For Quick Alerts
  ALLOW NOTIFICATIONS  
  For Daily Alerts

  ಟ್ವಿಟ್ಟರ್ ವಿಮರ್ಶೆ: 'ಗೀತ ಗೋವಿಂದಂ' ಹಲವರಿಗೆ ಇಷ್ಟ, ಕೆಲವರಿಗೆ ಕಷ್ಟ ಕಷ್ಟ.!

  By Harshitha
  |

  ಪರಶುರಾಮ್ ನಿರ್ದೇಶನದ 'ಗೀತ ಗೋವಿಂದಂ' ಸಿನಿಮಾ ಇಂದು ವಿಶ್ವದಾದ್ಯಂತ ಬಿಡುಗಡೆ ಆಗಿದೆ. ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ಅಭಿನಯದ 'ಗೀತ ಗೋವಿಂದಂ' ಚಿತ್ರಕ್ಕೆ ಎಲ್ಲೆಡೆ ಭರ್ಜರಿ ಓಪನ್ನಿಂಗ್ ಸಿಕ್ಕಿದೆ.

  ಬಹುತೇಕ ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್ ಗಳಲ್ಲಿ 'ಗೀತ ಗೋವಿಂದಂ' ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಟಿಕೆಟ್ ಗಳಂತೂ ಬಿಸಿ ಬಿಸಿ ಬೆಣ್ಣೆ ದೋಸೆಯಂತೆ ಸೇಲ್ ಆಗುತ್ತಿದೆ.

  ವಿಜಯ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ 'ಗೀತ ಗೋವಿಂದಂ' ಸಿನಿಮಾ ಸಿಕ್ಕಾಪಟ್ಟೆ ಇಷ್ಟ ಆಗಿದೆ. ಆದ್ರೆ, ಕೆಲವರಿಗೆ ಮಾತ್ರ ಸಿನಿಮಾ ಅಷ್ಟು ಖುಷಿ ಕೊಟ್ಟಿಲ್ಲ. 'ಗೀತ ಗೋವಿಂದಂ' ನಿರೀಕ್ಷೆಯ ಮಟ್ಟ ತಲುಪಿಲ್ಲ ಎಂಬ ಅಭಿಪ್ರಾಯ ಟ್ವಿಟ್ಟರ್ ನಲ್ಲಿ ವ್ಯಕ್ತವಾಗಿದೆ.

  'ಗೀತ ಗೋವಿಂದಂ' ಚಿತ್ರವನ್ನ ಕಣ್ತುಂಬಿಕೊಂಡು, ಪ್ರೇಕ್ಷಕ ಮಹಾಪ್ರಭುಗಳು ನೀಡಿರುವ ಟ್ವಿಟ್ಟರ್ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ, ನೋಡಿರಿ...

  ಮತ್ತೊಂದು ಬ್ಲಾಕ್ ಬಸ್ಟರ್

  ''ನಟ ವಿಜಯ್ ದೇವರಕೊಂಡ ಅದ್ಹೇಗೆ ಸ್ಕ್ರಿಪ್ಟ್ ಗಳನ್ನ ಆಯ್ಕೆ ಮಾಡ್ತಾರೋ, ಏನೋ.? ಈ ಸಿನಿಮಾ ಅವರ ಇನ್ನೊಂದು ಬ್ಲಾಕ್ ಬಸ್ಟರ್. ಮಾಮೂಲಿ ಕಥೆ ಜೊತೆಗೆ ಬ್ರ್ಯಾಂಡ್ ನ್ಯೂ ಟ್ವಿಸ್ಟ್ ಇದೆ. ಶೇ.60 ರಷ್ಟು ಹೆಣ್ಮಕ್ಕಳೇ ಸಿನಿಮಾಗೆ ಬಂದಿದ್ದಾರೆ. ಪ್ರತಿಯೊಬ್ಬರು ಚಿತ್ರವನ್ನ ಎಂಜಾಯ್ ಮಾಡ್ತಿದ್ದಾರೆ'' - ಪ್ರಶಾಂತ್ ರಂಗಸ್ವಾಮಿ.

  ವೈರಲ್ ಆಗಿದೆ ತೆಲುಗು ನಟನ ಜೊತೆಗೆ ರಶ್ಮಿಕಾ ಲಿಪ್-ಲಾಕ್ ವಿಡಿಯೋ.!ವೈರಲ್ ಆಗಿದೆ ತೆಲುಗು ನಟನ ಜೊತೆಗೆ ರಶ್ಮಿಕಾ ಲಿಪ್-ಲಾಕ್ ವಿಡಿಯೋ.!

  ಒಳ್ಳೆ ಎಂಟರ್ ಟೇನರ್

  ''ಗೀತ ಗೋವಿಂದಂ' ಒಂದೊಳ್ಳೆ ಎಂಟರ್ ಟೇನರ್. ಅರ್ಜುನ್ ರೆಡ್ಡಿಯಿಂದ ಗೋವಿಂದಂವರೆಗಿನ ಟ್ರಾನ್ಸ್ ಫಾರ್ಮೇಷನ್ ಮೆಚ್ಚುವಂಥದ್ದು. ವಿಜಯ್ ದೇವರಕೊಂಡ ಕಾಮಿಡಿ ಟೈಮಿಂಗ್ ಚೆನ್ನಾಗಿದೆ. ಭಾವನಾತ್ಮಕ ಸನ್ನಿವೇಶಗಳಲ್ಲಿ ರಶ್ಮಿಕಾ ನಟನೆ ಉತ್ತಮವಾಗಿ ಮೂಡಿ ಬಂದಿದೆ'' ಎಂದಿದ್ದಾರೆ ವೀಕ್ಷಕರು.

  ರಶ್ಮಿಕಾ ಮಂದಣ್ಣ ಬಗ್ಗೆ ಏನೇನೋ ಸುದ್ದಿ: ಯಾವುದನ್ನೂ ನಂಬಬೇಡಿ.!ರಶ್ಮಿಕಾ ಮಂದಣ್ಣ ಬಗ್ಗೆ ಏನೇನೋ ಸುದ್ದಿ: ಯಾವುದನ್ನೂ ನಂಬಬೇಡಿ.!

  ಗಟ್ಟಿಯಿಲ್ಲದ ಚಿತ್ರಕಥೆ

  ''ಗಟ್ಟಿಯಿಲ್ಲದ ಚಿತ್ರಕಥೆಯನ್ನ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಆಕ್ಟಿಂಗ್ ಬಚಾವ್ ಮಾಡಿದೆ. ಕಾಮಿಡಿ ಸೀನ್ ಗಳಲ್ಲಿ ಪರಶುರಾಮ್ ಕೆಲಸ ಡೀಸೆಂಟ್ ಆಗಿದೆ. ಆದರೆ ಅವರ ಡೈಲಾಗ್ ಗಳು ವಿಫಲವಾಗಿವೆ'' - ಎಂದು ವರುಣ್ ಎಂಬುವರು ಟ್ವೀಟ್ ಮಾಡಿದ್ದಾರೆ.

  ಕಳಪೆ ನಿರ್ದೇಶನ

  ''ಫಸ್ಟ್ ಹಾಫ್ ಅಷ್ಟಕಷ್ಟೆ. ಪರಶುರಾಮ್ ರವರ ಕಳಪೆ ನಿರ್ದೇಶನ ಚಿತ್ರವನ್ನ ಹಾಳು ಮಾಡಿದೆ. ಫಸ್ಟ್ ಹಾಫ್ ನಲ್ಲಿ ಯಾವುದೇ ಫ್ರೆಶ್ ಸೀನ್ ಗಳಿಲ್ಲ. ಎಲ್ಲವೂ ಸೆಕೆಂಡ್ ಹಾಫ್ ಮೇಲೆ ನಿಂತಿದೆ'' ಅಂತಿದ್ದಾರೆ ಪ್ರೇಕ್ಷಕ ಮಹಾಪ್ರಭುಗಳು.

  English summary
  Tollywood Actor Vijay Devarakonda and Rashmika Mandanna starrer 'Geetha Govindam' is getting mixed response in Twitter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X