»   » ಎಲ್ಲೇ ಹೋದ್ರೂ ಸುದೀಪ್ 'ರನ್ನ' ನೆನೆಯದೇ ರವಿಶಂಕರ್ ಮಾತು ಮುಗಿಸೋಲ್ಲ.!

ಎಲ್ಲೇ ಹೋದ್ರೂ ಸುದೀಪ್ 'ರನ್ನ' ನೆನೆಯದೇ ರವಿಶಂಕರ್ ಮಾತು ಮುಗಿಸೋಲ್ಲ.!

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಸದ್ಯದ 'ಬಿಜಿಯೆಸ್ಟ್ ವಿಲನ್' ಯಾರು ಅಂತ ಕೇಳಿದ್ರೆ, ಯಾರ್ ಬೇಕಾದ್ರೂ ಹೇಳ್ತಾರೆ 'ರವಿಶಂಕರ್' ಅಂತ.! ಅಷ್ಟರಮಟ್ಟಿಗೆ ಚಂದನವನದಲ್ಲಿ ಹವಾ ಕ್ರಿಯೇಟ್ ಮಾಡಿರುವ ಖಳನಾಯಕ ರವಿಶಂಕರ್.

ಡಬ್ಬಿಂಗ್ ಆರ್ಟಿಸ್ಟ್ ಆಗಿ ಟಾಲಿವುಡ್ ಹಾಗೂ ಕಾಲಿವುಡ್ ನಲ್ಲಿ ಗುರುತಿಸಿಕೊಂಡಿದ್ದ ರವಿಶಂಕರ್ ಗೆ ಖಳನಟನಾಗುವ ಅವಕಾಶ ಕೊಟ್ಟಿದ್ದು ಕಿಚ್ಚ ಸುದೀಪ್. ಅದು 'ಕೆಂಪೇಗೌಡ' ಚಿತ್ರದ ಮೂಲಕ.[ಕೇಡಿ ರವಿಶಂಕರ್ ಅಸಲಿಯತ್ತು ಬಯಲು ಮಾಡಿದ ಕಿಚ್ಚ ಸುದೀಪ್.!]


'ಕೆಂಪೇಗೌಡ' ಚಿತ್ರದಲ್ಲಿ 'ಆರ್ಮುಗಂ' ಆಗಿ ಆರ್ಭಟಿಸಿದ ರವಿಶಂಕರ್... ಅಲ್ಲಿಂದ ಹಿಂದಿರುಗಿ ನೋಡಿದ್ದೇ ಇಲ್ಲ. ಹೀಗಾಗಿ ಎಲ್ಲೇ ಹೋದರೂ... ತಮ್ಮ ಸಿನಿ ಜರ್ನಿಗೆ ಬಿಗ್ ಬ್ರೇಕ್ ಕೊಟ್ಟ ಕಿಚ್ಚ ಸುದೀಪ್ ರವರಿಗೆ ರವಿಶಂಕರ್ 'ಥ್ಯಾಂಕ್ಸ್' ಹೇಳೋದನ್ನ ಮರೆಯೋಲ್ಲ. ಸುದೀಪ್ ರವರನ್ನ ನೆನೆಯದೇ ರವಿಶಂಕರ್ ಮಾತು ಮುಗಿಸುವುದಿಲ್ಲ.


'ಹೆಬ್ಬುಲಿ' ಪ್ರೆಸ್ ಮೀಟ್ ನಲ್ಲಿ ಆಗಿದ್ದು ಇದೇ.!

ಮೊನ್ನೆ ನಡೆದ 'ಹೆಬ್ಬುಲಿ' ಚಿತ್ರದ ಪತ್ರಿಕಾಗೋಷ್ಟಿಯಲ್ಲೂ ಇದೇ ಆಯ್ತು. ಮಾಧ್ಯಮ ಹಾಗೂ ಪತ್ರಿಕಾ ಮಿತ್ರರನ್ನು ಉದ್ದೇಶಿಸಿ ಮಾತನಾಡುವಾಗ ಕಿಚ್ಚ ಸುದೀಪ್ ರವರಿಗೆ ರವಿಶಂಕರ್ ತುಂಬು ಹೃದಯದಿಂದ ಧನ್ಯವಾದ ಅರ್ಪಿಸಿದರು.[ಕೂದಲು ಕಟ್ ಮಾಡಿದ್ದಕ್ಕೆ ಲಿಫ್ಟ್ ಒಡೆದು ಹಾಕಿದ್ದ ರವಿಶಂಕರ್!]


ಕನಸು ನನಸು ಮಾಡಿದ ಸುದೀಪ್

''25 ವರ್ಷ ಆಕ್ಟಿಂಗ್ ಮಾಡಲು ತುಂಬಾ ಟ್ರೈ ಮಾಡಿದ್ದೆ. ಆಕ್ಟಿಂಗ್ ಮಾಡುವ ಕನಸು ನನಗೆ ತುಂಬಾ ಇತ್ತು. ಅದು ಸಾಧ್ಯವಾಗಿದ್ದು ನನ್ನ ಗೆಳೆಯ ಕಿಚ್ಚ ಸುದೀಪ್ ರಿಂದ... 'ಕೆಂಪೇಗೌಡ' ಚಿತ್ರದಲ್ಲಿ.!'' - ರವಿಶಂಕರ್, ನಟ


ಎಲ್ಲದಕ್ಕೂ ಕಾರಣ ಸುದೀಪ್.!

''ಇವತ್ತು ನಾನು ಇಲ್ಲಿ ಬಂದು ನಿಮ್ಮೆಲ್ಲರ ಮುಂದೆ ನಿಂತುಕೊಂಡು ಮಾತನಾಡುತ್ತಿದ್ದೇನೆ ಅಂದ್ರೆ ಅದಕ್ಕೆ ಕಾರಣ ಕಿಚ್ಚ ಸುದೀಪ್ ಮತ್ತು 'ಕೆಂಪೇಗೌಡ' ಸಿನಿಮಾ. ಒನ್ಸ್ ಅಗೇನ್ ಥ್ಯಾಂಕ್ಸ್ ಟು ಸುದೀಪ್'' ಎಂದರು ರವಿಶಂಕರ್.


ಸುದೀಪ್-ರವಿಶಂಕರ್ ಕಾಂಬಿನೇಷನ್

''ಹೆಬ್ಬುಲಿ'.... ಸುದೀಪ್ ಜೊತೆ ನನ್ನ ಏಳನೇ ಸಿನಿಮಾ. ಸುದೀಪ್ ಜೊತೆ ಕೆಲಸ ಮಾಡುವುದೇ ಖುಷಿ ನನಗೆ. ಮತ್ತೆ ಮತ್ತೆ ಸುದೀಪ್ ಜೊತೆ ವರ್ಕ್ ಮಾಡುವ ಅವಕಾಶ ಸಿಕ್ಕರೆ ಖುಷಿಯೇ'' ಎಂದು ಮಾತು ಮುಗಿಸಿದರು ರವಿಶಂಕರ್.


ತೆರೆಹಿಂದಿನ ರವಿಶಂಕರ್ ಮೇಲೆ

ಅಂದ್ಹಾಗೆ, ತೆರೆಮೇಲೆ ಕೇಡಿ ಪಾತ್ರದಲ್ಲಿ ಆರ್ಭಟಿಸುವ ರವಿಶಂಕರ್, ನಿಜ ಜೀವನದಲ್ಲಿ ತದ್ವಿರುದ್ಧ. ಪರದೆ ಮೇಲೆ ಅವರು ರಫ್ ಅಂಡ್ ಟಫ್ ಆಗಿದ್ರೆ, ರಿಯಲ್ ಲೈಫ್ ನಲ್ಲಿ ಅವರು ತುಂಬಾ ಸಾಫ್ಟ್.


'ಹೆಬ್ಬುಲಿ' ಚಿತ್ರದಲ್ಲಿ ರವಿಶಂಕರ್

'ಹೆಬ್ಬುಲಿ' ಚಿತ್ರದಲ್ಲೂ ರವಿಶಂಕರ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಸುದೀಪ್-ರವಿಶಂಕರ್ ಜುಗಲ್ಬಂದಿ ಹೇಗಿರುತ್ತೆ ಅಂತ ನೋಡಲು ಫೆಬ್ರವರಿ 23 ವರೆಗೂ ಕಾಯಿರಿ... ಯಾಕಂದ್ರೆ, 'ಹೆಬ್ಬುಲಿ' ಬಿಡುಗಡೆ ಆಗುವುದು ಅವತ್ತೆ.


English summary
Kannada Actor Ravishankar thanked Kiccha Sudeep during 'Hebbuli' Press Meet.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada