»   » ಸೈಲೆಂಟ್ 'ಹುಚ್ಚ ವೆಂಕಟ್' ಏಕ್ದಂ ವೈಲೆಂಟ್ ಆಗಿದ್ಯಾಕೆ?

ಸೈಲೆಂಟ್ 'ಹುಚ್ಚ ವೆಂಕಟ್' ಏಕ್ದಂ ವೈಲೆಂಟ್ ಆಗಿದ್ಯಾಕೆ?

Posted By:
Subscribe to Filmibeat Kannada

'ಹುಚ್ಚ ವೆಂಕಟ್' ಸಿನಿಮಾ ಮಕಾಡೆ ಮಲಗಿರಬಹುದು. ಆದ್ರೆ, ಈ ಹುಚ್ಚ ವೆಂಕಟ್ ಅನ್ನೋ ಕ್ಯಾರೆಕ್ಟರ್ ಇದ್ಯಲ್ಲಾ. ಅದು ಮಾತ್ರ ಸೂಪರ್ ಡ್ಯೂಪರ್ ಹಿಟ್ ಆಗೋಗಿದೆ.

ಅದ್ಯಾವ ಘಳಿಗೇಲಿ, ಖಾಸಗಿ ಸುದ್ದಿ ವಾಹಿನಿ ಮುಂದೆ ತಮ್ಮ ಕನಸಿನ ಕೂಸು 'ಹುಚ್ಚ ವೆಂಕಟ್' ಸಿನಿಮಾ ಸೋತು ಹೋಯ್ತಲ್ಲಾ ಅಂತ ತಮ್ಮೊಳಗಿದ್ದ ಆಕ್ರೋಶವನ್ನ ಹುಚ್ಚ ವೆಂಕಟ್ ಹೊರಗಡೆ ಹಾಕಿದ್ರೋ, ಅಂದೇ ಸಾಮಾಜಿಕ ಜಾಲತಾಣಗಳಲ್ಲಿ ಮಿಸ್ಟರ್ ಹುಚ್ಚ ವೆಂಕಟ್ ಫೇಮಸ್ ಆಗ್ಬಿಟ್ಟರು.

'ರಮ್ಯಾ ನನ್ನ ಹೆಂಡತಿ' ಅಂತ್ಹೇಳಿದ್ದ ಹುಚ್ಚ ವೆಂಕಟ್ ಸುದ್ದಿ ವಾಹಿನಿಗಳಲ್ಲಿ ಟಿ.ಆರ್.ಪಿ ಪೀಸ್ ಅಗ್ಬಿಟ್ಟರು.

ಓದುಗರೇ ಒಂದು ವಿಷಯ ನೆನಪಿನಲ್ಲಿಡಿ, ಕೆಲವೇ ಕೆಲವು ವರ್ಷಗಳ ಹಿಂದೆ ಈಗ ಹುಚ್ಚ ವೆಂಕಟ್ ಅಂತ ಕರೆಯಿಸಿಕೊಳ್ಳುವ ವೆಂಕಟರಾಮನ್ ಹೀಗೆ ಇರ್ಲಿಲ್ಲ. ಇಂದು ಯಾರ ಮುಖ ಮೂತಿಯೂ ನೋಡದೆ 'ಎಕ್ಕಡ'ದ ಮಾತಾಡುವ ಹುಚ್ಚ ವೆಂಕಟ್, ಒಂದ್ಕಾಲದಲ್ಲಿ ಸೌಮ್ಯ ಸ್ವಭಾವದ ವ್ಯಕ್ತಿ. [ಯಾರೀ ಹುಚ್ಚ ವೆಂಕಟ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

ಸುಶಿಕ್ಷಿತ, ಬುದ್ಧಿವಂತ ವೆಂಕಟರಾಮನ್ ಏಕ್ದಂ 'ಹುಚ್ಚ ವೆಂಕಟ್' ಆಗುವುದಕ್ಕೆ ಕಾರಣವೇನು? ಅವರ ಬದುಕ್ಕಲ್ಲಾದ ಕಹಿ ಘಟನೆ ಏನು ಅನ್ನೋದನ್ನ ಹೇಳ್ತೀವಿ. ಕೆಳಗಿರುವ ಸ್ಲೈಡ್ ಗಳನ್ನ ಒಂದೊಂದೇ ಕ್ಲಿಕ್ಕಿಸುತ್ತಾ ಹೋಗಿ......

ಹುಚ್ಚ ವೆಂಕಟ್ ಹಿನ್ನಲೆ.....

ಎಲ್ಲರೂ ತಿಳಿದುಕೊಂಡಿರುವ ಹಾಗೆ ಇವರ ಹೆಸರು ಹುಚ್ಚ ವೆಂಕಟ್ ಅಲ್ಲ. ಇವರ ನಿಜನಾಮ ವೆಂಕಟರಾಮನ್. PWD ಕಾಂಟ್ರ್ಯಾಕ್ಟರ್ ಲಕ್ಷ್ಮಣ್ ಮತ್ತು ಗೌರಮ್ಮ ದಂಪತಿಯ ಏಳು ಮಕ್ಕಳಲ್ಲಿ ವೆಂಕಟರಾಮನ್ ಕೊನೆಯ ಮಗ. ತಂದೆ-ತಾಯಿಯ ಮುದ್ದಿನ ಮಗ.

ತಾಯಿಗೆ ವೆಂಕಲ್ ಅಂದ್ರೆ ಅಚ್ಚುಮೆಚ್ಚು

ತಾಯಿ ಗೌರಮ್ಮಗೆ ವೆಂಕಟರಾಮನ್ ಅಂದ್ರೆ ಅಚ್ಚುಮೆಚ್ಚು. ಪ್ರೀತಿಯಿಂದ ಮಗನನ್ನ ವೆಂಕಲ್ ಅಂತ ಗೌರಮ್ಮ ಕರೀತಾಯಿದ್ರು. ಪ್ರತಿದಿನ ವೆಂಕಲ್ ಗೆ ತಾಯಿ ಗೌರಮ್ಮ ತುತ್ತು ಹಾಕಿ ಊಟ ಮಾಡಿಸುತ್ತಿದ್ದರು.

ವೆಂಕಟ್ ಗೆ ತಾಯಿಯೇ ಪ್ರಪಂಚ

ವೆಂಕಟರಾಮನ್ ಗೆ ತಾಯಿ ಗೌರಮ್ಮನೇ ಪ್ರಪಂಚ. ಅಮ್ಮ ಹಾಕಿದ ಗೆರೆಯನ್ನ ಮಗ ವೆಂಕಟ್ ಎಂದೂ ದಾಟಿದವರಲ್ಲ. ತಾನು ಸಿನಿಮಾ ನಟ ಆಗ್ತೀನಿ ಅಂತ ಹೊರಟಾಗ ತಾಯಿ ಗೌರಮ್ಮ ಮಗನಿಗೆ ಆಶೀರ್ವಾದ ಮಾಡಿದ್ರು.

Introvert ವೆಂಕಟರಾಮನ್.!

ವೆಂಕಟರಾಮನ್ ಮೂಲತಃ ಸೌಮ್ಯ ಸ್ವಭಾವದ ವ್ಯಕ್ತಿ. ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲ್ಲಿಲ್ಲ. ಮನೆಯಲ್ಲಿ ಅವರು ಇರುವುದೇ ಯಾರಿಗೂ ಗೊತ್ತಾಗುತ್ತಿರಲಿಲ್ಲ. ಬಾಲ್ಯದಲ್ಲಿ ಚ್ಯೂಟಿಯಾಗಿದ್ದರೂ, ವೆಂಕಟ್ ತುಂಬಾ ಮೃದು ಸ್ವಭಾವದವರು.

'ಸ್ವತಂತ್ರಪಾಳ್ಯ'ದಲ್ಲಿ ಮೊದಲು ಏಟು ಬಿತ್ತು.!

ಅಣ್ಣನಿಂದ ಸ್ಪೂರ್ಥಿ ಪಡೆದು, ಸಿವಿಲ್ ಎಂಜಿನಿಯರ್ ಆಗಿದ್ದರೂ ಬಣ್ಣದ ಲೋಕಕ್ಕೆ ಕಾಲಿಟ್ಟ ವೆಂಕಟ್, 'ಸ್ವತಂತ್ರಪಾಳ್ಯ' ಅಂತ ಸಿನಿಮಾ ಮಾಡಿದರು. ಚಿತ್ರ ಫ್ಲಾಪ್ ಆಯ್ತು. ಹುಚ್ಚ ವೆಂಕಟ್ ಮನಸ್ಸಿಗೆ ಮೊದಲು ಘಾಸಿ ಆಗಿದ್ದು ಇದರಿಂದಲೇ. ದೊಡ್ಡ ದೊಡ್ಡ ಕನಸು ಹೊತ್ತು ಚಿತ್ರರಂಗಕ್ಕೆ ಕಾಲಿಟ್ಟ ವೆಂಕಟ್ ಗೆ ಇಲ್ಲಿ ಯಶಸ್ಸು ಸಿಗ್ಲಿಲ್ಲ. ಶಾಲೆ-ಕಾಲೇಜ್ ನಲ್ಲಿ ರ್ಯಾಂಕ್ ಸ್ಟುಡೆಂಟ್ ಆಗಿದ್ದ ವೆಂಕಟ್, ಸಿನಿಮಾರಂಗದಲ್ಲಿ ಸೋತರು. ಅವರ ಮನಸ್ಸಿಗೆ ಮೊದಲ ಏಟು ಬಿದ್ದಿದ್ದೇ ಇಲ್ಲಿ.

ಹುಚ್ಚ ವೆಂಕಟ್ ಆಗಿದ್ದು ಹೇಗೆ?

'ಸ್ವತಂತ್ರಪಾಳ್ಯ' ಸಿನಿಮಾ ನಂತ್ರ ಚಿತ್ರ ನಿರ್ಮಾಣಕ್ಕೆ ವೆಂಕಟರಾಮನ್ ಕೈಹಾಕಲಿಲ್ಲ. ಅಲ್ಲೊಂದು ಇಲ್ಲೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಕೆಲವು ವರ್ಷಗಳ ನಂತರ ಅವರ ಸ್ನೇಹಿತರೆಲ್ಲಾ ಸೇರಿ 'ಮೆಂಟಲ್ ಮಂಜ' ಅಂತ ಸಿನಿಮಾ ಮಾಡಿದರು. ಗಾಂಧಿನಗರದಲ್ಲಿ 'ಮೆಂಟಲ್ ಮಂಜ' ತಕ್ಕಮಟ್ಟಿಗೆ ಹೆಸರು ಮಾಡ್ತು. ಆ ಚಿತ್ರದಲ್ಲಿ ವೆಂಕಟರಾಮನ್ ಕೂಡ ಒಂದು ಸಣ್ಣ ಪಾತ್ರ ಮಾಡಿದ್ದಾರೆ.

ಹುಚ್ಚ ವೆಂಕಟ್ ಗೆ ಇದೇ ಸ್ಪೂರ್ಥಿ.!

'ಮೆಂಟಲ್ ಮಂಜ' ಸೌಂಡ್ ಮಾಡ್ತಿದ್ದ ಹಾಗೆ, ಇದೇ ತರಹ ಸಿನಿಮಾ ಮಾಡ್ಬೇಕು ಅನ್ನೋ ಆಸೆಯಿಂದ ವೆಂಕಟರಾಮನ್ 'ಹುಚ್ಚ ವೆಂಕಟ್' ಅನ್ನೋ ಪ್ರಾಜೆಕ್ಟ್ ಗೆ ಕೈಹಾಕಿದರು. ಆದ್ರೆ, ಅದೂ ಫ್ಲಾಪ್ ಆಯ್ತು.!

ಎರಡೆರಡು ಸೋಲಿನಿಂದ ಕಂಗೆಟ್ಟ ಹುಚ್ಚ ವೆಂಕಟ್

ಚಿತ್ರ ಬದುಕಿನಲ್ಲಿ ಹುಚ್ಚ ವೆಂಕಟ್ ಎರಡು ಬಾರಿ ಸೋಲುಂಡರು. ಸಿವಿಲ್ ಎಂಜಿನಿಯರ್ ಆಗಿ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿ ಬಿಟ್ಟು ಚಿತ್ರರಂಗಕ್ಕೆ ಬಂದ ಹುಚ್ಚ ವೆಂಕಟ್ ಗೆ ಕನ್ನಡ ಸಿನಿ ಪ್ರಿಯರು ಕೈಹಿಡಿಯಲಿಲ್ಲ. ಇದರಿಂದ ಹುಚ್ಚ ವೆಂಕಟ್ ಮಾನಸಿಕ ಖಿನ್ನತೆಗೆ ಒಳಗಾದರು.

ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ತಾಯಿ ತೀರಿಕೊಂಡರು.!

ಹುಚ್ಚ ವೆಂಕಟ್ ಜೀವನದಲ್ಲಾದ ದೊಡ್ಡ ದುರಂತ ಅಂದ್ರೆ ಇದೇ. ಮೂರ್ನಾಲ್ಕು ವರ್ಷಗಳ ಹಿಂದೆಯಷ್ಟೇ ತಾಯಿ ಗೌರಮ್ಮ ತೀರಿಕೊಂಡರು. ಅದರಿಂದ ವೆಂಕಟ್ ಗೆ ಶಾಕ್ ಆಯ್ತು. ಅಮ್ಮನನ್ನ ಕಳ್ಕೊಂಡ ನೋವಿನಲ್ಲಿ ಒಂದು ತಿಂಗಳು ವೆಂಕಟ್ ಮನೆಗೆ ಹೋಗಿರಲಿಲ್ಲವಂತೆ.

ಮಂಕಾದರು ವೆಂಕಟ್

ತಾಯಿ ತೀರಿಕೊಂಡ ನಂತರ ವೆಂಕಟ್ ತೀರಾ ಮಂಕಾಗಿಬಿಟ್ಟರು. ತಮ್ಮ ಮನಸ್ಸಿನ ನೋವನ್ನ ಯಾರೊಂದಿಗೂ ಹಂಚಿಕೊಳ್ಳುತ್ತಿರಲಿಲ್ಲ. ಅದರ ಬೆನ್ನಲ್ಲೇ 'ಹುಚ್ಚ ವೆಂಕಟ್' ಸೋಲಿನ ಆಘಾತ ಅವರ ಮನಸ್ಸಿನ ಮೇಲೆ ಗಾಢ ಪ್ರಭಾವ ಬೀರಿತು.

ಆಗಾಗ ಸಮಾಧಿಗೆ ಭೇಟಿ

ತಾಯಿ ಗೌರಮ್ಮರವರನ್ನ ಬಿಟ್ಟು ಎಂದೂ ಇರದ ವೆಂಕಟ್, ತಾಯಿ ಸಾವಿನಿಂದ ಮಾನಸಿಕವಾಗಿ ಕುಗ್ಗಿದರು. ಆಗಾಗ ತಾಯಿ ಸಮಾಧಿ ಸ್ಧಳಕ್ಕೆ ಭೇಟಿ ನೀಡುತ್ತಿದ್ದರು.

ಎಲ್ಲವನ್ನ ತಡೆದುಕೊಳ್ಳಲಿಲ್ಲ.!

ತಾಯಿ ಸಾವು ಮತ್ತು ಸಿನಿಮಾ ಸೋಲು ಸೈಲೆಂಟ್ ಆಗಿದ್ದ ವೆಂಕಟ್ ರನ್ನ ವೈಲೆಂಟ್ ಮಾಡ್ತು. ಸಿನಿಮಾ ಸೋಲಿನ ಹತಾಶೆಯನ್ನ ಅಬ್ಬರದಿಂದ ಹೊರಹಾಕಿದ ಹುಚ್ಚ ವೆಂಕಟ್ ನಂತರ ಜನಪ್ರಿಯತೆ ಗಳಿಸಿದರು.

ತಂದೆ-ತಾಯಿಗೆ ಚಪ್ಪಲಿ ಕೊಡಿಸುತ್ತಿದ್ದರು.!

ಆಗಾಗ 'ನಿಮ್ಮ ತಂದೆ-ತಾಯಿಗೆ ಚಪ್ಪಲಿ ಕೊಡಿಸಿ' ಅಂತ ಹುಚ್ಚ ವೆಂಕಟ್ ಹೇಳುವುದನ್ನ ನೀವು ಕೇಳಿದ್ದೀರಾ. ಹೇಳ್ಬೇಕಲ್ಲಾ ಅಂತ ಹುಚ್ಚ ವೆಂಕಟ್ ಹೇಳುವ ಮಾತಲ್ಲ ಇದು. ಹಬ್ಬದ ಸಮಯದಲ್ಲಿ ತಂದೆ-ತಾಯಿಗೆ ಸ್ವತಃ ಹುಚ್ಚ ವೆಂಕಟ್ ಚಪ್ಪಲಿ ಕೊಡಿಸುತ್ತಿದ್ದರು.

ಅಣ್ಣನಿಗೆ ಕಾಡುತ್ತಿರುವ ನೋವು

''ನನ್ನಿಂದ ನನ್ನ ತಮ್ಮ ಹೀಗಾದ ಅನ್ನೋ ನೋವು ನನ್ನನ್ನ ಕಾಡ್ತಿದೆ. ನಾನು ಸಿನಿಮಾದಲ್ಲಿ ಆಕ್ಟ್ ಮಾಡುವುದನ್ನ ನೋಡಿ, ವೆಂಕಟ್ ಕೂಡ ಆಸೆ ಪಟ್ಟು ಇಲ್ಲಿಗೆ ಬಂದ. ಆದ್ರೆ, ಇಲ್ಲಿ ಸೋಲನ್ನ ಸಹಿಸಿಕೊಳ್ಳುವ ಶಕ್ತಿ ಅವನಿಗೆ ಇರ್ಲಿಲ್ಲ. ನಾನು ಕೂಡ ಸಿನಿಮಾದಲ್ಲಿ ಸೋಲು ಕಂಡಿದ್ದೇನೆ. ಹೀಗಾಗಿ ನನಗೂ ಸಿನಿಮಾ ಸಹವಾಸ ಸಾಕಾಗಿದೆ'' ಅಂತಾರೆ ಹುಚ್ಚ ವೆಂಕಟ್ ಸಹೋದರ ಕುಶಾಲ್ ಬಾಬು.

ಸಹೋದರಿಯರಿಗೆ ಭೇದಭಾವ ಮಾಡಲ್ಲ

''ಎಲ್ಲಾ ಅಕ್ಕ-ತಂಗಿಯರನ್ನೂ ಒಂದೇ ತರಹ ನೋಡ್ತಾನೆ. ಯಾರಿಗೂ ಭೇದಭಾವ ಮಾಡಲ್ಲ. ಒಂದು ಕೇಳಿದ್ರೆ, ಎರಡು ತಂದು ಕೊಡ್ತಾರೆ. ಬಡವರನ್ನ ನೋಡಿದ್ರೆ ಊಟ ಹಾಕ್ತಾನೆ.'' ಅಂತ ಅವರ ಸಹೋದರಿ ಹೇಳ್ತಾರೆ.

ರಮ್ಯಾ ಬಗ್ಗೆ ಯಾರೂ ಮಾತನಾಡಲ್ಲ.!

ಹುಚ್ಚ ವೆಂಕಟ್ ಮನಸ್ಸಲ್ಲಿ ಏನೇ ನೋವಿರಬಹುದು. ಸೋಲಿನ ಹತಾಶೆ ಅವರನ್ನ ವೈಲೆಂಟ್ ಆಗುವ ಹಾಗೆ ಮಾಡಿರಬಹುದು. ಆದ್ರೆ, ನಟಿ ರಮ್ಯಾ ವಿಷಯವಾಗಿ ನಡೆದ ರಾದ್ಧಾಂತ ಯಾಕೆ? ಅದು ನಿಜವೋ, ಸುಳ್ಳೋ? ಇದಕ್ಕೆ ಮಾತ್ರ ಯಾರೂ ಉತ್ತರ ನೀಡುವುದಿಲ್ಲ. [ಲಕ್ಕಿ ಸ್ಟಾರ್ ರಮ್ಯಾ ಲವ್ ಸ್ಟೋರಿ ಬಿಚ್ಚಿಟ್ಟ ಹುಚ್ಚ ವೆಂಕಟ್.!]

English summary
YouTube Star Huccha Venkat is Sandalwood Sensation now. But What is the reason for Huccha Venkat's mad act? Read the article to know the real fact.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada