For Quick Alerts
  ALLOW NOTIFICATIONS  
  For Daily Alerts

  ಮಾಲಾಶ್ರೀ ಮಗಳ ಜೊತೆ 'ಮಲ್ಲ 2' ಸಿನಿಮಾ ಮಾಡುತ್ತಾರಾ ಕ್ರೇಜಿಸ್ಟಾರ್? ಕನಸಿನ ರಾಣಿ ರಿಯಾಕ್ಷನ್ ಏನು?

  |

  ರಾಮು ಬ್ಯಾನರ್‌ನಲ್ಲಿ ಬಹುತೇಕ ಇಡೀ ಕನ್ನಡ ಚಿತ್ರರಂಗವೇ ಕೆಲಸ ಮಾಡಿದೆ. ಕನ್ನಡ ಸೂಪರ್‌ಸ್ಟಾರ್‌ಗಳು ರಾಮು ನಿರ್ಮಾಣ ಚಿತ್ರದಲ್ಲಿ ಮಿಂಚಿದ ಉದಾಹರಣೆಗಳು ಸಾಕಷ್ಟಿವೆ. ರವಿಚಂದ್ರನ್, ಶಿವರಾಜ್‌ಕುಮಾರ್, ಉಪೇಂದ್ರ, ದೇವರಾಜ್, ಗಣೇಶ್, ಡಾರ್ಲಿಂಗ್ ಕೃಷ್ಣರಂತಹ ನಟರಿಗೆ ರಾಮು ಬ್ಯಾನರ್ ವೇದಿಕೆಯಾಗಿದೆ. ಹೀಗಾಗಿ ರಾಮು ನಿರ್ಮಿಸಿದ ಕೊನೆಯ ಸಿನಿಮಾ ಅರ್ಜುನ್ ಗೌಡ ಪ್ರಚಾರಕ್ಕೆ ಆ ಎಲ್ಲಾ ನಟರೂ ಒಂದೇ ವೇದಿಕೆ ಮೇಲೆ ಪ್ರತ್ಯಕ್ಷರಾಗಿದ್ದರು.

  'ಅರ್ಜುನ್ ಗೌಡ' ಸಿನಿಮಾ ಕಾರ್ಯಕ್ರಮದಲ್ಲಿ ಒಬ್ಬರ ಸ್ಟಾರ್‌ ನಟನೂ ರಾಮು ಜೊತೆ ಸಿನಿಮಾ ಮಾಡಿದ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ. ಅದರಲ್ಲೂ ಕ್ರೇಜಿಸ್ಟಾರ್ ರವಿಚಂದ್ರನ್ 'ಮಲ್ಲ' ಸಿನಿಮಾ ಸೆಟ್ಟೇರಿದ ಸ್ವಾರಸ್ಯಕರ ಸಂಗತಿಯನ್ನು ರಿವೀಲ್ ಮಾಡಿದ್ದಾರೆ. ರಾಮಾಚಾರಿಗಾಗಿ ಮಾಲಾಶ್ರೀ ಎಷ್ಟು ದಿನ ಕಾಲ್‌ಶೀಟ್ ಕೊಟ್ಟಿದ್ದರು? 'ಶಕುನಿ' ಸಿನಿಮಾ ನಿಂತು ಹೋಗಿದ್ದೇಗೆ? ಅನ್ನುವುದನ್ನು ಹೇಳಿದ್ದಾರೆ. ಇದೇ ವೇಳೆ 'ಮಲ್ಲ 2' ಚಿತ್ರದ ಬಗ್ಗೆನೂ ಮಾಲಾಶ್ರೀ ಮುಂದೆ ಪ್ರಸ್ತಾಪ ಮಾಡಿದ್ದಾರೆ.

  ಮಾಲಾಶ್ರೀ ಋಣ ತೀರಿಸಿದ ಸಿನಿಮಾ 'ಮಲ್ಲ'

  ಮಾಲಾಶ್ರೀ ಋಣ ತೀರಿಸಿದ ಸಿನಿಮಾ 'ಮಲ್ಲ'

  ಮಾಲಾಶ್ರಿ ರಾಮಾಚಾರಿ ಸಿನಿಮಾದಲ್ಲಿ ಕೆಲಸ ಮಾಡಿದ್ದರು. ಇದರಿಂದ ನನಗೆ ಒಳ್ಳೆಯದಾಯಿತು. ಹಾಗೇ 'ಮಲ್ಲ' ಸಿನಿಮಾ ರಾಮಾಚಾರಿಯ ಋಣ ತೀರಿಸುವ ಸಿನಿಮಾ ಆಯಿತು ಎಂದು ಕ್ರೇಜಿಸ್ಟಾರ್ ವೇದಿಕೆ ಮೇಲೆ ಹೇಳಿದ್ದಾರೆ. "ಒಂದು ಕಾಲದಲ್ಲಿ ಇವರು ಶೂಟಿಂಗ್ ಮಾಡಿದ್ದು ಮಾಡಿದ್ದೇ. ಅಂತಹ ಸಮಯದಲ್ಲೂ ನಾನು ರಾಮಾಚಾರಿಗೆ ಕಾಲ್‌ಶೀಟ್ ಕೇಳಿದಾಗ ಬಂದು ಮಾಡಿ ಹೋದರು. 12 ದಿನ ಹಗಲು-ರಾತ್ರಿ ನಟನೆ ಮಾಡಿ ಹೋದರು. ಒಂದು ಒಳ್ಳೆ ಗುಣವಿರುವ ಸೂಪರ್‌ಸ್ಟಾರ್. ಹೀರೋಯಿನ್ ಅಲ್ಲ ಇವರು. ಇವರನ್ನು ಯಾವತ್ತೂ ಹೀರೋಯಿನ್ ಅನ್ನುವುದಕ್ಕೆ ಸಾಧ್ಯನೇ ಇಲ್ಲ. ಹೀರೋನೇ ಇವರು. ರಾಮಾಚಾರಿಯಲ್ಲಿ ಹೇಗೆ ನನಗೆ ಸಹಾಯ ಮಾಡಿ ಒಂದು ಒಳ್ಳೆಯದು ಆಯ್ತೋ, ಆ ಋಣ ತೀರಿಸುವುದಕ್ಕೆ ಮಲ್ಲ ಸಿನಿಮಾ ಒಂದು ಕಾರಣವಾಯ್ತು. ಎಲ್ಲರಿಗೂ ಇದು ಬೇಕು. ಒಮ್ಮೆ ನಾವು ಕೆಳಗೆ ಬೀಳುತ್ತೇವೆ. ಮತ್ತೆ ಕೆಲವೊಮ್ಮೆ ಇನ್ನೊಬ್ಬರು ಕೆಳಗೆ ಬೀಳುತ್ತಾರೆ. ರಾಮು ಫಿಲಂಸ್‌ಗೆ ಅದರದ್ದೇ ಆದ ಒಂದು ಸ್ಥಾನವಿದೆ. ರಾಮು ಫಿಲಂಸ್ ಆದ್ಮೇಲೆನೇ ಅರ್ಜುನ್ ಗೌಡ. ಇವೆರಡೂ ಕಾಂಬಿನೇಷನ್ ಬಂದಾಗ, ಜನ ಕೊಡಬೇಕಾದ ಬೆಲೆ ಕೊಟ್ಟೇ ಕೊಡುತ್ತಾರೆ." ಎಂದು ಮಾಲಾಶ್ರೀಗೆ ಕ್ರೇಜಿಸ್ಟಾರ್ ಧೈರ್ಯ ತುಂಬಿದ್ದಾರೆ.

  ನಿಮ್ಮ ಮಗಳ ಜೊತೆ 'ಮಲ್ಲ 2' ಸಿನಿಮಾ

  ನಿಮ್ಮ ಮಗಳ ಜೊತೆ 'ಮಲ್ಲ 2' ಸಿನಿಮಾ

  ಪತಿ ರಾಮು ನೆನೆದು ಕಣ್ಣೀರು ಇಡುತ್ತಿದ್ದ ಕನಸಿನ ರಾಣಿ ಮಾಲಾಶ್ರೀಯವರನ್ನು ಕ್ರೇಜಿಸ್ಟಾರ್ ನಗೆಗಡಲಲ್ಲಿ ತೇಲಿಸಿದರು. ಈ ವೇಳೆ ಮಾಲಾಶ್ರೀ ಪುತ್ರಿ ಅನನ್ಯಾಗೆ ಮೊದಲು ಮೇಕಪ್ ಹಚ್ಚಿದ್ದನ್ನು ರವಿಚಂದ್ರನ್ ನೆನಪಿಸಿಕೊಂಡಿದ್ದಾರೆ. "ಇವರ ಮಗಳಿಗೆ ಮೊದಲು ಮಲ್ಲ ಸಿನಿಮಾದಲ್ಲಿ ಮೇಕಪ್ ಹಾಕಿದ್ದು ನಾನೇ. ನಾವೆಲ್ಲ ನಿಮ್ಮ ಜೊತೆಗಿದ್ದೀವಿ. ಮಲ್ಲ 2 ಮಾಡಲ್ವಾ? ನಿಮ್ಮ ಮಗಳ ಜೊತೆ ಸಿನಿಮಾ ಮಾಡ್ಲಾ? ಹೋಗಲಿ ನನ್ನ ಮಗ ಜೊತೆ ಸಿನಿಮಾ ಮಾಡಿಸಿ. ಓಕೆ ನನ್ನ ಜೊತೆ ಬೇಡ." ಎಂದು ರಾಮು ನೆನೆದು ಕಣ್ಣೀರು ಹಾಕಿದ್ದ ಮಾಲಾಶ್ರೀಯವರ ಮುಖದಲ್ಲಿ ಕ್ರೇಜಿಸ್ಟಾರ್ ನಗು ತರಿಸಿದರು.

  ರಾಮುಗೆ ಶಕನಿ ಗೆಟಪ್ ಇಷ್ಟ ಆಗಿರಲಿಲ್ಲ

  ರಾಮುಗೆ ಶಕನಿ ಗೆಟಪ್ ಇಷ್ಟ ಆಗಿರಲಿಲ್ಲ

  " ರಾಮುಗಾಗಿ ನಾನು ಮೊದಲು ಸಹಿ ಮಾಡಿದ್ದು ಶಕುನಿಗಾಗಿ. 40 ಪರ್ಸೆಂಟ್ ಸಿನಿಮಾ ಆಗಿ ಹೋಗಿತ್ತು. ರಾಮುಗೆ ಅದೇನಾಯ್ತೋ ಗೊತ್ತಿಲ್ಲ. ಒಂದು ದಿನ ಸಡನ್‌ ಆಗಿ ಮನೆಗೆ ಬಂದು, ಸಾರ್ ಯಾಕೋ ನನಗೆ ನಿಮ್ಮ ಗೆಟಪ್ ಇಷ್ಟ ಆಗ್ತಿಲ್ಲ ಅಂದ್ಬಿಟ್ಟರು. 40 ಪರ್ಸೆಂಟ್ ಸಿನಿಮಾ ಆಗಿದೆ. ಈಗ ಗೆಟಪ್ ಚೆನ್ನಾಗಿಲ್ಲ ಅಂದರೆ, ಏನು ಮಾಡಲಿ. ನೀವು ಹೀಗೆ ಕೂದಲು ಬಿಟ್ಟುಕೊಂಡಿರುವುದು ಇಷ್ಟ ಆಗುತ್ತಿಲ್ಲವೆಂದು ಹೇಳಿದರು. ಶಕನಿನ ಪಕ್ಕಕ್ಕಿಟ್ಟು, ನಾನೊಂದು ಸಿನಿಮಾ ಮಾಡಿಕೊಡುತ್ತೇನೆ. ನನ್ನ ಇಷ್ಟಕ್ಕೆ ಬಿಟ್ಟುಬಿಡು ಎಂದು ಮಲ್ಲ ಶುರುಮಾಡಿದ್ದು." ಎಂದು ಶಕನಿ ನಿಂತು ಹೋದ ಕ್ಷಣವನ್ನು ರವಿಚಂದ್ರನ್ ನೆನಪಿಸಿಕೊಂಡಿದ್ದಾರೆ.

  ರಾಮು ಕುಟುಂಬದ ಜೊತೆ ನಾವೆಲ್ಲರೂ ಇದ್ದೇವೆ

  " ಖಂಡಿತಾ ಎಲ್ಲರಿಗೂ ಮನಸ್ಸಲ್ಲಿ ನೋವಿರುತ್ತೆ. ಯಾರಾದರೂ ನಮ್ಮನ್ನು ಬಿಟ್ಟು ಹೋಗುತ್ತಾರೆ ಅಂದರೆ, ಅದಕ್ಕೊಂದು ಕಾರಣವಿರುತ್ತೆ. ಅದರ ಬೆಲೆ ಗೊತ್ತಾಗುವುದೇ ಆಮೇಲೆ ಅಂತ. ಅದರ ಬೆಲೆ ಇವತ್ತು ಗೊತ್ತಾಗುತ್ತಿದೆ. ಎಲ್ಲರೂ ಇಲ್ಲಿ ಸೇರಿದ್ದೀವಿ ಅಂದರೆ, ನಿಮ್ಮ ಜೊತೆ ನಾವೆಲ್ಲರೂ ಇರುತ್ತೇವೆ ಅಂತ ಹೇಳುವುದಕ್ಕೆ ಇಂದು ನಾವೆಲ್ಲರೂ ಸೇರಿದ್ದೇವೆ. ಇದು ಕನ್ನಡ ಚಿತ್ರರಂಗದಲ್ಲಿ ಮಾತ್ರ ಸಾಧ್ಯ." ಎಂದು ರವಿಚಂದ್ರನ್ ದುಃಖದಲ್ಲಿರುವ ಮಾಲಾಶ್ರೀ‍ಗೆ ಭರವಸೆ ನೀಡಿದ್ದಾರೆ.

  English summary
  Ravichandran wants to do Malla2 with Malashree daughter Ananya. Crazy Star revealed how Malla gone to set and created history.
  Thursday, December 30, 2021, 9:08
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X