For Quick Alerts
  ALLOW NOTIFICATIONS  
  For Daily Alerts

  ಪುನೀತ್-ನಂದ ಕಿಶೋರ್ ಕಾಂಬಿನೇಷನ್ ನಲ್ಲಿ ಹೊಸ ಚಿತ್ರ!

  By Suneetha
  |

  'ವಿಕ್ಟರಿ' ಹಾಗೂ 'ರನ್ನ' ಖ್ಯಾತಿಯ ನಿರ್ದೇಶಕ ನಂದ ಕಿಶೋರ್ ಅವರಿಗೆ ಈ ವರ್ಷ ಬಂಪರ್ ಲಾಟರಿ ಹೊಡೆದಿದೆ. ಹೌದು ಹಲವಾರು ಸಿನಿಮಾಗಳನ್ನು ಕೈಯಲ್ಲಿ ಹಿಡಿದು ಓಡಾಡುತ್ತಿರುವ ನಂದ ಕಿಶೋರ್ ಇದೀಗ ಹೊಸದಾಗಿ ಪವರ್ ಸ್ಟಾರ್ ಪುನೀತ್ ಅವರಿಗೂ ಆಕ್ಷನ್-ಕಟ್ ಹೇಳುತ್ತಿದ್ದಾರೆ.

  ಹೌದು ಸ್ಟಾರ್ ನಟರಾದ ಕಿಚ್ಚ ಸುದೀಪ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಅವರು ಕಾಣಿಸಿಕೊಳ್ಳಲಿರುವ ಹಿಂದಿಯ 'ಓ ಮೈ ಗಾಡ್' ಸಿನಿಮಾದ ರಿಮೇಕ್ ಗೂ ನಂದ ಕಿಶೋರ್ ಅವರೇ ಆಕ್ಷನ-ಕಟ್ ಹೇಳುತ್ತಿದ್ದು, ಆ ಸಿನಿಮಾ ಫೆಬ್ರವರಿಯಲ್ಲಿ ಶೂಟಿಂಗ್ ಆರಂಭಗೊಳ್ಳಲಿದೆ.[ಉಪ್ಪಿ-ಕಿಚ್ಚನ ಸಿನಿಮಾ ಶೂಟಿಂಗ್ ದಿನಾಂಕ ಯಾವಾಗ ಗೊತ್ತಾ?]

  ತಮಿಳಿನ ನಟ ಅಜಿತ್, ನಟಿ ಶ್ರುತಿ ಹಾಸನ್ ಮತ್ತು ಲಕ್ಷ್ಮಿ ಮೆನನ್ ಮಿಂಚಿದ್ದ, ಶಿವ ನಿರ್ದೇಶನದ ತಮಿಳು ಚಿತ್ರ 'ವೇದಾಲಂ' ರಿಮೇಕ್ ನಲ್ಲಿ ಪವರ್ ಸ್ಟಾರ್ ಪುನೀತ್ ಅವರು ಕಾಣಿಸಿಕೊಳ್ಳಲಿದ್ದು, ನಂದ ಕಿಶೋರ್ ಆಕ್ಷನ್-ಕಟ್ ಹೇಳುತ್ತಿದ್ದಾರೆ.

  ತೆಲುಗು ಮತ್ತು ತಮಿಳು ಚಿತ್ರಗಳನ್ನು ನಿರ್ಮಾಣ ಮಾಡುತ್ತಿದ್ದ ನಿರ್ಮಾಪಕ ಎ.ಎಂ ರತ್ನ ಅವರು ಇದೇ ಮೊದಲ ಬಾರಿಗೆ ಈ ರಿಮೇಕ್ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಹೊಸ ಯೋಜನೆ ಮಾರ್ಚ್ ತಿಂಗಳಿನಿಂದ ಆರಂಭಗೊಳ್ಳಲಿದೆ.[ಪವರ್ ಸ್ಟಾರ್ ಗೆ ಆಕ್ಷನ್-ಕಟ್ ಹೇಳ್ತಾರಂತೆ ತಮಿಳಿನ ವಿಕ್ರಂ]

  ಇದನ್ನು ಸ್ವತಃ ನಂದಕಿಶೋರ್ ಅವರೇ ದೃಢೀಕರಿಸಿದ್ದು, 'ಹೌದು ಎ.ಎಂ ರತ್ನಂ ನಿರ್ಮಿಸುತ್ತಿರುವ ಸಿನಿಮಾದಲ್ಲಿ ಪುನೀತ್ ಅವರಿಗೆ ಸಿನಿಮಾ ನಿರ್ದೇಶಿಸಲಿದ್ದೇನೆ. ಎಲ್ಲವೂ ಒಪ್ಪಿಗೆಯಾಗಿದೆ. ನಿರ್ಮಾಪಕರು ಶಬರಿಮಲೆಯಿಂದ ಬಂದ ಮೇಲೆ ಅಧಿಕೃತ ಘೋಷಣೆ ಮಾಡಲಿದ್ದಾರೆ' ಎಂದಿದ್ದಾರೆ.

  ವರನಟ ಡಾ.ರಾಜ್ ಕುಮಾರ್ ಅವರ ಕುಟುಂಬದ ಸದಸ್ಯರೊಂದಿಗೆ ಕೆಲಸ ಮಾಡುವುದು ಗೌರವ' ಎನ್ನುತ್ತಾರೆ ನಿರ್ದೇಶಕ ನಂದ ಕಿಶೋರ್. ಇದಷ್ಟೇ ಅಲ್ಲದೇ ನಟ ಧ್ರುವ ಸರ್ಜಾ ಮತ್ತು ಶ್ರೀಮುರಳಿ ಅವರ ಯೋಜನೆಗಳು ಕೂಡ ನಂದ ಅವರ ಮುಂದಿನ ಸಾಲಿನಲ್ಲಿವೆ. ಸದ್ಯಕ್ಕೆ ನಂದ ಅವರು ಪ್ರದೀಪ್ ನಟನೆಯ 'ಟೈಗರ್' ಸಿನಿಮಾದ ಸಾಂಗ್ ಶೂಟ್ ನಲ್ಲಿ ಬಿಜಿಯಾಗಿದ್ದಾರೆ.

  English summary
  This year seems to have started well for Nanda Kishore. The director, busy scheduling song shoots for his project Tiger with Pradeep, will be helming the remake of Oh My God in Kannada, featuring Sudeep and Upendra from February. His next big film for the year will be with Puneeth Rajkumar, a film with which producer A M Rathnam will foray into the Kannada film industry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X