»   » ದೇಶದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್: ಯಾರು ನಂ.1?

ದೇಶದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್: ಯಾರು ನಂ.1?

Posted By:
Subscribe to Filmibeat Kannada

ದೇಶದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಯಾರು ಎನ್ನುವ ಸಮೀಕ್ಷೆಯನ್ನು ಮೆಟ್ರೋಮೋನಿಯಲ್ ಸಂಸ್ಥೆಗಳು ನಡೆಸುತ್ತಲೇ ಇರುತ್ತವೆ. 24 ರಿಂದ 30ರ ವಯೋಮಿತಿಯೊಳಗೆ 7000 ಪುರುಷರು ಮತ್ತು ಮಹಿಳೆಯರ ಅಭಿಪ್ರಾಯವನ್ನು ಆಧರಿಸಿ ಸಂಸ್ಥೆ ನಡೆಸಿದ ಸಮೀಕ್ಷೆ ಏನನ್ನುತ್ತೆ?

ಚಾಕೋಲೇಟ್ ಹೀರೋ ಎಂದೇ ಪ್ರಸಿದ್ದ ಪಡೆದಿರುವ ಮತ್ತು ಸದ್ಯ ಕತ್ರಿನಾ ಕೈಫ್ ಗುಂಗಿನಲ್ಲಿರುವ ಕಪೂರ್ ಮನೆತನದ ರಣಬೀರ್ ಕಪೂರ್ ದೇಶದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ.

ಇದುವರೆಗೆ ಆ ಸ್ಥಾನದಲ್ಲಿ ವಿರಾಜಮಾನನಾಗಿದ್ದ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಅವರ ಸ್ಥಾನದಲ್ಲಿ ರಣಬೀರ್ ಕಪೂರ್ ಬಂದಿದ್ದಾರೆ. ಶೇ. 31.4 ಮಹಿಳೆಯರು ರಣಬೀರ್ ಕಪೂರ್ ಪರ ಒಲವು ತೋರಿದ್ದಾರೆ.

ಇನ್ನು ಮಹಿಳೆಯರ ವಿಚಾರಕ್ಕೆ ಬಂದಾಗ ದೀಪಿಕಾ ಪಡುಕೋಣೆ ಮೊದಲ ಸ್ಥಾನಕ್ಕೇರಿದ್ದಾರೆ. ಶೇ. 32.02 ಪುರುಷರು ದೀಪಿಕಾಗೆ ಮೋಸ್ಟ್ ಎಲಿಜಿಬಲ್ ಬ್ಯಾಚುಲರೇಟ್ ಪಟ್ಟ ನೀಡಿದ್ದಾರೆ.

ಈ ಸಮೀಕ್ಷೆಯ ಪ್ರಕಾರ ನಂತರದ ಸ್ಥಾನ ಯಾರಿಗೆ? ಮುಂದೆ ಓದಿ..

ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ - 2

ಎರಡನೇ ಸ್ಥಾನ ಸಲ್ಮಾನ್ ಖಾನಿಗೆ. ಇವರ ಪರವಾಗಿ ಶೇ. 25.6 ವೋಟ್ ಬಿದ್ದಿದೆ.

ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ - 3

ಮೂರನೇ ಸ್ಥಾನ ರಾಹುಲ್ ಗಾಂಧಿ. ಕಾಂಗ್ರೆಸ್ ಪಕ್ಷದ ಯುವರಾಜನ ಪರ ಶೇ. 21.98 ಮಹಿಳೆಯರು ಮತ ಚಲಾಯಿಸಿದ್ದಾರೆ.

ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ - 4

ನಾಲ್ಕನೇ ಸ್ಥಾನ ಕ್ರಿಕೆಟಿಗ ವಿರಾಟ್ ಕೊಹ್ಲಿ ಪಾಲಾಗಿದೆ. ಕೊಹ್ಲಿ ಪರವಾಗಿ ಶೇ. 21.02 ವೋಟ್ ಬಿದ್ದಿದೆ.

ಮೋಸ್ಟ್ ಎಲಿಜಿಬಲ್ ಬ್ಯಾಚುಲರೇಟ್ - 2

ಸಮೀಕ್ಷೆಯ ಪ್ರಕಾರ ಈ ಪಟ್ಟಿಯಲ್ಲಿ ಎರಡನೇ ಸ್ಥಾನ ಕತ್ರಿನಾ ಕೈಫ್ ಪಾಲಾಗಿದೆ. ಇವರ ಪರವಾಗಿ ಶೇ. 29.76 ವೋಟ್ ಬಿದ್ದಿದೆ.

ಮೋಸ್ಟ್ ಎಲಿಜಿಬಲ್ ಬ್ಯಾಚುಲರೇಟ್ - 3

ಇನ್ನು ಮೂರನೇ ಸ್ಥಾನ ಬಾಲಿವುಡ್ ಜಗತ್ತಿನ ಹಾಟ್ ಬೆಡಗಿ ಅನುಕ್ಷಾ ಶರ್ಮಾ ಪಾಲಾಗಿದೆ. ಇವರ ಪರವಾಗಿ ಶೇ. 20.14 ವೋಟ್ ಬಿದ್ದಿದೆ.

ಮೋಸ್ಟ್ ಎಲಿಜಿಬಲ್ ಬ್ಯಾಚುಲರೇಟ್ - 4

ಸಮೀಕ್ಷೆ ಪ್ರಕಾರ ನಾಲ್ಕನೇ ಸ್ಥಾನ ಪ್ರಿಯಾಂಕ ಚೋಪ್ರಾ ಪಾಲಾಗಿದೆ. ಇವರಿಗೆ ಶೇ. 18.08 ಮತ ಬಿದ್ದಿದೆ.

ಫೇವರೇಟ್ ಸೆಲಬ್ರಿಟಿ ವೈಫ್

ಸಮೀಕ್ಷೆ ಅನ್ವಯ ಮೋಸ್ಟ್ ಫೇವರೇಟ್ ಸೆಲಬ್ರಿಟಿ ವೈಫ್ ಆಗಿ ಐಶ್ವರ್ಯ ರೈ ಬಚ್ಚನ್ ಶೇ. 31.14 ಮತ ಪಡೆದು ಮೊದಲ ಸ್ಥಾನದಲ್ಲಿದ್ದಾರೆ.

ಫೇವರೇಟ್ ಸೆಲಬ್ರಿಟಿ ಹಸ್ಬೆಂಡ್

ಈ ಪಟ್ಟಿಯಲ್ಲಿ ಮೊದಲ ಸ್ಥಾನ ಹೃತಿಕ್ ರೋಷನ್ ಪಾಲಾಗಿದೆ. ಇವರಿಗೆ ಶೇ. 29.11 ಮತ ಬಿದ್ದಿದೆ. ನಂತರದ ಸ್ಥಾನ ಶಾರೂಖ್ ಖಾನ್, ಸಚಿನ್ ತೆಂಡೂಲ್ಕರ್ ಮತ್ತು ಅಮಿತಾಬ್ ಬಚ್ಚನ್ ಅವರಿಗೆ.

English summary
Ranbir Kapoor voted most eligible bachelor of country and Deepika Padukone voted most eligible bachelorette.
Please Wait while comments are loading...