For Quick Alerts
  ALLOW NOTIFICATIONS  
  For Daily Alerts

  'ನನ್ನ ಮಗಳ ಮದುವೆ' : ಕ್ರೇಜಿ ಸ್ಟಾರ್ ಪುತ್ರಿಯ ವಿವಾಹದ ವಿಡಿಯೋ ಪ್ರಸಾರ

  |

  Recommended Video

  ರವಿಚಂದ್ರನ್ ಮಗಳು ಗೀತಾಂಜಲಿ ಅರಿಶಿನ ಶಾಸ್ತ್ರ ಕಾರ್ಯಕ್ರಮ | FILMIBEAT KANNADA

  ಕನಸುಗಾರ ರವಿಚಂದ್ರನ್ ತಮ್ಮ ಕನಸಿನ ಹಾಗೆ ಮಗಳ ಮದುವೆಯನ್ನು ಮಾಡಿದ್ದಾರೆ. ಅವರ ಪುತ್ರಿಯ ಮದುವೆ ವಿಡಿಯೋ ಈಗ ಕಿರುತೆರೆಯಲ್ಲಿ ಪ್ರಸಾರ ಆಗಲಿದೆ.

  ಕಲರ್ಸ್ ವಾಹಿನಿಯಲ್ಲಿ ಮದುವೆಯ ವಿಡಿಯೋವನ್ನು ಪ್ರಸಾರ ಮಾಡಲಾಗುತ್ತಿದೆ. ಗಣೇಶ ಹಬ್ಬದ ವಿಶೇಷವಾಗಿ ಮದುವೆ ವಿಡಿಯೋವನ್ನು ವೀಕ್ಷಕ ಮುಂದೆ ಬರುತ್ತಿದೆ. ಮಧ್ಯಾಹ್ನ 12 ಗಂಟೆಗೆ ಮದುವೆ ಕಾರ್ಯಕ್ರಮ ಪ್ರಸಾರ ಆಗಲಿದೆ.

  ಕಾರ್ಯಕ್ರಮಕ್ಕೆ ಹೋಗಲು ಆಗದೆ ಇದ್ದ ಅಭಿಮಾನಿಗಳು ಟಿವಿಯಲ್ಲಿ ಮದುವೆ ಸೊಬಗನ್ನು ನೋಡಬಹುದಾಗಿದೆ. ಈಗಾಗಲೇ, ಕಾರ್ಯಕ್ರಮದ ಪ್ರೋಮೋ ಹೊರ ಬಂದಿದೆ. ಚಿರಂಜೀವಿ, ಪ್ರಭು, ಉಪೇಂದ್ರ, ಯಶ್, ಸುಮಲತಾ ಅಂಬರೀಶ್, ಪುನೀತ್ ರಾಜ್ ಕುಮಾರ್ ರ ತುಣುಕುಗಳನ್ನು ಪ್ರೋಮೋದಲ್ಲಿ ತೋರಿಸಲಾಗಿದೆ.

  ರವಿಚಂದ್ರನ್ ಪುತ್ರಿ ಗೀತಾಂಜಲಿ ಹಾಗೂ ಅಜಯ್ ವಿವಾಹ ಮೇ 29 ರಂದು ಬೆಂಗಳೂರಿನ ಅರಮನೆ ಮೈದಾನದ ವೈಟ್ ಪೆಟಲ್ಸ್ ನಲ್ಲಿ ನಡೆದಿತ್ತು. ಆರತಕ್ಷತೆ ಕಾರ್ಯಕ್ರಮಕ್ಕೆ ರಜನಿಕಾಂತ್, ಚಿರಂಜೀವಿ, ಪ್ರಭು, ಅನಂತ್ ನಾಗ್, ಉಪೇಂದ್ರ, ಯಶ್, ರಮೇಶ್ ಅರವಿಂದ್, ಶಿವರಾಜ್ ಕುಮಾರ್, ಶ್ರುತಿ, ಸುಧಾರಾಣಿ, ಗಣೇಶ್, ಪ್ರಿಯಾಂಕ ಉಪೇಂದ್ರ ಸೇರಿದಂತೆ ಸಾಕಷ್ಟು ದಿಗ್ಗಜರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

  ಇನ್ನು ನಾದಬ್ರಹ್ಮ ಹಂಸಲೇಖ ತಂಡದಿಂದ ಸಂಗೀತಗೋಷ್ಟಿ ಕಾರ್ಯಕ್ರಮ ಮದುವೆಯ ಹೈಲೈಟ್ ಗಳಲ್ಲಿ ಒಂದಾಗಿದೆ. ರವಿಚಂದ್ರನ್ ಹಾಡುಗಳ ಸಂಗೀತ ಸುಧೆ ಇಲ್ಲಿ ನಡೆದಿತ್ತು.

  English summary
  Actor Ravichandran daughter marriage will be telecasting in Colors Channel on the occasion of Ganesha Chaturthi.
  Friday, August 30, 2019, 12:05
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X