Don't Miss!
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- Sports
ಟಿ20 ವಿಶ್ವಕಪ್ ಗೆದ್ದ ಶಫಾಲಿ ವರ್ಮಾ ಪಡೆಗೆ ಬಿಸಿಸಿಐ ಸನ್ಮಾನ: 5 ಕೋಟಿ ರುಪಾಯಿ ಬಹುಮಾನ
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪ್ರತಿಭಟನಾಕಾರರ ವಿರುದ್ಧ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಆಕ್ರೋಶ
ತಮ್ಮ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ, ಅದರಲ್ಲೂ ಪ್ರಮುಖವಾಗಿ ರಂಗಾಯಣದ ಮಾಜಿ ನಿರ್ದೇಶಕರು ಮತ್ತು ಕಲಾವಿದರ ವಿರುದ್ಧ ಮತ್ತೊಮ್ಮೆ ಮಾತಿನ ಚಾಟಿ ಬೀಸಿರುವ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ, ಮಾತೆತ್ತಿದರೆ ಬಿ.ವಿ.ಕಾರಂತರ ಹೆಸರು ಹೇಳಿಕೊಂಡು ಹೋರಾಟ ಮಾಡುವ ನೀವು ಅವರ ಹೆಸರು ಉಳಿಸುವ ನಿಟ್ಟಿನಲ್ಲಿ ಏನು ಮಾಡಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.
ಮೈಸೂರಿನ ರಂಗಾಯಣದ ವನರಂಗದಲ್ಲಿ ನಡೆದ ಪ್ಲವರಂಗ-2021 ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ರಂಗಾಯಣದ ಒಳಗೆ ಇರುವವರು, ರಂಗಾಯಣದ ಗೇಟಿನ ಹೊರಗಡೆ ಇರುವವರು ಮಾತೆತ್ತಿದರೆ ಬಿವಿ ಕಾರಂತರ ಹೆಸರನ್ನು ಹೇಳುತ್ತಾರೆ. ಬಿವಿ ಕಾರಂತರೆ ತಮ್ಮನ್ನು ಹುಟ್ಟಿಸಿದವರು ಎಂದು ಹೇಳುವವರು ಕೆಲವರಿದ್ದು, ಅಷ್ಟೊಂದು ಉದ್ವೇಗ, ಭ್ರಮೆಯಲ್ಲಿದ್ದಾರೆ. ಬಿವಿ ಕಾರಂತ, ಬಿವಿ ಕಾರಂತ ಎನ್ನುವ ನೀವು ಅವರಿಗಾಗಿ ಏನನ್ನು ಮಾಡಿದ್ದೀರಿ?. ಅವರು ನಿರ್ದೇಶನ ಮಾಡಿದ ಎರಡು ಹಾಡನ್ನು ಹಾಡಿದ್ದಾ? ಎಂದು ಖಾರವಾಗಿಯೇ ಪ್ರಶ್ನಿಸಿದರು.
ಬಿವಿ ಕಾರಂತರು ನಮ್ಮನ್ನು ಬೆಳೆಸಿದ್ದಾರೆ ಎನ್ನುವ ನೀವುಗಳು, ಅವರನ್ನೆಲ್ಲಿ ಬೆಳೆಸಿದ್ದೀರಿ? ಅವರ ಹೆಸರು ಚಿರಸ್ಥಾಯಿಯಾಗಲು ಏನು ಮಾಡಿದ್ದೀರಿ? ಎಂದು ಪ್ರಶ್ನಿಸಿದ ಅವರು, ಬಿವಿ ಕಾರಂತರ ಹೆಸರನ್ನ ಉಳಿಸುವ ನಿಟ್ಟಿನಲ್ಲಿ ನಾವು ಸರ್ಕಾರದ ಒಂದು ರೂ. ಹಣವನ್ನು ಬಳಸದೆ ಅವರ ಹೆಸರಿನಲ್ಲಿ ರಂಗ ಚಾವಡಿಯನ್ನ ಕಟ್ಟಿದ್ದೇವೆ. ಆ ಚಾವಡಿಯನ್ನ ಕೇವಲ 10 ಲಕ್ಷ ರೂ.ನಲ್ಲಿ ನಿರ್ಮಾಣ ಮಾಡಿದ್ದೇವೆ. ಅಲ್ಲದೇ ಯುವಪೀಳಿಗೆ ಜನರಿಗೆ ಬಿವಿ ಕಾರಂತರು ಯಾರು ಎಂಬುದನ್ನ ತಿಳಿಸುವ ನಿಟ್ಟಿನಲ್ಲಿ ಅಲ್ಲೊಂದು ಪುತ್ಥಳಿ ಸಹ ನಿರ್ಮಿಸುತ್ತೇವೆ ಎಂದು ಹೇಳಿದರು.
ಬಿವಿ ಕಾರಂತರು ಕಟ್ಟಿದ ರಂಗಾಯಣದಲ್ಲಿ ನಿರ್ದೇಶಕರಾಗಿ ಕೆಲಸ ಮಾಡುವುದು ತಮಾಷೆಯ ಮಾತಲ್ಲ. ನನಗಿಂತ ಮೊದಲು ಒಂಭತ್ತು ನಿರ್ದೇಶಕರು ಇಲ್ಲಿ ಕೆಲಸ ಮಾಡಿದ್ದು, ಅವರೆಲ್ಲರ ಬಗ್ಗೆಯೂ ನನಗೆ ಗೌರವವಿದೆ. ಇಲ್ಲಿ 32 ವರ್ಷದಿಂದ ಇರುವ ಹಿರಿಯ ಹಾಗೂ ಕಿರಿಯ ಕಲಾವಿದರು, ಜೊತೆಗೆ ಮೈಸೂರಿನ ಪ್ರೇಕ್ಷಕರೆಲ್ಲರನ್ನೂ ಕೂಡಿ ಕಲಿತು, ನಲಿಯೋಕ್ಕೆ ತಮಾಷೆಯ ಮಾತಲ್ಲ ಎಂದ ಅವರು, ಯಾವುದೇ ಸ್ವಾರ್ಥ ಅಥವಾ ಹೆಸರು ಮಾಡುವ ಉದ್ದೇಶದಿಂದ ನಾನು ಇಲ್ಲಿಗೆ ಬಂದಿಲ್ಲ. ನಾನು ಈವರೆಗೂ ಇಲ್ಲಿ ಒಂದು ನಾಟಕವನ್ನು ನಿರ್ದೇಶನ ಮಾಡಿಲ್ಲ. ಬದಲಾಗಿ ರಂಗಾಯಣಕ್ಕೆ ಕಾಯಕಲ್ಪ ಕೊಡಬೇಕೆಂಬುದು ನನ್ನ ಆಲೋಚನೆ. ನನಗೆ ಎಲ್ಲ 'ಇಸಂ'ಗಳಿಗಿಂತ ಮಾನವತೆ ದೊಡ್ಡದು, ನಾನು ಒಂದು ವರ್ಷದ ಹಿಂದೆ ಅಧಿಕಾರವನ್ನ ವಹಿಸಿಕೊಂಡೆ. ಇಲ್ಲಿಗೆ ಬಂದಾಗ ನನ್ನನ್ನು ಕಾಡಿದ್ದು ಬಿವಿ ಕಾರಂತ ಹಾಗೂ ಎಸ್.ಎಲ್.ಭೈರಪ್ಪ, ಇಂತಹ ಶ್ರೇಷ್ಠರಿರುವ ಮೈಸೂರಿನಲ್ಲಿ ನಾನು ಹೇಗಿರಬೇಕು, ಯಾವ ರೀತಿ ರಂಗಾಯಣವನ್ನ ಮುನ್ನಡೆಬೇಕು ಎಂಬ ಆಲೋಚನೆಯಲ್ಲಿದ್ದೆ ಎಂದರು.
ನಾನು ಕೊಡವ ಅನ್ನೋದನ್ನ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ, ನಾವು ಮೋಜುಮಸ್ತಿ ಮಾಡುವ ಜನ, ಅಲಂಕಾರ ಪ್ರಿಯರು ನಾವು, ವೀರರು, ಶೂರರು, ತ್ಯಾಗಮಯಿಗಳು. ಆದರೆ ಅದೆಲ್ಲವನ್ನೂ ಮರೆತೆ, ಕೊಡಗನ್ನು ಮರೆತು ಮೈಸೂರಿಗನಾಗಿ ಕಟ್ಟುವ ಕೆಲಸ ಮಾಡಿದೆ. ನನ್ನನ್ನು ಕಾಡಿದ್ದು ಭೈರಪ್ಪ, ಅವರ ಕಾದಂಬರಿಯನ್ನ ರಂಗರೂಪಕ್ಕೆ ಇಳಿಸಬೇಕೆಂದು ನಿರ್ಧರಿಸಿ ಪರ್ವ ನಾಟಕವನ್ನ ಮಾಡಿಸಿದೆ, ಇದು ಭಾರತೀಯ ರಂಗಭೂಮಿಯ ಶ್ರೇಷ್ಠ ನಾಟಕವಾಗಿದೆ ಎನ್ನುವ ಮೂಲಕ ತಮ್ಮ ವಿರೋಧಿಗಳಿಗೆ ಪರೋಕ್ಷ ಟಾಂಗ್ ನೀಡಿದರು.