For Quick Alerts
  ALLOW NOTIFICATIONS  
  For Daily Alerts

  ರೆಡಿಯಾಗಿ ಪ್ರದೀಪ್ 'ರಂಗನ್ ಸ್ಟೈಲ್' ನೋಡೋಕೆ

  By Rajendra
  |

  ಹೊಸ ಸ್ಟೈಲ್, ಹೊಸ ನಿರ್ದೇಶಕ, ಹೊಸ ನಿರ್ಮಾಪಕ, ಈಗಾಗಲೇ ಹೆಸರು ಮಾಡಿರುವ ಗಂಗಮ್ಮನ ಸ್ಟೈಲ್...ಹಾಡು ಜೊತೆಗೆ ಸುಂದರ ನಾಯಕ ಪ್ರದೀಪ್, ಸುಂದರ ನಾಯಕಿ ಕನ್ನಿಕಾ ತಿವಾರಿ, ಜೊತೆಗೊಂದು ದೊಡ್ಡ ಸ್ಟಾರ್ ಕಿಚ್ಚ ಸುದೀಪ್ ಅವರ ಮಿಂಚಿನ ಸಂಚಾರ ಈ 'ರಂಗನ್ ಸ್ಟೈಲ್' ಚಿತ್ರದಲ್ಲಿ. ಸಖತ್ ಮಾಸ್ ಸಿನೆಮಾ ಜೊತೆಗೆ ಒಂದು ಮೆಸೇಜ್ ಸಹ ಇಟ್ಟಿರುವ 'ರಂಗನ್ ಸ್ಟೈಲ್' ರಜತ ಪರದೆಯ ಮೇಲೆ ಈ ಶುಕ್ರವಾರ (ಮಾ.21) ರಾರಾಜಿಸಲಿದೆ.

  ಆರೆಂಜ್ ಬ್ರದರ್ಸ್ ಅವರ 'ರಂಗನ ಸ್ಟೈಲ್' ಚಿತ್ರದಲ್ಲಿ ನಿರ್ದೇಶಕ ಪ್ರಶಾಂತ್ ಹೆಸರಾಂತ ನಿರ್ದೇಶಕ ಎಂ ಡಿ ಶ್ರೀಧರ್ ಅವರ ಶಿಷ್ಯ. ಈ ಚಿತ್ರಕ್ಕಾಗಿ ಪ್ರೇಮ ಕಥೆ ಹಾಗೂ ಹಾಸ್ಯವನ್ನು ಬಹು ಮುಖ್ಯವಾಗಿ ಇಟ್ಟುಕೊಂಡಿದ್ದಾರೆ. [ರಂಗನ್ ಸ್ಟೈಲ್ ನಲ್ಲಿ ಗಂಗಮ್ಮನ ಡ್ಯಾನ್ಸ್]

  ಹಿಂದಿ ಭಾಷೆಯ 'ಕಾಮಿಡೀ ಸರ್ಕಸ್' ಖ್ಯಾತಿಯ ಭಾರತಿ ಸಿಂಗ್ ಅವರು ಗಂಗಮ್ಮನ್ ಸ್ಟೈಲ್ ಹಾಡಿನಲ್ಲಿ ಕುಣಿದಿದ್ದಾರೆ. ಪ್ರದೀಪ್ 'ರಂಗನ' ಪಾತ್ರದಲ್ಲಿ ಇದ್ದಾರೆ, ರಾಣಿಯಾಗಿ ಕನ್ನಿಕಾ ತಿವಾರಿ ಅಭಿನಯಿಸಿದ್ದಾರೆ, ದೀಪಿಕ ದಾಸ್, ಸಾಧು ಕೋಕಿಲ, ರೇಖ ದಾಸ್, ಶರತ್ ಲೋಹಿತಾಶ್ವ, ತಬಲಾ ನಾಣಿ ಹಾಗೂ ಇನ್ನಿತರರು ಇದ್ದಾರೆ.

  ಮುರಳಿ, ಗಣೇಶ್ ಮಾಸ್ಟೆರ್, ಬಾಬ್ಬಿ ಲಕ್ಷ್ಮಿ, ತ್ರಿಭುವನ್ ನೃತ್ಯ ನಿರ್ದೇಶರುಗಳು, ಪಿ ಆರ್ ಸೌಂದರ್ ರಾಜ್ ಅವರ ಸಂಕಲನ, ರವಿ ವರ್ಮ ಅವರ ಸಹಾಸ, ಸಿನೆಟೆಕ್ ಸೂರಿ ಅವರ ಛಾಯಾಗ್ರಹಣ, ಮಂಜು ಮಾಂಡವ್ಯ ಅವರ ಸಂಭಾಷಣೆ, ರಾಶಿ ನೀಡನ್ಜಿ ಹಾಗೂ ಎಂ 2 ಕೆ, ಸಹಾಯಕ ನಿರ್ದೇಶಕರು. ಜಯಂತ್ ಕಾಯ್ಕಿಣಿ, ಕವಿರಾಜ್, ವಿಜ್ಞೇಶ್ವರ ರವಿ ಸಾಹಿತ್ಯ ಒದಗಿಸಿದ್ದಾರೆ. (ಒನ್ಇಂಡಿಯಾ ಕನ್ನಡ)

  English summary
  Kannada stylish movie Rangan Style slated for release on 21st March all over Karntaka. The movie directed by Prashanth S starring Pradeep and Kannika Tiwari in the lead roles.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X