For Quick Alerts
  ALLOW NOTIFICATIONS  
  For Daily Alerts

  500 ಕೋಟಿ ಗಡಿದಾಟಿದ ರಣ್ಬೀರ್ ಕಪೂರ್ 'ಸಂಜು'

  By Pavithra
  |

  ಈ ವರ್ಷದ ಸೂಪರ್ ಹಿಟ್ ಸಿನಿಮಾ 'ಸಂಜು' ವರ್ಲ್ಡ್ ವೈಡ್ 500 ಕೋಟಿ ಗಳಿಸಿದ ದಾಖಲೆ ಮಾಡಿದೆ. ಈ ಮೂಲಕ ಭಾರತೀಯ ಸಿನಿಲೋಕದಲ್ಲಿ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಮತ್ತೊಂದು ವಿಶಿಷ್ಟವಾದ ರೆಕಾರ್ಡ್ ಮಾಡಿದ್ದಾರೆ.

  ಭಾರತದಲ್ಲಿ ಸುಮಾರು 300 ಕೋಟಿ ನೆಟ್ ಕೆಲೆಕ್ಷನ್ ಮಾಡಿರುವ ಸಂಜು ಸಿನಿಮಾ ಜಗತ್ತಿನಾದ್ಯಂತ 500 ಕೋಟಿ ಗಳಿಸಿದೆ ಎಂದು ಖ್ಯಾತ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ.

  'ಸಂಜು' ನಾಗಾಲೋಟವನ್ನ ಹಿಡಿದು ನಿಲ್ಲಿಸುವ ತಾಕತ್ತು ಯಾರಿಗೂ ಇಲ್ಲ ಬಿಡಿ.! 'ಸಂಜು' ನಾಗಾಲೋಟವನ್ನ ಹಿಡಿದು ನಿಲ್ಲಿಸುವ ತಾಕತ್ತು ಯಾರಿಗೂ ಇಲ್ಲ ಬಿಡಿ.!

  ಎರಡು ವಾರಗಳ ಅಂತ್ಯಕ್ಕೆ ಭಾರತದಲ್ಲಿ ನೆಟ್ ಕಲೆಕ್ಷನ್ 295 ಕೋಟಿ ಹಾಗೂ ಒಟ್ಟು ಗಳಿಕೆ 378 ಕೋಟಿಯಾಗಿದ್ರೆ, ವಿದೇಶದಲ್ಲಿ 122 ಕೋಟಿ ಕಲೆಕ್ಷನ್ ಮಾಡಿದೆ. ಒಟ್ಟಾರೆ, 500 ಕೊಟಿಯಾಗಿದೆ ಎಂದು ಬಾಕ್ಸ್ ಆಫೀಸ್ ವಿಶ್ಲೇಷಕರು ತಿಳಿಸಿದ್ದಾರೆ.

  ಭಾರತದಲ್ಲಿ ಮೊದಲ ವಾರ 202 ಕೋಟಿ, ಎರಡನೇ ವಾರ 93 ಕೋಟಿ ಗಳಿಸಿದ್ದ 'ಸಂಜು' ಒಟ್ಟು 295 ಕೋಟಿ ಕಲೆಕ್ಷನ್ ಮಾಡಿದೆ. ಈ ಮೂಲಕ ವಾರವೊಂದರಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರಗಳ ಪೈಕಿ 'ಸಂಜು' ಸಿನಿಮಾ ನಾಲ್ಕನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ 'ಬಾಹುಬಲಿ' 246 ಕೋಟಿ, ಎರಡನೇ ಹಾಗೂ ಮೂರನೇ ಸ್ಥಾನದಲ್ಲಿ ಸಲ್ಮಾನ್ ಅಭಿನಯದ 'ಸುಲ್ತಾನ್' ಮತ್ತು 'ಟೈಗರ್ ಜಿಂದಾ ಹೈ' ಚಿತ್ರಗಳಿವೆ.

  ಇನ್ನು ಮೊದಲ ದಿನ 34 ಕೋಟಿ ಗಳಿಸಿದ್ದ 'ಸಂಜು' 2018ನೇ ಸಾಲಿನಲ್ಲಿ ಫಸ್ಟ್ ಡೇ ಅತಿ ಹೆಚ್ಚು ಹಣ ಮಾಡಿದ ಸಿನಿಮಾವಾಗಿದೆ. ಇನ್ನು ಮೂರು ದಿನದಲ್ಲೇ ನೂರು ಕೋಟಿ ಗಳಿಸುವ ಮೂಲಕ ಈ ವರ್ಷದ ಅತಿ ದೊಡ್ಡ ಸಿನಿಮಾ ಎನಿಸಿಕೊಂಡಿದೆ.

  ರಾಜ್ ಕುಮಾರ್ ಹಿರಾನಿ ನಿರ್ದೇಶನದ ಈ ಚಿತ್ರದಲ್ಲಿ ರಣ್ಬೀರ್ ಕಪೂರ್, ಪರೇಶ್ ರಾವಲ್, ಮೋನಿಶಾ ಕೊಯಿರಾಲ, ಸೋನಂ ಕಪೂರ್, ಅನುಷ್ಕಾ ಶರ್ಮಾ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಜೂನ್ 29 ರಂದು ಸಂಜು ಸಿನಿಮಾ ತೆರೆಕಂಡಿತ್ತು.

  English summary
  Ranbir Kapoor and director Rajkumar Hirani’s biopic on the life of actor Sanjay Dutt, the well-received but critically polarising Sanju, has crossed the Rs 500 crore mark at the global box office.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X