For Quick Alerts
  ALLOW NOTIFICATIONS  
  For Daily Alerts

  ಟ್ರೋಲ್ಸ್ vs ರಶ್ಮಿಕಾ ಮಂದಣ್ಣ: ಮೋಹಕತಾರೆ ರಮ್ಯಾ ಬ್ಯಾಟ್ ಬೀಸಿದ್ದು ಯಾರ ಪರ?

  |

  ಟ್ರೋಲ್ಸ್.. ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗದೇ ಇರುವ ಸೆಲೆಬ್ರಿಟಿ ಯಾರೂ ಇಲ್ಲ ಎಂದೇ ಹೇಳಬಹುದು. ಯಾವುದಾದರೊಂದು ವಿಷಯದ ಬಗ್ಗೆ ಸೆಲೆಬ್ರಿಟಿ ಅಥವಾ ಯಾವುದೇ ಕಲಾವಿದ ಚೂರು ತಪ್ಪಾದ ಹೇಳಿಕೆ ನೀಡಿದರೆ ಅಥವಾ ಪುಟ್ಟ ವಿವಾದವನ್ನು ಮಾಡಿಕೊಂಡರೆ ರಾತ್ರೋರಾತ್ರಿ ಟ್ರೋಲ್ ಆಗಿ ವೈರಲ್ ಆಗಿಬಿಡ್ತಾರೆ.

  ಇನ್ನು ಈ ಟ್ರೋಲ್‌ಗಳಿಂದ ಹಿನ್ನಡೆ ಅನುಭವಿಸಿದರ ನಡುವೆ ಫೇಮಸ್ ಆದವರೂ ಸಹ ಇದ್ದಾರೆ. ಸಾಮಾನ್ಯ ವ್ಯಕ್ತಿಯಾದವ ಟ್ರೋಲ್ ಆದ ಬಳಿಕ ಖ್ಯಾತಿ ಪಡೆದು ಸಾಮಾಜಿಕ ಜಾಲತಾಣದ ಸೆಲೆಬ್ರಿಟಿ ಎನಿಸಿಕೊಂಡ ಹಲವು ಉದಾಹರಣೆಗಳಿವೆ. ಅದೇ ರೀತಿ ಮೊದಲಿಗೆ ಟ್ರೋಲಿಗರಿಂದ ಒಳ್ಳೆಯ ಟ್ರೋಲ್ ಮಾಡಿಸಿಕೊಂಡು ನಂತರ ತಮ್ಮ ಹೇಳಿಕೆಗಳಿಂದ ಕೆಟ್ಟ ಟ್ರೋಲ್‌ಗೆ ಒಳಗಾದ ನಟ ನಟಿಯರೂ ಸಹ ಇದ್ದಾರೆ. ಇಂಥ ಸಾಲಿಗೆ ಸೇರುತ್ತಾರೆ ನಟಿ ರಶ್ಮಿಕಾ ಮಂದಣ್ಣ.

  ಕಾಂತಾರ, ಗಂಧದ ಗುಡಿ ಯಾವ ಚಾನೆಲ್‌ನಲ್ಲಿ? ಹೊಸ ಕನ್ನಡ ಚಿತ್ರಗಳ ಟಿವಿ ರೈಟ್ಸ್ ಪಟ್ಟಿ ಇಲ್ಲಿದೆಕಾಂತಾರ, ಗಂಧದ ಗುಡಿ ಯಾವ ಚಾನೆಲ್‌ನಲ್ಲಿ? ಹೊಸ ಕನ್ನಡ ಚಿತ್ರಗಳ ಟಿವಿ ರೈಟ್ಸ್ ಪಟ್ಟಿ ಇಲ್ಲಿದೆ

  ಹೌದು, ಕಿರಿಕ್ ಪಾರ್ಟಿ ಬಿಡುಗಡೆಯಾದ ಸಂದರ್ಭದಲ್ಲಿ ಚಿತ್ರದ ನಟಿಯರಾದ ರಶ್ಮಿಕಾ ಮಂದಣ್ಣ ಹಾಗೂ ಸಂಯುಕ್ತ ಹೆಗ್ಡೆ ಈ ಇಬ್ಬರ ಬಗ್ಗೆಯೂ ಒಳ್ಳೆ ರೀತಿ ಟ್ರೋಲ್ ನಡೆಯುತ್ತಿತ್ತು. ಆದರೆ ನಂತರದ ದಿನಗಳಲ್ಲಿ ಈ ಇಬ್ಬರು ನೀಡಿದ ಕೆಲ ಹೇಳಿಕೆಗಳಿಂದ ಕಳಪೆ ಟ್ರೋಲ್‌ಗೆ ಒಳಗಾದರು. ಅದರಲ್ಲಿಯೂ ನಟಿ ರಶ್ಮಿಕಾ ಮಂದಣ್ಣ ತುಸು ಹೆಚ್ಚಾಗಿಯೇ ಟ್ರೋಲ್‌ಗೆ ಒಳಗಾದರು. ಇನ್ನು ಸಾಲು ಸಾಲು ಟ್ರೋಲ್‌ಗೆ ಒಳಗಾಗುತ್ತಿರುವುದರ ಇತ್ತೀಚೆಗಷ್ಟೇ ನಟಿ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಸ್ವತಃ ಪ್ರತಿಕ್ರಿಯೆ ನೀಡಿದ್ದರು. ಸದ್ಯ ಈ ಪೋಸ್ಟ್ ಕುರಿತು ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದು ನಟಿ ರಶ್ಮಿಕಾ ಪರ ಬ್ಯಾಟ್ ಬೀಸಿದ್ದಾರೆ.

  ಆಕೆಯನ್ನು ಆಕೆಯ ಪಾಡಿಗೆ ಬಿಟ್ಟುಬಿಡಿ

  ಆಕೆಯನ್ನು ಆಕೆಯ ಪಾಡಿಗೆ ಬಿಟ್ಟುಬಿಡಿ

  'ಟ್ರೋಲಿಂಗ್ ಎಂಬುದು ಎಂದೂ ನಿಲ್ಲದ ಸಂಗತಿ, ನಾವು ಯಾವ ವ್ಯಕ್ತಿಯ ಜೀವನವನ್ನೂ ಜಡ್ಜ್ ಮಾಡಲಾಗುವುದಿಲ್ಲ, ಅವರ ಜೀವನದ ಬಗ್ಗೆ ಅವರಿಗೆ ಮಾತ್ರ ಚೆನ್ನಾಗಿ ಗೊತ್ತಿರುತ್ತದೆ, ಅವಳನ್ನು ಅವಳ ಪಾಡಿಗೆ ಇರಲು ಬಿಟ್ಟುಬಿಡಿ' ಎಂದು ನಟಿ ರಮ್ಯಾ ರಶ್ಮಿಕಾ ಮಂದಣ್ಣ ಟ್ರೋಲ್ ಕುರಿತು ಹಂಚಿಕೊಂಡಿದ್ದ ಪೋಸ್ಟ್‌ಗೆ ಇನ್ಸ್ಟಾಗ್ರಾಮ್ ಸ್ಟೋರಿ ಮುಖಾಂತರ ಪ್ರತಿಕ್ರಿಯಿಸಿ ರಶ್ಮಿಕಾ ಮಂದಣ್ಣ ಪರ ಬ್ಯಾಟ್ ಬೀಸಿ ಟ್ರೋಲ್ ಮಾಡುವವರಿಗೆ ಬುದ್ದಿವಾದ ಹೇಳಿದ್ದಾರೆ.

  ರಶ್ಮಿಕಾ ಪೋಸ್ಟ್‌ನಲ್ಲೇನಿತ್ತು?

  ರಶ್ಮಿಕಾ ಪೋಸ್ಟ್‌ನಲ್ಲೇನಿತ್ತು?

  ''ಕೆಲವು ದಿನ, ವಾರ, ತಿಂಗಳು ವರ್ಷಗಳಿಂದಲೂ ಕೆಲವು ವಿಷಯಗಳು ನನಗೆ ಸಮಸ್ಯೆ ನೀಡುತ್ತಿವೆ. ಈ ವಿಷಯದ ಬಗ್ಗೆ ನಾನು ಮೊದಲೇ ಮಾತನಾಡಬೇಕಿತ್ತು. ಆದರೆ ಈಗ ಆ ನಿರ್ಣಯ ಮಾಡಿದ್ದೇನೆ. ನಾನು ನನ್ನ ವೃತ್ತಿ ಜೀವನ ಆರಂಭಿಸಿದಾಗಿನಿಂದಲೂ ಸಾಕಷ್ಟು ದ್ವೇಷ, ನಿಂದನೆಗಳನ್ನು ಸ್ವೀಕರಿಸುತ್ತಲೇ ಬಂದಿದ್ದೇನೆ. ಕೆಲವು ಟ್ರೋಲರ್‌ಗಳಿಗಂತೂ ನಾನು ಒಂದು ರೀತಿ ಪಂಚಿಂಗ್ ಬ್ಯಾಗ್ ಆಗಿದ್ದೇನೆ. ಸಾಕಷ್ಟು ಋಣಾತ್ಮಕತೆಯನ್ನು ನಾನು ಪಡೆಯುತ್ತಲೇ ಬಂದಿದ್ದೇನೆ'' ಎಂದು ರಶ್ಮಿಕಾ ಮಂದಣ್ಣ ಬೇಸರ ಹೊರಹಾಕಿದ್ದರು.

  ರಶ್ಮಿಕಾ ಪೋಸ್ಟ್‌ಗೆ ವ್ಯಕ್ತವಾಯ್ತು ಮಿಶ್ರ ಪ್ರತಿಕ್ರಿಯೆ

  ರಶ್ಮಿಕಾ ಪೋಸ್ಟ್‌ಗೆ ವ್ಯಕ್ತವಾಯ್ತು ಮಿಶ್ರ ಪ್ರತಿಕ್ರಿಯೆ

  ಇನ್ನು ರಶ್ಮಿಕಾ ಮಂದಣ್ಣ ಹಂಚಿಕೊಂಡಿರುವ ಈ ಪೋಸ್ಟ್ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿವೆ. ಕೆಲವರು ಧೈರ್ಯದಿಂದಿರಿ, ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ ಎಂದು ಕಾಮೆಂಟ್ ಮಾಡಿದ್ದರೆ ಇನ್ನೂ ಕೆಲವರು ಸರಿಯಾದ ಹೇಳಿಕೆಗಳನ್ನು ನೀಡಿದರೆ ಯಾರೂ ಟ್ರೋಲ್ ಮಾಡುವುದಿಲ್ಲ, ಇನ್ನುಮುಂದೆಯಾದರೂ ಯೋಚಿಸಿ ಮಾತನಾಡಿ, ಬೆಳೆದು ಬಂದ ಹಾದಿಯನ್ನು ಮರೆಯದಿರಿ ಎಂದು ರಶ್ಮಿಕಾಗೆ ಸಲಹೆ ನೀಡಿದ್ದಾರೆ.

  English summary
  Rashmika Mandanna vs Trollers: Ramya backed Rashmika and request trollers to leave her. Read on
  Thursday, November 10, 2022, 11:28
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X