For Quick Alerts
  ALLOW NOTIFICATIONS  
  For Daily Alerts

  ಪ್ರೀತಿ-ಪ್ರೇಮ ಇತ್ಯಾದಿ: ರಶ್ಮಿಕಾ ಮಂದಣ್ಣ ಕೊಟ್ಟ ಉತ್ತರ

  |

  ನಟ ರಕ್ಷಿತ್ ಶೆಟ್ಟಿ ಜೊತೆಗಿನ ನಿಶ್ಚಿತಾರ್ಥ ಮುರಿದು ಬಿದ್ದ ನಂತರ ರಶ್ಮಿಕಾ ಮಂದಣ್ಣ ಸಿನಿಮಾಗಳಲ್ಲಿ ಬಹಳವಾಗಿ ಬ್ಯುಸಿಯಾಗಿಬಿಟ್ಟರು.

  ಅಡುಗೆ ಮಾಡೋಕಂತೂ ಬರಲ್ಲ ನೆಟ್ಟುಗೆ ತಿನ್ನು ಅಂತ ಬೈತಿದ್ರು ಸುದೀಪ್ | Filmibeat Kannada

  ರಕ್ಷಿತ್ ಶೆಟ್ಟಿ ಜೊತೆಗಿನ ಸಂಬಂಧ ಕಳಚಿದ ನಂತರ, ರಶ್ಮಿಕಾ ಮಂದಣ್ಣ ಹೆಸರು ಇನ್ನೂ ಕೆಲವು ನಟರೊಂದಿಗೆ ಕೇಳಿಬಂದಿತ್ತು. ಆದರೆ ಈ ಬಗ್ಗೆ ರಶ್ಮಿಕಾ ಅಧಿಕೃತವಾಗಿ ಎಲ್ಲಿಯೂ ಮಾತನಾಡಿರಲಿಲ್ಲ. ಆದರೆ ಈಗ ಇದೆಲ್ಲದಕ್ಕೂ ಉತ್ತರ ನೀಡಿದ್ದಾರೆ.

  ರಶ್ಮಿಕಾ ಮಂದಣ್ಣ ಮೊದಲ ತಮಿಳು ಸಿನಿಮಾದ ಹೊಸ ಅಪ್‌ಡೇಟ್

  ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ರಶ್ಮಿಕಾ ಮಂದಣ್ಣ, ಆಗಾಗ್ಗೆ ಅಭಿಮಾನಿಗಳೊಂದಿಗೆ ಸಂವಾದ ನಡೆಸುವುದುಂಟು. ಹೀಗೆ ನಡೆದ ಸಂವಾದದಲ್ಲಿ ಪ್ರೀತಿ-ಪ್ರೇಮ ಸಂಬಂಧಿತ ಪ್ರಶ್ನೆಗೆ ಉತ್ತರಿಸಿದ್ದಾರೆ ರಶ್ಮಿಕಾ ಮಂದಣ್ಣ.

  'ಎಲ್ಲರೊಂದಿಗೆ ನನ್ನ ಹೆಸರು ಥಳುಕು ಹಾಕುವವರಿಗೆ ಈ ಉತ್ತರ'

  'ಎಲ್ಲರೊಂದಿಗೆ ನನ್ನ ಹೆಸರು ಥಳುಕು ಹಾಕುವವರಿಗೆ ಈ ಉತ್ತರ'

  'ನನ್ನ ಪರಿಚಯದ ಎಲ್ಲರೊಂದಿಗೆ ನನ್ನ ಹೆಸರು ಥಳುಕು ಹಾಕುವವರಿಗಾಗಿ ಹೇಳುತ್ತಿದ್ದೇನೆ, ನಾನು ಸಿಂಗಲ್ ಆಗಿದ್ದೇನೆ, ಹಾಗೂ ಸಿಂಗಲ್ ಆಗಿರುವುದನ್ನು ನಾನು ಇಷ್ಟಪಡುತ್ತೇನೆ' ಎಂದು ಪ್ರೀತಿ-ಪ್ರೇಮದ ಗಾಳಿ ಸುದ್ದಿಗಳಿಗೆ ತೆರೆ ಎಳೆದಿದ್ದಾರೆ ರಶ್ಮಿಕಾ ಮಂದಣ್ಣ.

  ಸಿಂಗಲ್ ಆಗಿರುವುದನ್ನು ಎಂಜಾಯ್ ಮಾಡಿ: ರಶ್ಮಿಕಾ

  ಸಿಂಗಲ್ ಆಗಿರುವುದನ್ನು ಎಂಜಾಯ್ ಮಾಡಿ: ರಶ್ಮಿಕಾ

  ಮುಂದುವರೆದು, ಸಿಂಗಲ್ ಆಗಿರುವ ಬಗ್ಗೆ ನೊಂದುಕೊಳ್ಳುವವರಿಗಾಗಿ ನಾನು ನೀಡುವ ಸಲಹೆಯೆಂದರೆ, 'ನೀವು ಒಮ್ಮೆ ಒಂಟಿಯಾಗಿರುವುದನ್ನು ಎಂಜಾಯ್ ಮಾಡಲು ಪ್ರಾರಂಭಿಸಿದರೆಂದರೆ, ನಿಮ್ಮ ನಿರೀಕ್ಷೆ (ಬಾಯ್‌ಫ್ರೆಂಡ್ ಅಥವಾ ಗರ್ಲ್‌ಫ್ರೆಂಡ್‌) ಹೆಚ್ಚಾಗುತ್ತಾ ಹೋಗುತ್ತದೆ' ಎಂದಿದ್ದಾರೆ ರಶ್ಮಿಕಾ.

  ರಶ್ಮಿಕಾ ಮಂದಣ್ಣ ಫೋಟೋ ನೋಡಿ ಮೋಹಕ ತಾರೆ ರಮ್ಯಾ ಹೇಳಿದ್ದೇನು?

  ಹಲವು ಪ್ರಶ್ನೆಗಳಿಗೆ ರಶ್ಮಿಕಾ ಮಂದಣ್ಣ ಉತ್ತರ

  ಹಲವು ಪ್ರಶ್ನೆಗಳಿಗೆ ರಶ್ಮಿಕಾ ಮಂದಣ್ಣ ಉತ್ತರ

  ಇನ್ನೂ ಹಲವು ಪ್ರಶ್ನೆಗಳಿಗೆ ರಶ್ಮಿಕಾ ಮಂದಣ್ಣ ಉತ್ತರಿಸಿದ್ದಾರೆ. ಜಾಮೂನು, ಮಿಲ್ಕ್‌ ಶೇಕ್‌ಗಳು ಇಷ್ಟವೆಂದಿದ್ದಾರೆ. ಶ್ರೀದೇವಿಯೊಂದಿಗಿನ ಹೋಲಿಕೆಗೆ ಖುಷಿಪಟ್ಟಿದ್ದಾರೆ. ಅಭಿಮಾನಿಗಳ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ರಶ್ಮಿಕಾ.

  ಪುಷ್ಪಾ ಸಿನಿಮಾದಲ್ಲಿ ನಟನೆ

  ಪುಷ್ಪಾ ಸಿನಿಮಾದಲ್ಲಿ ನಟನೆ

  ರಶ್ಮಿಕಾ ಮಂದಣ್ಣ ಅಭಿನಯದ ಕನ್ನಡ ಸಿನಿಮಾ ಪೊಗರು ಬಿಡುಗಡೆಗೆ ತಯಾರಾಗಿದೆ. ತಮಿಳಿನಲ್ಲಿ ಕಾರ್ತಿ ಜೊತೆಗೆ ನಟಿಸಿರುವ 'ಸುಲ್ತಾನ್' ಸಹ ಅಂತಿಮ ಹಂತದಲ್ಲಿದೆ. ಇದರ ಜೊತೆಗೆ ಅಲ್ಲು ಅರ್ಜುನ್ ಜೊತೆಗೆ ಪುಷ್ಪ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ರಶ್ಮಿಕಾ.

  ನಟಿ ಸಮಂತಾ ಹಾಕಿದ ಸವಾಲು ಸ್ವೀಕರಿಸಿದ ಕಿರಿಕ್ ಸುಂದರಿ ರಶ್ಮಿಕಾ ಮಂದಣ್ಣ

  English summary
  Actress Rashmika Mandanna said i am single and loving being single.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X