For Quick Alerts
  ALLOW NOTIFICATIONS  
  For Daily Alerts

  ಎಲ್ಲರಿಗೂ ಪ್ರೇಮಿಗಳ ದಿನ, ರಣಧೀರನಿಗೆ ಮದುವೆಯ ಸುದಿನ

  |

  ನಟ, ಕ್ರೇಜಿಸ್ಟಾರ್ ರವಿಚಂದ್ರನ್ ಪ್ರೀತಿಗೆ ಮತ್ತೊಂದು ಹೆಸರು. ಪ್ರೀತಿ ಪ್ರೇಮ ಅವರ ಸಿನಿಮಾಗಳಲ್ಲಿ ಮಾತ್ರವಲ್ಲದೆ ಅವರ ಸಂಸಾರದಲ್ಲಿಯೂ ತುಂಬಿದೆ. ರವಿಚಂದ್ರನ್ ಕುಟುಂಬದ ಒಂದು ಸುಂದರ ಕ್ಷಣವನ್ನು ಅವರ ಮಗ ಮನುರಂಜನ್ ಹಂಚಿಕೊಂಡಿದ್ದಾರೆ.

  ನಿಖಿಲ್ ಮಾತಿಗೆ ನಾಚಿ ನೀರಾದ ರೇವತಿ..! | Nikhil Weds Revathi | Engaged | Kumarswamy | Devegowda

  ಫೆಬ್ರವರಿ 14 ಎಲ್ಲರಿಗೂ ಪ್ರೇಮಿಗಳ ದಿನವಾದರೆ, ರವಿಚಂದ್ರನ್ ರಿಗೆ ಮದುವೆಯಾದ ಸುದಿನ. ಇಂದು ಕ್ರೇಜಿಸ್ಟಾರ್ ದಂಪತಿ 33ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಇದ್ದಾರೆ. ಈ ಖುಷಿಯ ದಿನ ತಂದೆ ತಾಯಿಗೆ ಮನುರಂಜನ್ ಶುಭಾಶಯ ತಿಳಿಸಿದ್ದಾರೆ.

  ರವಿಚಂದ್ರನ್ ಪತ್ನಿ ಕಣ್ಣೀರು ಹಾಕಿದ್ದರು : ಹಳೆ ನೆನೆಪು ಹಂಚಿಕೊಂಡ ಜಗ್ಗೇಶ್ರವಿಚಂದ್ರನ್ ಪತ್ನಿ ಕಣ್ಣೀರು ಹಾಕಿದ್ದರು : ಹಳೆ ನೆನೆಪು ಹಂಚಿಕೊಂಡ ಜಗ್ಗೇಶ್

  ''ಜೀವನದ ಏಳು ಬೀಳುಗಳಲ್ಲಿ ನೀವು ಜೊತೆಗೆ ಇದ್ದೀರಾ. ನೀವು ನಮಗೆ ಪ್ರೀತಿ ಎಂದರೆ ಏನು ಅಂತ ತೋರಿಸಿಕೊಟ್ಟಿದ್ದೀರಿ. ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಅಪ್ಪ.. ಅಮ್ಮ..'' ಎಂದು ಮನುರಂಜನ್ ಬರೆದುಕೊಂಡಿದ್ದಾರೆ.

  1986 ಫೆಬ್ರವರಿ 14 ರಂದು ರವಿಚಂದ್ರನ್ ಹಾಗೂ ಸುಮತಿ ಅವರ ಮದುವೆ ನೆರವೇರಿತ್ತು. 33 ವರ್ಷಗಳು ಯಶಸ್ವಿಯಾಗಿ, ಸಂತೋಷವಾಗಿ ಜೀವನ ಇವರಿಬ್ಬರು ನಡಸಿದ್ದಾರೆ. ರವಿಚಂದ್ರನ್ ಅವರಿಗೆ, ವಿಕ್ರಂ, ಮನೋರಂಜನ್ ಮತ್ತು ಗೀತಾಂಜಲಿ ಮೂವರು ಮಕ್ಕಳಿದ್ದಾರೆ.

  'ಮಲ್ಲ 2' ಮಾಡಲು ರವಿಚಂದ್ರನ್ ಪತ್ನಿಯಿಂದಲೇ ಬೇಡಿಕೆ!'ಮಲ್ಲ 2' ಮಾಡಲು ರವಿಚಂದ್ರನ್ ಪತ್ನಿಯಿಂದಲೇ ಬೇಡಿಕೆ!

  ಸದ್ಯ, ರವಿಚಂದ್ರನ್ 'ರವಿ ಬೋಪಣ್ಣ', 'ರವಿಚಂದ್ರ', 'ರಾಜೇಂದ್ರ ಪೊನ್ನಪ್ಪ' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ರವಿ ಬೋಪಣ್ಣ' ಹಾಗೂ 'ರಾಜೇಂದ್ರ ಪೊನ್ನಪ್ಪ' ಚಿತ್ರವನ್ನು ಅವರೇ ನಿರ್ದೇಶನ ಮಾಡುತ್ತಿದ್ದಾರೆ.

  English summary
  Crazy star V Ravichandran and His wife Sumathi Celebrated their 33rd Marriage Anniversary on Valentine's Day.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X