»   » 'ಅಧ್ಯಕ್ಷ'ರ ಎಪ್ಪತ್ತೈದರ ಸಂಭ್ರಮದಲ್ಲಿ ಮಿಂದೆದ್ದ 'ರನ್ನ'

'ಅಧ್ಯಕ್ಷ'ರ ಎಪ್ಪತ್ತೈದರ ಸಂಭ್ರಮದಲ್ಲಿ ಮಿಂದೆದ್ದ 'ರನ್ನ'

Posted By:
Subscribe to Filmibeat Kannada

ಹಾಸ್ಯನಟ ಶರಣ್ ಅಭಿನಯದ 'ಅಧ್ಯಕ್ಷ' ಚಿತ್ರ ಸೆಂಚುರಿ ಹೊಡೆಯಲು ದಾಪುಗಾಲಿಡುತ್ತಿದೆ. ಇತ್ತೀಚೆಗೆ ಈ ಚಿತ್ರದ ಎಪ್ಪತ್ತೈದರ ಸಂಭ್ರಮವನ್ನು ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಕಿಚ್ಚ ಸುದೀಪ್ ಅವರ 'ರನ್ನ' ಚಿತ್ರದ ಟೀಸರನ್ನು ಬಿಡುಗಡೆ ಮಾಡಲಾಯಿತು.

ಸುದೀಪ್ ಅವರ 'ರನ್ನ' ಚಿತ್ರಕ್ಕೂ 'ಅಧ್ಯಕ್ಷ'ರಿಗೂ ಏನು ಲಿಂಕು ಎಂಬ ಸಂದೇಹ ಬರುವುದು ಸಹಜ. ಈ ಎರಡೂ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ, ಹೇಳುತ್ತಿರುವ ನಿರ್ದೇಶಕರು ನಂದಕಿಶೋರ್. ಇನ್ನೂ ವಿಶೇಷ ಎಂದರೆ ಸುದೀಪ್ ಹಾಗೂ ಶರಣ್ ಆತ್ಮೀಯ ಗೆಳೆಯರು. [ಅಧ್ಯಕ್ಷ ಚಿತ್ರ ವಿಮರ್ಶೆ]

Adhyaksha movie still

ಹಾಗಾಗಿ ಅಧ್ಯಕ್ಷರ ಸಂಭ್ರಮದಲ್ಲಿ 'ರನ್ನ' ಚಿತ್ರದ ಟೀಸರ್ ಬಿಡುಗಡೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಗೆ ಶಾಲು ಹೊದಿಸಿ ರು.1 ಲಕ್ಷ ನಗದು, ನೆನಪಿನ ಕಾಣಿಕೆ ಕೊಟ್ಟು ಸನ್ಮಾನಿಸಲಾಯಿತು.

'ಅಧ್ಯಕ್ಷ' ಚಿತ್ರದಲ್ಲಿ ಎಲ್ಲರನ್ನು ನಕ್ಕು ನಲಿಸಿದ್ದ ಖಳನಟ ರವಿಶಂಕರ್ ಹಾಗೂ ಚಿಕ್ಕಣ್ಣ ಚಿತ್ರದ ಹಾಡಿಗೆ ಸ್ಟೆಪ್ ಹಾಕಿ ಇನ್ನಷ್ಟು ರಂಜಿಸಿದರು. ಅಧ್ಯಕ್ಷರ 75ರ ಸಂಭ್ರಮಕ್ಕೆ ಫಿಲಂ ಚೇಂಬರ್ ಅಧ್ಯಕ್ಷರಾದ ಎಚ್ ಡಿ ಗಂಗರಾಜು ಬಂದಿದ್ದದ್ದು ಇನ್ನೊಂದು ವಿಶೇಷ.

ಅಧ್ಯಕ್ಷ ಚಿತ್ರದಲ್ಲಿ ಶರಣ್ ಜೊತೆ ಹೇಬಾ ಪಾಟೀಲ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಪಾತ್ರವರ್ಗದಲ್ಲಿ ರವಿಶಂಕರ್, ಮಾಳವಿಕಾ ಅವಿನಾಶ್, ಚಿಕ್ಕಣ್ಣ ಹಾಗೂ ರಮೇಶ್ ಭಟ್ ಸೇರಿದಂತೆ ಮುಂತಾದವರಿದ್ದಾರೆ. ಬಿ.ಕೆ.ಗಂಗಾಧರ್ ಮತ್ತು ಬಿ. ಬಸವರಾಜ್ ನಿರ್ಮಿಸಿರುವ ಚಿತ್ರವಿದು. (ಫಿಲ್ಮಿಬೀಟ್ ಕನ್ನಡ)

English summary
Sudeep lead 'Ranna' movie teaser launched in Sharan's 'Adhyaksha' 75 days celebration in Bangalore. After Adhyaksha movie 'Ranna' is also in the direction of Nandakishor.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada