»   » ನಟ ರಾಮ್ ಚರಣ್ ಮನೆಯಲ್ಲಿ ಕೇರೆಹಾವು ಪ್ರತ್ಯಕ್ಷ

ನಟ ರಾಮ್ ಚರಣ್ ಮನೆಯಲ್ಲಿ ಕೇರೆಹಾವು ಪ್ರತ್ಯಕ್ಷ

By: ಅನಂತರಾಮು, ಹೈದರಾಬಾದ್
Subscribe to Filmibeat Kannada

ಮೆಗಾ ಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ತೇಜ ಅವರ ಮನೆಗೆ ಮಂಗಳವಾರ (ಜೂ.24) ರಾತ್ರಿ ಅಚಾನಕ್ ಆಗಿ ವಿಶೇಷ ಅತಿಥಿ ಭೇಟಿ ನೀಡಿದ್ದ. ಆ ಸ್ಪೆಷಲ್ ಗೆಸ್ಟ್ ಬೇರಾರು ಅಲ್ಲ ಕೇರೆಹಾವು. ಈ ವಿಷಯ ಗೊತ್ತಾಗುತ್ತಿದ್ದಂತೆ ಮನೆಯವರೆಲ್ಲಾ ಹೌಹಾರಿ ಹೊರಗೆ ದೌಡಾಯಿಸಿದ್ದಾರೆ.

ಕೂಡಲೆ ಮನೆಯವರೆಲ್ಲಾವೂ ಸೇರಿ ಸ್ನೇಕ್ ಸೊಸೈಟಿಗೆ ಕರೆ ಮಾಡಿ ಹಾವನ್ನು ಹಿಡಿಯಲು ಕೇಳಿದ್ದಾರೆ. ಕೂಡಲೆ ಅಲ್ಲಿಗೆ ಆಗಮಿಸಿದ ಅವರು ಭಾರಿ ಗಾತ್ರದ ಕೇರೆಹಾವನ್ನು ಹಿಡಿಯುವಲ್ಲಿ ಯಶಸ್ವಿಯಾದರು. ಸುಮಾರು ಹಾವಿನ ಉದ್ದ ಎರಡು ಮೀಟರ್ ನಷ್ಟಿತ್ತು.

Rat snake visits Ram charan's home

ಈ ಹಾವಿನ ವಿಚಾರವನ್ನು ರಾಮ್ ಚರಣ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಬಳಿಕ ಹಾವನ್ನು ಸುರಕ್ಷಿತ ತಾಣದಲ್ಲಿ ಬಿಡಲಾಯಿತು. ಈ ಹಿಂದೆ ರಾಗಿಣಿ ದ್ವಿವೇದಿ ಅವರ ಮನೆಗೆ ನಾಗಿಣಿ ಭೇಟಿ ನೀಡಿದ್ದ ಸುದ್ದಿಯನ್ನು ಓದಿರುತ್ತೀರಾ. [ನಟಿ ರಾಗಿಣಿ ಮನೆಯಲ್ಲಿ ಹರಿದಾಡಿದ ಮಿಡಿ ನಾಗಿಣಿ]

ಮನೆಯ ಸುತ್ತಮುತ್ತ ಪೊದೆ, ಗಿಡಬಳ್ಳಿಗಳು ದಟ್ಟವಾಗಿ ಹಬ್ಬಿದ್ದರೆ ಅವುಗಳಲ್ಲಿ ಇಲಿ, ಕಪ್ಪೆಗಳು ಸೇರಿಕೊಳ್ಳುತ್ತವೆ. ಅವುಗಳನ್ನು ಅನುಸರಿಸಿ ಹಾವುಗಳು ಮನೆಯ ಸುತ್ತಮುತ್ತ ಸರಿದಾಡುತ್ತವೆ. ಆಗಾಗ ಈ ರೀತಿ ಮನೆಯ ಒಳಕ್ಕೂ ಭೇಟಿ ನೀಡಿ ಭಯಭೀತಿಗೆ ಕಾರಣವಾಗುತ್ತವೆ.

English summary
Last night, Tollywood hero Ram Charan's home got an unexpected visitor in the form of a rat snake that is almost a couple of metres in length.
Please Wait while comments are loading...