For Quick Alerts
  ALLOW NOTIFICATIONS  
  For Daily Alerts

  "KGF" ಕಾನ್ಫಿಡೆನ್ಸ್, 'ಕಾಂತಾರ' ಎಮೋಷನ್.. ಪ್ರಾಮಾಣಿಕ ಪ್ರಯತ್ನಕ್ಕೆ ಯಶಸ್ಸು ಶತಸಿದ್ಧ": ವಿ. ರವಿಚಂದ್ರನ್

  |

  ಇಡೀ ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡುವಂತಾಗಿದೆ. 'KGF - 2' ಹಾಗೂ 'ಕಾಂತಾರ' ಸಿನಿಮಾಗಳು ದೊಡ್ಡಮಟ್ಟದಲ್ಲಿ ಪ್ರಪಂಚದಾದ್ಯಂತ ಸದ್ದು ಮಾಡಿವೆ. ಈ ಎರಡು ಸಿನಿಮಾಗಳ ಸಕ್ಸಸ್ ಬಗ್ಗೆ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಮಾತನಾಡಿದ್ದಾರೆ.

  ಪವನ್ ಒಡೆಯರ್ ನಿರ್ದೇಶನದ 'ರೇಮೊ' ಸಿನಿಮಾ ಪ್ರೀ ರಿಲೀಸ್ ಈವೆಂಟ್‌ಗೆ ಮುಖ್ಯ ಅತಿಥಿಯಾಗಿ ರವಿಚಂದ್ರನ್ ಆಗಮಿಸಿದ್ದರು. ವೇದಿಕೆಯಲ್ಲಿ ಮಾತನಾಡುತ್ತಾ ಕನ್ನಡ ಸಿನಿಮಾಗಳ ಸಾಧನೆ ಬಗ್ಗೆ ಮಾತನಾಡಿದರು. 'KGF' ಕಾನ್ಫಿಡೆನ್ಸ್, 'ಕಾಂತಾರ' ಒಂದು ಎಮೋಷನ್ ಎಂದು ಹೇಳಿದ್ದಾರೆ. ಆ ಮೂಲಕ ಒಳ್ಳೆ ಸಿನಿಮಾಗಳಿಗೆ ಎಂದೂ ಸೋಲಿಲ್ಲ. ಪ್ರಯತ್ನ ಒಳ್ಳೆಯದಾಗಿದ್ದರೆ ಸಕ್ಸಸ್ ಸಿಗುತ್ತದೆ. ಅದಕ್ಕೆ ಒಳ್ಳೆ ಪರಿಶ್ರಮವೂ ಅಗತ್ಯ. ಈ ವಿಚಾರದಲ್ಲಿ ಯಶ್ ಹಾಗೂ ರಿಷಬ್ ಶೆಟ್ಟಿ ಇಬ್ಬರ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿದರು.

  ಡಿಕೆ ಶಿವಕುಮಾರ್-ರವಿಚಂದ್ರನ್ ಓದಿದ ಸ್ಕೂಲ್ ಒಂದೇ: 3 ಬಾರಿ 'ಪ್ರೇಮಲೋಕ' ವೀಕ್ಷಿಸಿದ್ದ ಡಿಕೆಶಿ!ಡಿಕೆ ಶಿವಕುಮಾರ್-ರವಿಚಂದ್ರನ್ ಓದಿದ ಸ್ಕೂಲ್ ಒಂದೇ: 3 ಬಾರಿ 'ಪ್ರೇಮಲೋಕ' ವೀಕ್ಷಿಸಿದ್ದ ಡಿಕೆಶಿ!

  ಕನ್ನಡ ಚಿತ್ರರಂಗದಲ್ಲಿ ಅದ್ಭುತ ಸಿನಿಮಾಗಳನ್ನು ಕೊಟ್ಟ ನಟ, ನಿರ್ದೇಶಕ, ನಿರ್ಮಾಪಕ ವಿ. ರವಿಚಂದ್ರನ್. 90ರ ದಶಕದಲ್ಲೇ 'ಶಾಂತಿ ಕ್ರಾಂತಿ' ರೀತಿಯ ಅದ್ಭುತ ಪ್ರಯೋಗ ಮಾಡಿದ್ದರು. ಕನ್ನಡದ ಎರಡೂ ಸೂಪರ್ ಹಿಟ್ ಸಿನಿಮಾಗಳ ಬಗ್ಗೆ ಕ್ರೇಜಿಸ್ಟಾರ್ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.

  ಕನ್ನಡ ಇಂಡಸ್ಟ್ರಿಗೆ ಶುಕ್ರದೆಸೆ

  ಕನ್ನಡ ಇಂಡಸ್ಟ್ರಿಗೆ ಶುಕ್ರದೆಸೆ

  'ರೇಮೊ' ಸಿನಿಮಾ ಪ್ರೀ ರಿಲೀಸ್ ಈವೆಂಟ್‌ನಲ್ಲಿ ಮಾತನಾಡುತ್ತಾ "ಕನ್ನಡ ಚಿತ್ರರಂಗಕ್ಕೆ ಈಗ ಒಳ್ಳೆ ಸ್ಥಿತಿಯಲ್ಲಿದೆ. ಶುಕ್ರದೆಸೆ ಬಂದಿದೆ. ರಿಷಬ್ ಶೆಟ್ಟಿಗೆ ಗಜಕೇಸರಿ ಯೋಗ ಬಂದಿದೆ ಎನ್ನುತ್ತಿದ್ದಾರೆ. ನಮ್ಮ ಸಿನಿಮಾಗಳ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಸಿ. ಆರ್ ಮನೋಹರ್‌ರಂತಹ ನಿರ್ಮಾಪಕರು ಬೇಕು. ನಗು ನಗುತ್ತಾ ಸಿನಿಮಾ ಮಾಡುವವರು ಬೇಕು. ನಿರ್ಮಾಪಕರು ಎಷ್ಟು ಖುಷಿಯಿಂದ ಸಿನಿಮಾ ಮಾಡಿದರೆ ಅಷ್ಟು ಒಳ್ಳೆ ಸಿನಿಮಾ ಆಗುತ್ತದೆ"

  'KGF' ಕಾನ್ಫಿಡೆನ್ಸ್, 'ಕಾಂತಾರ' ಎಮೋಷನ್

  'KGF' ಕಾನ್ಫಿಡೆನ್ಸ್, 'ಕಾಂತಾರ' ಎಮೋಷನ್

  "ಕನ್ನಡ ಚಿತ್ರರಂಗಕ್ಕೆ ಎನ್ನುವುದು ಒಂದು 'KGF' ಕಾನ್ಫಿಡೆನ್ಸ್. ಆ ಸಿನಿಮಾ ಕಾನ್ಫಿಡೆನ್ಸ್ ಕೊಡ್ತು. ನಾವು ಎಷ್ಟು ವ್ಯಯಿಸಿದರೆ ಅಷ್ಟು ಬರುತ್ತದೆ ಎಂದು ಯಶ್ ತೋರಿಸಿಕೊಟ್ಟ. 'ಕಾಂತಾರ' ಅನ್ನುವುದು ಒಂದು ಎಮೋಷನ್. ಅದು ನಿಮ್ಮ ಹೃದಯವನ್ನು ತಾಕಿತ್ತು. ಅದು ಕೂಡ ಗೆದ್ದು ತೋರಿಸುತ್ತದೆ. ಎರಡು ಸಿನಿಮಾ ಬಜೆಟ್‌ನಲ್ಲಿ ವ್ಯತ್ಯಾಸ ಇದೆ. 'KGF' ತಂಡ ದೊಡ್ಡ ಗುರಿಯೊಂದಿಗೆ ಗೆದ್ದರೆ, 'ಕಾಂತಾರ' ಗುರಿ ಇಲ್ಲದೇ ಗೆದ್ದರು.

  ರಿಷಬ್ ಶೆಟ್ಟಿ ಕಡಿಮೆ ಕಷ್ಟಪಟ್ಟಿಲ್ಲ

  ರಿಷಬ್ ಶೆಟ್ಟಿ ಕಡಿಮೆ ಕಷ್ಟಪಟ್ಟಿಲ್ಲ

  "ಸಿನಿಮಾ ಮಾಡುವ ಪ್ರಾಮಾಣಿಕತೆ ಬಹಳ ಮುಖ್ಯ. ರಿಷಬ್ ಶೆಟ್ಟಿ ಏನು ಕಡಿಮೆ ಕಷ್ಟಪಟ್ಟಿಲ್ಲ. ನನಗೆ ಗೊತ್ತಿರುವಂತೆ ರಿಷಬ್ 15 ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದಾರೆ. ಇದು ಬರೀ ಒಂದು 'ಕಾಂತಾರ'ದಿಂದ ಸಿಕ್ಕಿದ ಸಕ್ಸಸ್ ಅಲ್ಲ. 15 ವರ್ಷಗಳ ಜರ್ನಿಯಿಂದ ಸಿಕ್ಕಿದ್ದು. ಅದು ಬಹಳ ಮುಖ್ಯ. ಸಕ್ಸಸ್ ಗುರಿ ಅಲ್ಲ. ನಿಮ್ಮ ಕೆಲಸವೇ ಗುರಿ. ಒಳ್ಲೆ ಕೆಲಸಕ್ಕೆ ಪ್ರತಿಫಲ ಸಿಕ್ಕೇ ಸಿಗುತ್ತದೆ" ಎಂದರು.

  ನ.25ಕ್ಕೆ 'ರೇಮೊ' ಸಿನಿಮಾ ರಿಲೀಸ್

  ನ.25ಕ್ಕೆ 'ರೇಮೊ' ಸಿನಿಮಾ ರಿಲೀಸ್

  ಮ್ಯೂಸಿಕಲ್ ಲವ್ ಸ್ಟೋರಿ 'ರೇಮೊ' ಸಿನಿಮಾ ನವೆಂಬರ್ 25ಕ್ಕೆ ತೆರೆಗಪ್ಪಳಿಸಲಿದೆ. ಸಿ. ಆರ್ ಮನೋಹರ್ ನಿರ್ಮಾಣದ ಈ ಅದ್ಧೂರಿ ಚಿತ್ರದಲ್ಲಿ ಇಶಾನ್, ಆಶಿಕಾ ರಂಗನಾಥ್ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಪವನ್ ಒಡೆಯರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್, ಸಾಂಗ್ಸ್ ಹಿಟ್ ಆಗಿದೆ.

  English summary
  Crazy Star Ravichandran praises Kgf Yash and Kantara Rishab shetty's hard work. At the Pre Release event of Raymo, He talked about Kannada industry Growth and Kannada Movies success. Know more.
  Monday, November 21, 2022, 9:37
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X