»   » 'ಕುರ್ ಕುರೆ' ಕುರುಕಲಿಗೆ ರಮ್ಯಾ ರಾಯಭಾರಿ

'ಕುರ್ ಕುರೆ' ಕುರುಕಲಿಗೆ ರಮ್ಯಾ ರಾಯಭಾರಿ

Posted By:
Subscribe to Filmibeat Kannada

ಪೆಪ್ಸಿಕೋ ಇಂಡಿಯಾದ ಸ್ವಾದಿಷ್ಟಭರಿತ 'ಕುರ್ ಕುರೆ' ಕುರುಕಲು ತಿಂಡಿಯ ಬ್ರ್ಯಾಂಡ್ ಅಂಬಾಸಿಡರ್ ಆಗಿ ದಕ್ಷಿಣದ ಖ್ಯಾತ ತಾರೆ ರಮ್ಯಾ ಕೃಷ್ಣಾ ಆಯ್ಕೆಯಾಗಿದ್ದಾರೆ. ಇಷ್ಟು ದಿನ 'ಕುರ್ ಕುರೆ' ಜಾಹೀರಾತಿನಲ್ಲಿ ಸಿಮ್ರಾನ್ ಕಾಣಿಸಿಕೊಳ್ಳುತ್ತಿದ್ದರು. ಈಗ 'ಕುರ್ ಕುರೆ' ಪ್ರಾಡಕ್ಟ್ಸ್ ನ ಸೌತ್ ಇಂಡಿಯ ಬ್ರ್ಯಾಂಡ್ ಅಂಬಾಸಿಡರ್ ಆಗಿ ರಮ್ಯಾ ಕೃಷ್ಣ ಕಾಣಿಸಲಿದ್ದಾರೆ.

ಒಂದು ಕಾಲದಲ್ಲಿ ತೆಲುಗು, ತಮಿಳು, ಕನ್ನಡ ಚಿತ್ರಗಳಲ್ಲಿ ಹಾಟ್ ತಾರೆ ಎನ್ನಿಸಿಕೊಂಡಿದ್ದ ರಮ್ಯಾ ಕೃಷ್ಣಾ ಅವರಿಗೆ ಈಗ ಹೀರೋಯಿನ್ ವಯಸ್ಸು ಇಲ್ಲ. ಸದ್ಯಕ್ಕೆ ಕೆಲವು ಚಿತ್ರಗಳಲ್ಲಿ ಅತ್ತೆ ಪಾತ್ರಗಳನ್ನು ಪೋಷಿಸುತ್ತಾ ಬಿಜಿಯಾಗಿದ್ದಾರೆ.


ಅವಕಾಶಗಳು ಕಡಿಮೆಯಾಗುತ್ತಾ ಬಂದಂತೆ ಪೋಷಕ ಪಾತ್ರಗಳಿಗೆ ಸೀಮಿತವಾಗುತ್ತಿದ್ದಾರೆ ರಮ್ಯಾ ಕೃಷ್ಣಾ. ಸೊಸೆಯಂದಿರನ್ನು ಹದ್ದುಬಸ್ತಿನಲ್ಲಿಡುವ ಅತ್ತೆ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದುವರೆಗೂ 'ಕುರ್ ಕುರೆ' ಜಾಹೀರಾತಿನಲ್ಲಿ ಜೂಹಿ ಚಾವ್ಲಾ, ಸಿಮ್ರಾನ್, ಪರಿಣಿತಿ ಚೋಪ್ರಾ ಅಭಿನಯಿಸಿದ್ದರು. ಕಾಲಕಾಲಕ್ಕೆ ಪ್ರೇಕ್ಷಕರ ಅಭಿರುಚಿ, ವಿಶ್ವಾಸವನ್ನು ಗಮನದಲ್ಲಿಟ್ಟುಕೊಂಡು 'ಕುರ್ ಕುರೆ' ವೈವಿಧ್ಯಭರಿತ ರುಚಿಗಳನ್ನು ತಮ್ಮ ಗ್ರಾಹಕರಿಗೆ ನೀಡುತ್ತಾ ಬರುತ್ತಿದೆ. ಇದಕ್ಕೆ ತಕ್ಕಂತೆ ಖ್ಯಾತ ತಾರೆಗಳನ್ನು ರಾಯಭಾರಿಗಳಾಗಿ ಆಯ್ಕೆ ಮಾಡಿಕೊಳ್ಳುತ್ತಿದೆ.

ರಮ್ಯಾ ಕೃಷ್ಣಾ ಅವರು ಕನ್ನಡದ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವುಗಳಲ್ಲಿ ಮುಖ್ಯವಾಗಿ ಗಡಿಬಿಡಿ ಗಂಡ, ಮಂಗಲ್ಯಂ ತಂತುನಾನೇನಾ, ಸ್ನೇಹ, ಯಾರೇ ನೀ ಅಭಿಮಾನಿ, ಏಕಾಂಗಿ, ರಕ್ತ ಕಣ್ಣೀರು ಮುಂತಾದ ಚಿತ್ರಗಳನ್ನು ಹೆಸರಿಸಬಹುದು. (ಏಜೆನ್ಸೀಸ್)

English summary
A South India actress and former beauty queen Ramya Krishnan as Brand Ambassador of Pepsico Indina's lip-smacking eatery 'Kurkure' for South India.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada