For Quick Alerts
  ALLOW NOTIFICATIONS  
  For Daily Alerts

  ಬೆಸ್ಟ್ ಫ್ರೆಂಡ್ಸ್ ಅಂದ್ಕೊಂಡು ಒಂದೇ ರೂಮಿನಲ್ಲಿದ್ರು: ನನ್ನ ಶೀಲದ ಬಗ್ಗೆ ಮಾತಾಡೋಕೆ ಇವರು ಯಾರು?

  |

  ಪವಿತ್ರಾ ಲೋಕೇಶ್, ನರೇಶ್ ಹಾಗೂ ರಮ್ಯಾ ರಘುಪತಿ ಕಿತ್ತಾಟ ಯಾಕೋ ಮುಗಿಯುವ ಹಾಗೆ ಕಾಣಿಸುತ್ತಿಲ್ಲ. ಇಂದು ಬೆಳಗ್ಗೆ ಕೂಡ ರಮ್ಯಾ, ನರೇಶ್ ಹಾಗೂ ಪವಿತ್ರಾ ಲೋಕೇಶ್ ನಡುವೆ ಗಲಾಟೆ ನಡೆದಿದ್ದು, ಪವಿತ್ರಾ ಹಾಗೂ ನರೇಶ್ ನಡುವೆ ಸಮರವನ್ನು ರಮ್ಯಾ ರಘುಪತಿ ಮುಂದುವರೆಸಿದ್ದಾರೆ.

  ಪವಿತ್ರಾ ಲೋಕೇಶ್ ಹಾಗೂ ನರೇಶ್ ಒಂದೇ ಹೋಟೆಲ್‌ನಲ್ಲಿ ಒಂದೇ ರೂಮಿನಲ್ಲಿದ್ದರು ಎಂದು ರಮ್ಯಾ ರಘುಪತಿ ಆರೋಪ ಮಾಡಿದ್ದಾರೆ. ಅಲ್ಲದೆ ಹೋಟೆಲ್‌ ಒಳಗೆ ಗಲಾಟೆ ಕೂಡ ಮಾಡಿದ್ದಾರೆ. ಈ ಗಲಾಟೆ ಬಳಿಕ ರಮ್ಯಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

  ಆಕೆಗೆ ಆಸೆ ಜಾಸ್ತಿ, ಆ ಮಹಾನುಭಾವನೊಂದಿಗೂ ಇನ್ನು 6 ತಿಂಗಳು ಅಷ್ಟೇ': ಸುಚೇಂದ್ರ ಪ್ರಸಾದ್! ಆಕೆಗೆ ಆಸೆ ಜಾಸ್ತಿ, ಆ ಮಹಾನುಭಾವನೊಂದಿಗೂ ಇನ್ನು 6 ತಿಂಗಳು ಅಷ್ಟೇ': ಸುಚೇಂದ್ರ ಪ್ರಸಾದ್!

  ರಮ್ಯಾ ರಘುಪತಿ ತನ್ನ ಮೇಲೆ ಮಾಡಿದ ಆರೋಪಗಳಿಗೆ ತಿರುಗೇಟು ನೀಡಿದ್ದಲ್ಲದೆ, ನ್ಯಾಯ ಬೇಕು ಎಂದು ಪಟ್ಟು ಹಿಡಿದು ಕೂತಿದ್ದಾರೆ. ಹಾಗಿದ್ದರೆ. ಮಾಧ್ಯಮಗಳ ಮುಂದೆ ರಮ್ಯಾ ರಘುಪತಿ ಆಡಿದ ಮಾತುಗಳೇನು? ಅನ್ನುವುದನ್ನು ತಿಳಿಯಲು ಮುಂದೆ ಓದಿ.

  ಮದುವೆ ಬಳಿಕ ಈಗ ನೆಕ್ಲೆಸ್ ಕಿತ್ತಾಟ: ಪವಿತ್ರಾ ಲೋಕೇಶ್, ರಮ್ಯಾ ರಘುಪತಿ ಆರೋಪ-ಪ್ರತ್ಯಾರೋಪ! ಮದುವೆ ಬಳಿಕ ಈಗ ನೆಕ್ಲೆಸ್ ಕಿತ್ತಾಟ: ಪವಿತ್ರಾ ಲೋಕೇಶ್, ರಮ್ಯಾ ರಘುಪತಿ ಆರೋಪ-ಪ್ರತ್ಯಾರೋಪ!

  ಪವಿತ್ರಾ ಲೋಕೇಶ್-ನರೇಶ್ ಒಂದೇ ರೂಮ್‌ನಲ್ಲಿದ್ರು

  ಪವಿತ್ರಾ ಲೋಕೇಶ್-ನರೇಶ್ ಒಂದೇ ರೂಮ್‌ನಲ್ಲಿದ್ರು

  "ಇಬ್ಬರು ಇಲ್ಲಿದ್ದಾರೆ ಅಂತ ತಿಳ್ಕೊಂಡು ಬಂದೆ. ಇಬ್ಬರೂ ಒಟ್ಟಿಗೆ ಇದ್ದಾರೆ ಅನ್ನೋದು ರಾತ್ರಿನೇ ಕನ್ಫರ್ಮ್ ಆಗಿತ್ತು. ರಾತ್ರಿ ರಾತ್ರಿನೇ ಗಲಾಟೆ ಮಾಡುವುದು ನನ್ನ ಸ್ವಭಾವ ಅಲ್ಲ. ಅದಕ್ಕೆ ಬೆಳಗ್ಗೆ ಆಗಲಿ ಅಂತ ಕಾದು ಬಾಗಿಲು ತಟ್ಟಿದ್ದೀನಿ. ಬೆಸ್ಟ್ ಫ್ರೆಂಡ್ಸ್, ಬೆಸ್ಟ್ ಫ್ರೆಂಡ್ಸ್ ಅಂದ್ಕೊಂಡು ರಾತ್ರಿಯೆಲ್ಲಾ ಒಂದೇ ರೂಮ್‌ನಲ್ಲಿದ್ರು. ನಿಮ್ಮ ಮನೆಯಲ್ಲಿ ನಿಮ್ಮ ಹೆಣ್ಣು ಮಗಳಿಗೆ ಹೀಗಾದರೆ ಸುಮ್ಮನೆ ಇರುತ್ತೀರಾ?" ಎಂದು ರಮ್ಯಾ ರಘುಪತಿ ಕಣ್ಣೀರು ಹಾಕಿದ್ದಾರೆ.

  ಕೆಳಗೆ ಬಿದ್ದರೂ ಮೀಸೆ ಮಣ್ಣಾಗಿಲ್ಲ

  ಕೆಳಗೆ ಬಿದ್ದರೂ ಮೀಸೆ ಮಣ್ಣಾಗಿಲ್ಲ

  " ಅವರು ನಗಾಡಿಕೊಂಡು ಹೋದರಲ್ಲಾ ಅದೇ ನನ್ನ ಜಯ. ಯಾಕೆಂದರೆ, ಆ ಗಿಲ್ಟ್ ಅನ್ನು ಹೇಗೆ ಕವರ್ ಮಾಡಿಕೊಳ್ಳಬೇಕು ಅನ್ನುವುದು ಅವರಿಗೆ ಅರ್ಥ ಆಗಿಲ್ಲ. ಕೆಳಗೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಅಂತಾರೆ. ಹಂಗೆ ನಗಾಡಿಕೊಂಡು ಹೋದರಲ್ಲಾ ಅದೇ ನನಗೆ ಜಯ." ಎಂದು ರಮ್ಯಾ ರಘುಪತಿ ಆರೋಪ ಮಾಡಿದ್ದಾರೆ.

  ನನಗೆ ಏನೂ ಅನ್ಯಾಯ ಆಗಲ್ಲ.

  ನನಗೆ ಏನೂ ಅನ್ಯಾಯ ಆಗಲ್ಲ.

  "ಏನಕ್ಕೆ ಬಿಡಬೇಕು ಸರ್. ನ್ಯಾಯವಿದೆ. ಕರ್ನಾಟಕದ ಜನತೆ ನನ್ನ ಜೊತೆ ಇದ್ದಾರೆ. ನನಗೆ ಏನೂ ಅನ್ಯಾಯ ಆಗಲ್ಲ. ನನಗೆ ಡಿವೋರ್ಸ್ ಏನಕ್ಕೆ ಕೊಡಬೇಕು? ಓಡಾಡಿಕೊಂಡಿರು ಅಂತಲ್ಲ. ನನ್ನ ಮಗನಿಗೆ ಕಣ್ಣೀರು ತರಿಸಬೇಡ ನೀನು ಅಂತ. ನನ್ನ ಮಾನ ಹರಾಜಿಗೆ ಹಾಕಿ ವಿಚ್ಛೇದನ ಕೊಡುವಂತಹದ್ದು ಏನಿತ್ತು? ಇಬ್ಬರೂ ಕೂತುಕೊಂಡು ಏನಾದರೂ ಒಂದು ಮಾತಾಡಿಕೊಳ್ಳಬಹುದಿತ್ತು. ನನ್ನ ಕ್ಯಾರೆಕ್ಟರ್ ಬಗ್ಗೆ ಮಾತಾಡುವಾಗ ಎದ್ದು ನಿಂತುಕೊಳ್ಳಲೇಬೇಕು ಅಲ್ವಾ." ಎನ್ನುತ್ತಾರೆ ರಮ್ಯಾ ರಘುಪತಿ.

  ಅವರು ನೆಟ್ಟಗೆ ಇದ್ದಾರಾ?

  ಅವರು ನೆಟ್ಟಗೆ ಇದ್ದಾರಾ?

  ಕಳೆದ ಎರಡು ವಾರಗಳಿಂದ ಪವಿತ್ರಾ ಲೋಕೇಶ್ ಹಾಗೂ ನರೇಶ್ ಇಬ್ಬರು ಮದುವೆ ಆಗುತ್ತಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಇಬ್ಬರ ಮೇಲೂ ಆರೋಪಗಳ ಮೇಲೆ ಆರೋಪ ಮಾಡುತ್ತಲೇ ಇದ್ದರು. ಈಗ ಮೈಸೂರಿನಲ್ಲಿ ಹೋಟೆಲ್ ಮುಂದೆನೂ ರಂಪಾಟ ಮಾಡಿದ್ದಾರೆ. "ನನ್ನ ಶೀಲದ ಬಗ್ಗೆ ಮಾತಾಡುವುದಕ್ಕೆ ಅವರು ಯಾರು? ಮೊದಲು ಅವರು ನೆಟ್ಟಗೆ ಇದ್ದಾರಾ?" ಎಂದು ಪ್ರಶ್ನೆ ಮಾಡಿದ್ದಾರೆ.

  English summary
  Ramya Ragupathi Reaction On Pavithra Lokesh And Naresh Together in Mysore Hotel, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X