್ಯ ಎದ್ದಿರುವ ದೊಡ್ಡ ವಿವಾದದ ಕುರಿತು ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ಮೂಲಕ ರಮ್ಯಾ ಸ್ಪಷ್ಟನೆ ನೀಡಲು ಮುಂದಾಗಿದ್ದಾರೆ. ರಮ್ಯಾ ರವರ ಸಾಲು ಸಾಲು ಟ್ವೀಟ್ ಗಳು ಇಲ್ಲಿವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ....

ಮೋದಿ ರವರನ್ನ ದ್ವೇಷಿಸುವುದಿಲ್ಲ!

''ನರೇಂದ್ರ ಮೋದಿ ರವರನ್ನ ದ್ವೇಷಿಸುತ್ತೀರಾ ಎಂದ ಮಾತ್ರಕ್ಕೆ ಪಾಕಿಸ್ತಾನವನ್ನ ಸಪೋರ್ಟ್ ಮಾಡುವುದು ಎಷ್ಟು ಸರಿ'' ಅಂತ ಶ್ರೀರಾಜ್ ಭಟ್ ಎಂಬುವರು ಕೇಳಿದ ಪ್ರಶ್ನೆಗೆ ರಮ್ಯಾ ಕೊಟ್ಟ ಉತ್ತರ ಇದು - ''ನಾನು ನರೇಂದ್ರ ಮೋದಿ ರವರನ್ನ ದ್ವೇಷಿಸುವುದಿಲ್ಲ. ಕೆಲ ವಿಚಾರಗಳಲ್ಲಿ ನಮ್ಮ ಯೋಚನೆ ಭಿನ್ನವಾಗಿದೆ. ಪಾಕಿಸ್ತಾನ ನಮ್ಮನ್ನ ಚೆನ್ನಾಗಿ ನೋಡಿಕೊಳ್ತು. ಅದನ್ನೇ ಹೇಳಿದೆ. ಅಷ್ಟೇ'' [ರಮ್ಯಾಗೆ ವಿಶ್ವದ ಮಾಹಿತಿ ಅಪಾರ, ನೊಬಲ್ ಪ್ರಶಸ್ತಿ ಸಿಗಲಿ!!]

ಮತ್ತೊಂದು ಟ್ವೀಟ್.!

'ನಾವೆಲ್ಲಾ ಮನುಷ್ಯರು' ಎಂಬ ಸಂದೇಶ ಸಾರುವ ಟ್ವೀಟ್ ಕೂಡ ಮಾಡಿದ್ದಾರೆ ರಮ್ಯಾ

ಭಗವದ್ ಗೀತೆಯ ನುಡಿ

ತಮ್ಮ ಫೋಟೋಗೆ ಚಪ್ಪಲಿ ಏಟು ಹಾಕುತ್ತಿರುವವರಿಗೆ ರಮ್ಯಾ ನೀಡಿದ ಭಗವದ್ ಗೀತೆಯ ಸಂದೇಶ ಇದು.

ನೋವಾಗಿದೆ.!

ತಮ್ಮ ವಿರುದ್ಧ ಜಗ್ಗೇಶ್ ಮಾಡಿದ ಕಾಮೆಂಟ್ ಗೆ ರಮ್ಯಾ ನೀಡಿರುವ ಪ್ರತಿಕ್ರಿಯೆ ಇದು.

ಅಭಿಮಾನಿಗಳ ಸಪೋರ್ಟ್ ಇದೆ

ಟ್ವಿಟ್ಟರ್ ನಲ್ಲಿ ರಮ್ಯಾ ಪರ ಅವರ ಅಭಿಮಾನಿಗಳು ದನಿ ಎತ್ತಿದ್ದಾರೆ. ಅಂತಹವರಿಗೆ ರಮ್ಯಾ ಕೃತಜ್ಞತೆ ಸಲ್ಲಿಸಿದ್ದಾರೆ.

ಆರ್.ಎಸ್.ಎಸ್ ಬಗ್ಗೆ ಕಾಮೆಂಟ್

''ಆರ್.ಎಸ್.ಎಸ್ ನಾಯಕ ಮೋಹನ್ ಭಾಗವತ್ ಜೀ ರವರು ಪಾಕಿಸ್ತಾನ ಭಾರತದ ಸಹೋದರ ಎಂದಿದ್ದರು. ನರೇಂದ್ರ ಮೋದಿ ಕೂಡ ಪಾಕ್ ಗೆ ಭೇಟಿ ನೀಡಿದ್ದರು'' ಅಂತ ರಮ್ಯಾ ಟ್ವೀಟ್ ಮಾಡಿದ್ದಾರೆ.

English summary
Kannada Actress, EX MP, Congress Politician Ramya has taken her twitter account to justify her statement on Pakistan. In a tweet Ramya clarified, ''I don't hate Modi at all'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada