For Quick Alerts
  ALLOW NOTIFICATIONS  
  For Daily Alerts

  ಪವರ್‌ಸ್ಟಾರ್ ಹೆಸರು ಬಳಸಿಕೊಂಡು ದೋಖಾ ಮಾಡಿದ ಕಿಲಾಡಿ!

  By Pavithra
  |
  ಅಪ್ಪು ಆಪ್ತ ಅಂತ ಹೇಳಿ ಮುಗ್ದರಿಗೆ ಮೋಸ ಮಾಡಿದ ಮಹಾನುಭಾವ...!! | Filmibeat Kannada

  ಮೈಸೂರಿನಲ್ಲೊಬ್ಬ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹೆಸರನ್ನು ಬಳಸಿಕೊಂಡು ಮೋಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ತನ್ನ ತಂಗಿಯ ಮದುವೆ ಮಾಡುವುದಕ್ಕಾಗಿ ರವಿ(28) ಎಂಬಾತನಿಂದ ಮಾಸ್ಟರ್ ಪ್ಲಾನ್ ಬಿಟ್ಟು ಪವರ್ ಪ್ಲಾನ್ ಮಾಡಿ ಅನೇಕರಿಗೆ ದೋಖಾ ಮಾಡಿದ್ದಾನೆ.

  ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಹೆಸರನ್ನೆ ಬಳಸಿಕೊಂಡು ತನ್ನ ಸಂಬಂಧಿಕರು ಹಾಗೂ ಗೆಳೆಯರನ್ನೇ ಟಾರ್ಗೆಟ್ ಮಾಡಿ ಮೋಸ ಮಾಡಿರುವುದಾಗಿ ತಿಳಿದು ಬಂದಿದೆ. ನಾನು ಪುನೀತ್ ರಾಜ್‌ಕುಮಾರ್ ಆಪ್ತ ಸಹಾಯಕನೆಂದು ಹೇಳಿಕೊಂಡು ಲಕ್ಷಾಂತರ ರೂ ವಂಚನೆ ಮಾಡಲಾಗಿದೆ. ಪುನೀತ್ ರಾಜ್ ಕುಮಾರ್ ಬಳಿ ಕೆಲಸ ಕೊಡಿಸುವ ಆಮಿಷ ಒಡ್ಡಿ ಹಣ ಚಿನ್ನಾಭರಣ ಪಡೆದಿದ್ದಾನೆ ರವಿ.

  ಮಹಾ ಮೋಸ: ಮ್ಯಾನೇಜರ್ 'ಮಲ್ಲಿ'ಯಿಂದ 'ದಾಸ' ದರ್ಶನ್ ಗೆ ದೋಖಾ.!ಮಹಾ ಮೋಸ: ಮ್ಯಾನೇಜರ್ 'ಮಲ್ಲಿ'ಯಿಂದ 'ದಾಸ' ದರ್ಶನ್ ಗೆ ದೋಖಾ.!

  ಬೆಂಗಳೂರಿನ ಶ್ರೀನಿವಾಸ‌ನಗರದ ನಿವಾಸಿ ಆಗಿರುವ ರವಿ, ಮೂಲತಃ ಮೈಸೂರಿನ ಟಿ.ನರಸೀಪುರ ಬಳಿಯ ಅಂಕನಹಳ್ಳಿ ನಿವಾಸಿ. ತಂಗಿ ಮದುವೆ ಖರ್ಚಿಗಾಗಿ ಸಾಕಷ್ಟು ಜನರ ಬಳಿ ಒಂದೊಂದು ರೀತಿಯ ಸುಳ್ಳು ಹೇಳಿ ದೋಖಾ ಮಾಡಿದ್ದಾನೆ. ಮದುವೆ ಕೆಲಸಕ್ಕೆ ಬಂದಿದ್ದ ಪೋಟೋಗ್ರಾಫರ್, ಪ್ಲವರ್ ಡೆಕೋರೇಟರ್, ಕಾರು ಚಾಲಕನಿಗೂ ಇದೇ ಸುಳ್ಳು ಹೇಳಿ ಮೋಸದ ಜಾಲಕ್ಕೆ ತಳ್ಳಿದ್ದಾನೆ. ತಂಗಿ ಮದುವೆ ಮುಗಿದ ಮೇಲೆ ರವಿ ದೋಖ ಬೆಳಕಿಗೆ ಬಂದಿದೆ.

  Ravi has cheated people using the name of Puneet Rajkumar

  ರವಿ ವಂಚನೆಯಿಂದ ಕಂಗಾಲದ ಸಂಬಂಧಿ ಹಾಗೂ ಹಣ ಕೊಟ್ಟವರು. ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಭಿಮಾನಿಗಳು ಎಂದು ಹೆಸರು ಬಳಸಿಕೊಂಡವರು ಸಾಕಷ್ಟು ಜನರಿದ್ದಾರೆ ಆದರೆ ಪವರ್ ಸ್ಟಾರ್ ಆಪ್ತ ಸಹಾಯಕ ಎಂದು ಹೇಳಿ ಮುಗ್ದರನ್ನ ವಂಚಿಸಿರುವ ರವಿಗಾಗಿ ಪೊಲೀಸರು ಹುಡುಕಾಟ ನೆಡೆಸಿದ್ದಾರೆ.

  English summary
  Ravi, a resident of Srinivas Nagar in Bangalore, has cheated people using the name of Puneet Rajkumar. A complaint was filed at T Narasipura Police Station.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X