»   » ಕನ್ನಡಕ್ಕೆ ಮತ್ತೆ ಮಸ್ತ್ ಮಸ್ತ್ ಹುಡುಗಿ ರವೀನಾ ಟಂಡನ್

ಕನ್ನಡಕ್ಕೆ ಮತ್ತೆ ಮಸ್ತ್ ಮಸ್ತ್ ಹುಡುಗಿ ರವೀನಾ ಟಂಡನ್

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಜೊತೆ "ಮಸ್ತ್ ಮಸ್ತ್ ಹುಡುಗಿ ಬಂದ್ಲು ಹಾಯಿ ಹಾಯಿರೋ..." ಎಂದು ಸೊಂಟ ಬಳುಕಿಸಿದ್ದ ರವೀನಾ ಟಂಡನ್ ಮತ್ತೆ ಗಾಂಧಿನಗರದ ಕಡೆ ಹೆಜ್ಜೆ ಹಾಕಿದ್ದಾರೆ. ಈಗ ಅವರು ಇಬ್ಬರು ಮಕ್ಕಳ ತಾಯಿ. ಆದರೂ ಗ್ಲಾಮರನ್ನು ತಕ್ಕಮಟ್ಟಿಗೆ ಕಾಪಾಡಿಕೊಂಡು ಬಂದಿದ್ದಾರೆ.

ಮಾಸ್ಟರ್ ಕಿಶನ್ ಈಗ 'ಕೇರ್ ಆಫ್ ಫುಟ್ ಪಾತ್ 2' ಚಿತ್ರವನ್ನು ಮಾಡಲು ಹೊರಟಿದ್ದಾರೆ. ತಮ್ಮ ಚಿತ್ರದ ಪಾತ್ರಕ್ಕಾಗಿ ಮಧ್ಯಮ ವಯಸ್ಸಿನ ವಕೀಲೆ ಪಾತ್ರ ಪೋಷಿಸಲು ತಾರೆ ಬೇಕಾಗಿದ್ದಾರಂತೆ. ಈ ಚಿತ್ರಕ್ಕಾಗಿ ರವೀನಾ ಟಂಡನ್ ಗೆ ಬುಲಾವ್ ಹೋಗಿದೆ. [ಮಸ್ತ್ ಮಸ್ತ್ ಹುಡುಗಿ ಐಟಂ ಸಾಂಗ್]


ರವೀನಾ ಸಹ ಚಿತ್ರದಲ್ಲಿ ನಟಿಸಲು ಒಪ್ಪಿದ್ದು ತಮ್ಮ ಪಾತ್ರದ ಬಗ್ಗೆ ಖುಷಿಯಾಗಿದ್ದಾರಂತೆ. ಕೇರ್ ಆಫ್ ಫುಟ್ ಪಾತ್ 2 ಚಿತ್ರವನ್ನು ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ತೆರೆಗೆ ತರಲು ಕಿಶನ್ ಸಿದ್ಧವಾಗಿದ್ದಾರೆ. ರವೀನಾ ಟಂಡನ್ ಜೊತೆಗೆ ಬಾಲಿವುಡ್ ನಟ ಜಾಕಿ ಶ್ರಾಫ್ ಅವರನ್ನೂ ಕರೆತರುತ್ತಿದ್ದಾರೆ ಕಿಶನ್.

ಕೇರ್ ಆಫ್ ಫುಟ್ ಪಾತ್ ಚಿತ್ರದಲ್ಲಿ ಜಾಕಿ ಶ್ರಾಫ್ ಸಚಿವರ ಪಾತ್ರವನ್ನು ಪೋಷಿಸಿದ್ದರು. ಈ ಬಾರಿ ಅವರದು ಬಹಳ ಗಮನಾರ್ಹ ಪಾತ್ರ ಎನ್ನಲಾಗಿದೆ. ಈಗಾಗಲೆ ಕೇರ್ ಆಫ್ ಫುಟ್ ಪಾತ್ 2 ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಎರಡನೇ ಭಾಗದ ಚಿತ್ರೀಕರಣದಲ್ಲಿ ರವೀನಾ ಹಾಗೂ ಜಾಕಿ ಶ್ರಾಫ್ ಅಭಿನಯಿಸಲಿದ್ದಾರೆ. (ಏಜೆನ್ಸೀಸ್)

English summary
Bollywood's Tip Tip Barsa Pani (Mohra) burning flame Raveena Tandon re enters to Kannada films. The actress is all set to play a small role in Kishan directorial 'Care of Footpath 2'. Earlier she acted in Kannada movie 'Upendra'.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada