For Quick Alerts
  ALLOW NOTIFICATIONS  
  For Daily Alerts

  ಹ್ಯಾಪಿ ಬರ್ಥಡೇ ನಿವೇದಿತಾ ಗೌಡ: 'ಪಾಪು'ಗೆ ವಿಶ್ ಮಾಡಿದ 'ಕೂಕೂ'

  |

  ಬಿಗ್‌ ಬಾಸ್‌ನಲ್ಲಿ ಜತೆಗೂಡಿ ಸ್ಪರ್ಧಿಗಳಾಗಿದ್ದವರು ಪ್ರೇಮಿಗಳಾದವರು ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ. ಯುವ ದಸರಾ ಉತ್ಸವದ ವೇಳೆ ಉಂಗುರ ಹಾಕಿ ಪ್ರೇಮ ನಿವೇದನೆ ಮಾಡಿಕೊಂಡು ವಿವಾದ ಸೃಷ್ಟಿಸಿದ್ದು ಬೇರೆಯದೇ ಸಂಗತಿ. ಆದರೆ, ಬಿಗ್ ಬಾಸ್ ಮನೆಯಲ್ಲಿಯೇ 'ಗೊಂಬೆ' ಎಂಬ ಹಾಡು ಸೃಷ್ಟಿಸಿದ ಚಂದನ್ ಶೆಟ್ಟಿ, ಪತ್ನಿಯ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಿದ್ದಾರೆ.

  ಚದುರಂಗದಲ್ಲಿ ಚಾಲೆಂಜ್ ಮಾಡಿಕೊಂಡ ಧ್ರುವ ಬ್ರದರ್ಸ್..! | Dhruva Sarja | Chiranjeevi Sarja

  ಕೊರೊನಾ ವೈರಸ್ ಹಾವಳಿ ಭಾರತದಲ್ಲಿ ಶುರುವಾಗುವ ಮುನ್ನವೇ ಅದ್ಧೂರಿಯಾಗಿ ಮದುವೆಯಾದ ಅವರು, ಹನಿಮೂನ್‌ಗೆಂದು ವಿದೇಶಕ್ಕೆ ತೆರಳಿದ್ದಾಗಲೇ ಕೊರೊನಾ ವೈರಸ್ ಭೀತಿ ಹೆಚ್ಚಾಗಿತ್ತು. ಹೀಗಾಗಿ ತಮ್ಮ ಮಧುಚಂದ್ರ ಮೊಟಕುಗೊಳಿಸಿ ಇಬ್ಬರೂ ತವರಿಗೆ ಮರಳಿದ್ದರು.

  ಹನಿಮೂನ್‌ ಗೆ ಅಡ್ಡಿಪಡಿಸಿದ ಕೊರೊನಾ ಬಗ್ಗೆ ಚಂದನ್-ನಿವೇದಿತ ಗೌಡ ಹಾಡು

  ಮದುವೆಯಾದ ಬಳಿಕ ಇಬ್ಬರೂ ಜತೆಗೂಡಿ ಮೊದಲ ಬಾರಿಗೆ ಜನ್ಮದಿನದ ಸಂಭ್ರಮ ಆಚರಿಸಿದ್ದಾರೆ. ಮೈಸೂರಿನಲ್ಲಿ ಇರುವ ಈ ಜೋಡಿ ಲಾಕ್ ಡೌನ್ ನಡುವೆ ಸಂಭ್ರಮಾಚರಣೆಯಲ್ಲಿ ತೊಡಗಿದೆ.

  ಬಣ್ಣದ ಬಲೂಲುಗಳಿಂದ ಅಲಂಕರಿಸಿದ ಕೊಠಡಿಯಲ್ಲಿ ಬಿಳಿ ಬಣ್ಣದ ಕೇಕ್ ಕತ್ತರಿಸಿ ನಿವೇದಿತಾಗೌಡ ಜನ್ಮದಿನ ಆಚರಿಸಲಾಗಿದೆ. 'ನನ್ನ ರಾಣಿಗೆ ಹ್ಯಾಪಿಯೆಸ್ಟ್ ಬರ್ಥಡೇ. ಲವ್ ಯೂ ಸೋ ಮಚ್ ಪಾಪು' ಎಂದು ಚಂದನ್ ಶೆಟ್ಟಿ ಬರೆದಿದ್ದಾರೆ.

  ಹನಿಮೂನ್‌ನಿಂದ ವಾಪಸ್ಸಾದ ಚಂದನ್-ನಿವೇದಿತಾ ಮೇಲೆ ಪ್ರಶ್ನೆಗಳ ಸುರಿಮಳೆ

  ಅದಕ್ಕೆ ಪ್ರತಿಕ್ರಿಯಿಸಿರುವ ನಿವೇದಿತಾ, 'ಕೂಕೂ ಐ ಲವ್ ಯೂ ಮೋರ್ ಆಂಡ್ ಮೋರ್' ಎಂದು ಹೇಳಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ ಅವರು ತಮ್ಮ ಜನ್ಮದಿನವನ್ನು ಇಷ್ಟು ವಿಶೇಷವನ್ನಾಗಿಸಿದ್ದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

  English summary
  Rapper Chandan Shetty celebrates his wife Niveditha Gowda's birthday at home amid lockdown.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X